ಬೆಂಗಳೂರು.
ರಾಜ್ಯ ಬಿಜೆಪಿಯಲ್ಲಿ ಆಂತರಿಕ ಸಂಘರ್ಷ ತೀವ್ರ ಸ್ವರೂಪ ಪಡೆದುಕೊಂಡಿರುವ ಬೆನ್ನಲ್ಲೇ ಸಂಘ ಪರಿವಾರ ನಾಯಕರ ಬೆಂಬಲದೊಂದಿಗೆ ವಿಧಾನ ಪರಿಷತ್ ಸದಸ್ಯರಾಗಿರುವ ಡಾ. ಧನಂಜಯ ಸರ್ಜಿ
ಅವರ ಹೆಸರಿನಲ್ಲಿ ವಿಷ ಮಿಶ್ರಿತ ಲಡ್ಡು ರವಾನಿಸಲಾಗಿದೆ.
ಡಾ. ಧನಂಜಯ ಸರ್ಜಿ ಶಿವಮೊಗ್ಗದ ಖ್ಯಾತ ವೈದ್ಯರು ಹಾಗೂ ಅವರು ಇತ್ತೀಚಿಗಷ್ಟೇ ವಿಧಾನ ಪರಿಷತ್ತು ಪದವೀಧರ ಕ್ಷೇತ್ರದ ಚುನಾವಣೆಗೆ ಸ್ಪರ್ಧಿಸಿ ವಿಧಾನಪರಿಷತ್ ಸದಸ್ಯರಾಗಿ ಆಯ್ಕೆಯಾಗಿದ್ದಾರೆ.
ಹೊಸ ವರ್ಷಕ್ಕೆ ಶುಭಾಶಯ ಕೋರುವ ನೆಪದಲ್ಲಿ ಅವರ ಹೆಸರಲ್ಲಿ ಗಣ್ಯರಿಗೆ ಕೋರಿಯರ್ ಮೂಲಕ ವಿಷ ಮಿಶ್ರಿತ ಲಡ್ಡು ಕಳುಹಿಸಲಾಗಿದೆ. ಅದೇ ರೀತಿಯಲ್ಲಿ ಸಂಘ ಪರಿವಾರದ ನಾಯಕ ಹಾಗೂ
ರಾಷ್ಟ್ರೀಯ ಶಿಕ್ಷಣ ಸಮಿತಿ ಕಾರ್ಯದರ್ಶಿ ಎಸ್.ಎನ್.ನಾಗರಾಜ್ ಹಾಗೂ ಅಜೀವ ಸದಸ್ಯ ಡಾ. ಎಸ್.ಟಿ. ಅರವಿಂದ್ ಸೇರಿದಂತೆ ಹಲವು ಗಣ್ಯರಿಗೆ ಬುಧವಾರ ಲಡ್ಡು ಹೊಂದಿರುವ ಬಾಕ್ಸ್
ಕಳುಹಿಸಲಾಗಿದೆ.
ಶುಭಾಶಯ ಪತ್ರವನ್ನು ಹೊತ್ತ ಈ ಪಾರ್ಸಲ್ ಅನ್ನು ಧನಂಜಯ ಸರ್ಜಿ ಅವರ ಭದ್ರಾವತಿಯಿಂದ ಡಿಟಿಡಿಸಿ ಕೊರಿಯರ್ ಮೂಲಕ ಕಳುಹಿಸಲಾಗಿದೆ.
ಧನಂಜಯ ಸರ್ಚಿ ಅವರ ಹೆಸರಲ್ಲಿ ಶುಭಾಶಯ ಪತ್ರ ಇರುವುದನ್ನು ಗಮನಿಸಿದ ನಾಗರಾಜ್ ಅವರು ಅಭಿನಂದನೆ ಹೇಳಲು ಕರೆ ಮಾಡಿದ್ದಾರೆ.
ಕರೆಸ ಸ್ವೀಕರಿಸಿದ ಧನಂಜಯ ಸರ್ಜಿ ಅವರು ಆದರೆ ತಾವು ಯಾವುದೇ ಸಿಹಿ ತಿನಿಸು ಕಳುಹಿಸಿಲ್ಲ ಎಂದು ತಿಳಿಸಿದ್ದಾರೆ, ಕೂಡಲೇ ಸರ್ಜಿ ಅವರ ಆಪ್ತ ಸಹಾಯಕರು ಅದನ್ನು ಸೇವಿಸದಂತೆ ತಿಳಿಸಿ ಕೋಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಪ್ರಕರಣ ದಾಖಲಿಸಿಕೊಂಡ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಬಾಕ್ಸ್ ನಲ್ಲಿ ಇದ್ದ ಲಡ್ಡು ಕಹಿಯಾಗಿದ್ದು, ಅದರಲ್ಲಿ ಏನಾದರೂ ಮಿಶ್ರಣ ಮಾಡಿರಬಹುದೆಂಬ ಅನುಮಾನ ವ್ಯಕ್ತವಾಗಿದೆ. ಲಡ್ಡಿನ ಮಾದರಿಯನ್ನು ಎಫ್‌ಎಸ್‌ಎಲ್ ಗೆ ಕಳುಹಿಸಲಾಗಿದ್ದುಮ ತನಿಖೆ ಕೈಗೊಳ್ಳಲಾಗಿದೆ.
ವಿಧಾನ ಪರಿಷತ್ ಸದಸ್ಯರ ಹೆಸರಲ್ಲಿ ವಿಷ ಮಿಶ್ರಿತ ಲಡ್ಡು ರವಾನೆ.?
Previous Articleಧಾರವಾಡ ಮಹಾನಗರ ಪಾಲಿಕೆ ಅಸ್ಥಿತ್ವಕ್ಕೆ
Next Article ಕಾಂಗ್ರೆಸ್ ಸೇರಲು ಸಜ್ಜಾದ ಜೆಡಿಎಸ್ ಶಾಸಕರು.