ಬೆಂಗಳೂರು,ಆ.15:
ಸ್ವಾತಂತ್ರ್ಯ ದಿನೋತ್ಸವದಂದು ನಾನು ಪ್ರಜಾಪ್ರಭುತ್ವ ಉಳಿಸುತ್ತೇನೆ, ಮತಗಳನ್ನು ಕಾಪಾಡುತ್ತೇನೆ ಹಾಗೂ ಸರ್ವಾಧಿಕಾರ ಹೊಡೆದೋಡಿಸಿ ಪ್ರಜಾಪ್ರಭುತ್ವ ಉಳಿಸುತ್ತೇವೆ ಎಂದು ಪ್ರಮಾಣ ಮಾಡುವಂತೆ ಪಕ್ಷದ ಕಾರ್ಯಕರ್ತರಿಗೆ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಕರೆ ನೀಡಿದ್ದಾರೆ.
ಪಕ್ಷದ ಕಚೇರಿಯಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ದೇಶದಲ್ಲೇ ಮೊದಲ ಸ್ವಾತಂತ್ರ್ಯ ಹೋರಾಟ ಶುರುವಾಗಿದ್ದು ನಮ್ಮ ಕರ್ನಾಟಕದಿಂದಲೇ. ಹಾಗಾಗಿ, ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಪಕ್ಷ ಕಾಂಗ್ರೆಸ್ ಎಂದು ಎಲ್ಲರಿಗೂ ತಿಳಿಸಬೇಕಾಗಿದೆ ಎಂದರು.
ದೇಶಕ್ಕಾಗಿತನು ಮನು ಧನ ಅರ್ಪಿಸಿದವರು ಕಾಂಗ್ರೆಸ್ ನವರು ಮಾತ್ರ. ಕಾಂಗ್ರೆಸ್ ಕೊಡುಗೆ ಏನು ಎಂಬುದನ್ನು ವಿಪಕ್ಷದವರು ಹಲವು ಸಲ ಮಾತಾಡ್ತಾರೆ. ದೇಶಕ್ಕೆ ಧ್ವಜವನ್ನು ನೀಡಿದ್ದೇ ಕಾಂಗ್ರೆಸ್ ಎಂಬುದನ್ನೂ ಮರೆತಿದ್ದಾರೆ ಎಂದು ಹೇಳಿದರು.
ಎಲ್ಲಿಯವರೆಗೆ ನಾವು ಗಟ್ಟಿಯಾಗಿ ಮಾತಾಡುವುದಿಲ್ಲವೋ ಅಲ್ಲಿಯವರೆಗೆ ದೇಶದ್ರೋಹಿಗಳು ನಮ್ಮನ್ನು ಟೀಕಿಸುತ್ತಾರೆ. ರಾಜಕೀಯ ಮೋಸಗಾರರನ್ನು ನಾವು ವಿರೋಧಿಸಲೇಬೇಕು. ಮತಗಳ್ಳತನ ಓಟ್ ಚೋರಿ ದೇಶದಲ್ಲಿ ಆಗುತ್ತಿದೆ. ಇದನ್ನು ಬಹಿರಂಗಪಡಿಸಿ ದೇಶಕ್ಕೆ ಹೊಸ ಸಂದೇಶ ನೀಡಿದ್ದೇವೆ ಎಂದು ತಿಳಿಸಿದರು.
ಮಾನವೀಯತೆಯ ಸ್ವಾತಂತ್ರ್ಯ ವನ್ನು, ಕಾನೂನಾತ್ಮಕ ಸ್ವಾತಂತ್ರ್ಯ ವೈಯಕ್ತಿಕ, ಧಾರ್ಮಿಕ ಸ್ವಾತಂತ್ರ್ಯ ಸಾಮಾಜಿಕ, ಆರ್ಥಿಕ, ರಾಜಕೀಯ ಸ್ವಾತಂತ್ರ್ಯವನ್ನು ನಾವು ದೇಶಕ್ಕೆ ಕೊಟ್ಟಿದ್ದೇವೆ. ದೇಶಕ್ಕೆ ಕಾಂಗ್ರೆಸ್ ಪಕ್ಷದ ಕೂಡುಗೆ ಇದೆ. ರಾಜಕೀಯ ಸ್ವಾತಂತ್ರ್ಯದ ಬಗ್ಗೆ ಅನೇಕರು ಮೋಸ ಮಾಡಿದ್ದಾರೆ. ಅಂಥವರನ್ನು ಸಮಾಜ ಘಾತುಕತರು ಎಂದೇ ಪರಿಗಣಿಸಬೇಕು ಎಂದು ಹೇಳಿದರು.