ಶಶಿತರೂರ್ ಇತ್ತೀಚೆಗೆ ಯಾಕೋ ಮೋದಿ ಭಕ್ತ ಆಗ್ತಿದ್ದಾರೆ. ಪ್ರಧಾನಿ ಅಮೆರಿಕಗೆ ಹೋಗಿ, ಟ್ರಂಪ್ ಮೆಚ್ಚುಗೆ ಪಡೆದು ಬಂದ್ರು. ಆದರೆ, ಬಿಜೆಪಿಗರಿಗಿಂತ ಮೊದಲೇ ಶಶಿ ತರೂರ್ ಮೋದಿಗೆ ಜೈಕಾರ ಹಾಕಿಬಿಟ್ರು.
ಇದೀಗ ಶಶಿ ತರೂರ್ ಸ್ವಪಕ್ಷೀಯರ ವಿರುದ್ಧವೇ ಕೆರಳಿದ್ದಾರೆ. ಕಾಂಗ್ರೆಸ್ಗೆ ನಾನು ಬೇಡವಾದರೆ ಹೇಳಿಬಿಡಿ. ನನಗೆ ಬೇರೆ ಬೇರೆ ಆಯ್ಕೆಗಳಿವೆ ಎಂದಿದ್ದಾರೆ.
ಶಶಿ ತರೂರ್ ಕೇರಳದ ಪ್ರಬಲ ರಾಜಕಾರಣಿ. ಪಕ್ಷ ಬಲಕ್ಕಿಂತ ಸ್ವಂತ ಬಲವನ್ನೇ ನಂಬಿರೋ ನಾಯಕ. ಅದೇ ಕಾರಣಕ್ಕೆ ತಿರುವನಂತಪುರದಿಂದ ನಾಲ್ಕು ಬಾರಿ ಗೆದ್ದು ಲೋಕಸಭೆ ಪ್ರವೇಶಿಸಿದ್ದಾರೆ. ಆದರೂ, ಶಶಿಗೆ ಕಾಂಗ್ರೆಸ್ನಲ್ಲಿ ಸೂಕ್ತ ಸ್ಥಾನಮಾನವಿಲ್ಲ. ಈ ಹಿಂದೆಯೇ ಶಶಿ ತರೂರ್ ಅಕ್ಷರಶಃ ಬಂಡೆದ್ದಿದ್ರು. ಜಿ23 ನಾಯಕರಲ್ಲಿ ಶಶಿ ತರೂರ್ ಕೂಡಾ ಒಬ್ಬರು. ರಾಹುಲ್ ಗಾಂಧಿ ನಾಯಕತ್ವಕ್ಕೆ ಪರೋಕ್ಷ ವಿರೋಧಿಸಿದ್ರು. ಕೊನೆಗೆ ಗುಲಾಂ ನಬಿ ಆಜಾದ್ ಪಕ್ಷವನ್ನೇ ಬಿಟ್ರು. ಇದೀಗ ಶಶಿ ತರೂರ್ಗೆ ಬಿಜೆಪಿ ಗಾಳ ಹಾಕಿದೆ ಎನ್ನಲಾಗ್ತಿದೆ. ಕೇರಳದಲ್ಲಿ ತರೂರ್ ನೇತೃತ್ವದಲ್ಲಿ ಮೋದಿ ಪಕ್ಷ ಕಟ್ತಾರಾ ಅನ್ನೋ ಪ್ರಶ್ನೆ ಹುಟ್ಟಿಕೊಂಡಿದೆ.

