ಶಿವಮೊಗ್ಗ,ಆ.22-
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರ ಪತ್ರ ಮೃಣಾಲ್ ಹೆಬ್ಬಾಳ್ಕರ್ ಪತ್ನಿಯ ಸೋದರ ಹಾಗೂ ಭದ್ರಾವತಿ ಶಾಸಕ ಬಿ.ಕೆ ಸಂಗಮೇಶ್ವರ ಅವರ ಪುತ್ರ ಬಸವೇಶ್ ಹತ್ಯೆಗೆ ಸ್ಕೆಚ್ ಹಾಕಲಾಗಿದೆ
ಕಾಂಗ್ರೆಸ್ ಕಾರ್ಯಕರ್ತನು ಆಗಿರುವ ಬಸವೇಶ್ ಹತ್ಯೆಗೆ ಜೈಲಿನಿಂದಲೇ ಸಂಚು ನಡೆಸಿದ್ದು, ಸ್ವಲ್ಪದರಲ್ಲೇ ಅವರು ಪಾರಾಗಿದ್ದಾರೆ.
ಹತ್ಯೆಗೆ ಯತ್ನಿಸಿದ ಆರೋಪಿಗಳ ವಿರುದ್ಧ ಭದ್ರಾವತಿಯ ಹಳೆ ನಗರ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.
ಬಂಧಿತರನ್ನು ಡಿಚ್ಚಿ ಮುಬಾರಕ್, ಟಿಪ್ಪು ಎಂದು ಗುರುತಿಸಲಾಗಿದೆ ಇವರ ಜೊತೆ ಇತರೆ ನಾಲ್ವರ ವಿರುದ್ಧ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ. ಇವರು ಜೈಲಿನಿಂದಲೇ ಸಂಚು ರೂಪಿಸಿದ್ದ ಕುರಿತು ಆರೋಪವಿದೆ.
ಮುಬಾರಕ್ ಅಲಿಯಾಸ್ ಡಿಚ್ಚಿ ಮುಬಾರಕ್ ಜೈಲಿನಿಂದ ಭದ್ರಾವತಿಯ ಟಿಪ್ಪು ಎಂಬುವನಿಗೆ ಕರೆ ಮಾಡಿ ಸುಫಾರಿ ನೀಡಿದ್ದ.
ಅದರಂತೆ ಟಿಪ್ಪು ಇತರ ನಾಲ್ವರನ್ನು ಕಳುಹಿಸಿ ಭದ್ರಾವತಿಯ ಗಾಂಧಿ ಸರ್ಕಲ್ ಬಳಿ ಬಸವೇಶ್ ಬರುತ್ತಾನೆ ಅವರನ್ನು ಹತ್ಯೆ ಮಾಡುವಂತೆ ಸೂಚಿಸಿ ಸುಫಾರಿ ನೀಡಿದ್ದ ಎನ್ನಲಾಗಿದೆ.
ಅದಂತೆ ಸುಪಾರಿ ಪಡೆದಿದ್ದ ನಾಲ್ವರು ರಂಗಪ್ಪ ವೃತ್ತದ ಬಳಿ ಬಂದು ಬಸವೇಶ್ ಆಪ್ತನಿಗೆ ಬಸವೇಶ್ವರ್ ಎಲ್ಲಿದ್ದಾರೆ ಎಂದು ಕೇಳಿದ್ದಾರೆ. ಅದಕ್ಕೆ ಅವರು ತಮಗೆ ಮಾಹಿತಿ ಇಲ್ಲ ಎಂದಿದ್ದಾರೆ. ಇದಾದ ಬಳಿಕ ಆ ನಾಲ್ವರು ಮೊಬೈಲ್ ನಲ್ಲಿ ಯಾರೊಂದಿಗೂ ಮಾತನಾಡುತ್ತಾ ಬಸವೇಶ್ ಇಲ್ಲಿ ಇಲ್ಲ ಹಾಗಾಗಿ ಅವರನ್ನು ಎಲ್ಲಿ ಮುಗಿಸಬೇಕು ಎಂದು ಕೇಳಿದ್ದಾರೆ ಇದನ್ನು ಕೇಳಿಸಿಕೊಂಡ ಬಸವೇಶ್ ಆಪ್ತ ತಕ್ಷಣವೇ ಪೊಲೀಸರ ಗಮನಕ್ಕೆ ತಂದಿದ್ದಾರೆ
ತಕ್ಷಣವೇ ಕಾರ್ಯಾಚರಣೆಗೆ ಇಳಿದ ಭದ್ರಾವತಿ ಹಳೆನಗರ ಪೊಲೀಸರು ಕಾರಿನೊಂದಿಗೆ ನಾಲ್ವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಹತ್ಯೆಗೆ ಸುಫಾರಿ ನೀಡಿದ್ದ ಪ್ರಕರಣ ಬೆಳಕಿಗೆ ಬಂದಿದೆ.
Previous Articleದಳಪತಿ ವಿಜಯ್ ಪಕ್ಷದ ಹೆಸರು ಗೊತ್ತಾ.
Next Article ಲೋಕಾಯುಕ್ತ ತನಿಖೆ ಎದುರಿಸಿದ ಶಿವಕುಮಾರ್.