ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ವಿರಾಟ್ ಕೊಹ್ಲಿ ವಿಶ್ವದಾಖಲೆ ಬರೆದಿದ್ದಾರೆ. 14 ರನ್‌ಗಳಿಸುವ ಮೂಲಕ ಏಕದಿನ ಕ್ರಿಕೆಟ್‌ನಲ್ಲಿ 14 ಸಾವಿರ ರನ್ ಪೂರೈಸಿದ ಎಲೈಟ್ ಲಿಸ್ಟ್ಗೆ ಸೇರಿದ್ದಾರೆ.
ಏಕದಿನ ಕ್ರಿಕೆಟ್‌ನಲ್ಲಿ ಇಬ್ಬರು ಆಟಗಾರರು ಮಾತ್ರ 14 ಸಾವಿರ ರನ್ ಬಾರಿಸಿದ್ದಾರೆ. ಸಚಿನ್ ತೆಂಡೂಲ್ಕರ್ 18 ಸಾವಿರದ 426 ರನ್ ಬಾರಿಸಿದ್ರೆ, ಎರಡನೇ ಸ್ಥಾನದಲ್ಲಿರೋ ಕುಮಾರ್ ಸಂಗಕ್ಕಾರ 14 ಸಾವಿರದ 234 ರನ್ ಬಾರಿಸಿದ್ದಾರೆ.
ಕೊಹ್ಲಿ 299 ಏಕದಿನ ಪಂದ್ಯಗಳ 286ನೇ ಇನಿಂಗ್ಸ್‌ನಲ್ಲಿ 57 ಪಾಯಿಂಟ್ 78ರ ಸರಾಸರಿಯಲ್ಲಿ 14000 ರನ್ ಕಲೆ ಹಾಕಿದ್ದಾರೆ. ಇದರಲ್ಲಿ 50 ಶತಕ ಹಾಗೂ 73 ಅರ್ಧಶತಕಗಳು ಸೇರಿವೆ