ಬೆಂಗಳೂರು,ಸೆ.9-
ಕನ್ನಡ ಚಿತ್ರರಂಗದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಪಾಡು ಈಗ ಯಾರಿಗೂ ಬೇಡದಂತಾಗಿದೆ. ಅಭಿಮಾನಿಗಳ ಪಾಲಿಗೆ ಡಿ ಬಾಸ್ ಆಗಿ ವಿಜೃಂಭಿಸಿದ ನಟ ಈಗ ತನಗೆ ವಿಷ ಕೊಡಿ ಎಂದು ನ್ಯಾಯಾಧೀಶರ ಮುಂದೆ ಅಲವತ್ತುಕೊಂಡಿದ್ದಾರೆ.
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜಾಮೀನು ರದ್ದಾಗಿ ಜೈಲುವಾಸ ಅನುಭವಿಸುತ್ತಿರುವ ನಟ ದರ್ಶನ್ ಸೇರಿ ಇನ್ನಿತರ ಆರೋಪಿಗಳನ್ನು ರಾಜ್ಯದ ಇತರೆ ಕಾರಾಗೃಹಗಳಿಗೆ ವರ್ಗಾವಣೆ ಮಾಡುವಂತೆ ಪ್ರಾಸಿಕ್ಯೂಷನ್ ಸಲ್ಲಿಸಿದ್ದ ಅರ್ಜಿ ಹಾಗೂ ಹೆಚ್ಚುವರಿ ಹಾಸಿಗೆ ಹಾಗೂ ದಿಂಬು ನೀಡುವಂತೆ ದರ್ಶನ್ ಸಲ್ಲಿಸಿದ್ದ ಪ್ರತ್ಯೇಕ ಅರ್ಜಿ ವಿಚಾರಣೆ ಬೆಂಗಳೂರಿನ ನಗರದ 64ನೇ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯದಲ್ಲಿ ನಡೆಯಿತು.
ಈ ವೇಳೆ ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆಗೆ ಹಾಜರಾದ ದರ್ಶನ್ ತನಗೆ ಜೈಲಿನಲ್ಲಿ ಬದುಕಲು ಆಗುತ್ತಿಲ್ಲ ಬಿಸಿಲು ನೋಡದೆ ಹಲವಾರು ದಿನಗಳು ಕಳೆದಿವೆ.ಫಂಗಸ್ ನಿಂದಾಗಿ ಬಟ್ಟೆಗಳು ವಾಸನೆ ಬರುತ್ತಿದೆ.ನನಗೆ ಬದುಕು ಸಾಕಾಗಿದೆ ದಯವಿಟ್ಟು ವಿಷ ಕೊಡಲು ಆದೇಶ ಹೊರಡಿಸಿ ಎಂದು ಗೋಗರೆದಿದ್ದಾರೆ.
ಈ ಮನವಿಗೆ ನ್ಯಾಯಾಧೀಶರು ನೀವು ಹಾಗೆಲ್ಲ ಕೇಳಬಾರದು ನಾವು ಆ ರೀತಿಯಲ್ಲಿ ಆದೇಶ ಮಾಡಲು ಸಾಧ್ಯವಿಲ್ಲ ಎಂದು ಹೇಳಿದರು. ವಿಚಾರಣೆ ಸಮಯದಲ್ಲಿ ವಿಷ ಕೊಡಿ ಎಂದು ದರ್ಶನ್ ಮೂರು ಬಾರಿ ಬೇಡಿಕೊಂಡರೆ ಫಂಗಸ್ ಆಗಿದೆ ಎಂದು ಹಲವು ಬಾರಿ ಅಳಲು ತೋಡಿಕೊಂಡರು.
Previous ArticleDigital ಅರೆಸ್ಟ್ ನಲ್ಲಿ ಹಣ ಕಳೆದುಕೊಂಡ ಮಾಜಿ ಶಾಸಕ.
Next Article ಭದ್ರಾವತಿಯಲ್ಲಿ ಕಿಡಿಗೇಡಿಗಳ ಕಿತಾಪತಿ.