ಚನ್ನಗಿರಿ
ಸೇವೆ, ಅರಿವು, ಮತ್ತು ಜಾಗೃತಿಯ ಸಂಕಲ್ಪ ದೊಂದಿಗೆ ಜನಸೇವೆ ಮಾಡುತ್ತಿರುವ ಸ್ವಯಂ ಸೇವಾ ಸಂಘಟನೆ ಸಮೂಹ ಶಕ್ತಿಯ ಕಾರ್ಯವೈಖರಿಗೆ ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಗೊಪ್ಪೇನಹಳ್ಳಿ ಗ್ರಾಮಸ್ಥರು ಬಹುಪರಾಕ್ ಹೇಳಿದರು.
ಜನಸಾಮಾನ್ಯರಲ್ಲಿ ತಮ್ಮ ಹಕ್ಕುಗಳು, ಸಾಮಾಜಿಕ ಜವಾಬ್ದಾರಿಯ ತಿಳುವಳಿಕೆ ಹಾಗೂ ರಾಜಕೀಯ ಪ್ರಜ್ಞೆ ಮೂಡಿಸುತ್ತಿರುವ ಸ್ವಯಂ ಸೇವಾ ಸಂಘಟನೆ ಸಮೂಹ ಶಕ್ತಿ ಇತ್ತೀಚೆಗೆ ಹಲವಾರು ಜನೋಪಕಾರಿ ಕಾರ್ಯಕ್ರಮಗಳ ಮೂಲಕ ಜನರ ಗಮನ ಸೆಳೆಯುತ್ತಿದೆ.
ಅದರ ಮುಂದುವರೆದ ಭಾಗವಾಗಿ ಸಮೂಹ ಶಕ್ತಿ ಸಂಘಟನೆ, ಚನ್ನಗಿರಿ ತಾಲೂಕಿನ ಗೋಪೇನಹಳ್ಳಿ ಗ್ರಾಮ ಪಂಚಾಯಿತಿ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರದ ನೆರವಿನೊಂದಿಗೆ ಗೋಪ್ಪೇನಹಳ್ಳಿಯಲ್ಲಿ ಉಚಿತ ಆರೋಗ್ಯ ಶಿಬಿರ ಹಾಗೂ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಏರ್ಪಡಿಸಿತ್ತು.
ಶಿವಮೊಗ್ಗ ಸರ್ಜಿ ಆಸ್ಪತ್ರೆಯ ಸಹಯೋಗದಲ್ಲಿ ಏರ್ಪಡಿಸಿದ್ದ ಈ ಶಿಬಿರದಲ್ಲಿ ಕೀಲು ಮತ್ತು ಮೂಳೆ ತಜ್ಞರಾದ ಡಾ.ಮಂಜುನಾಥ್, ಸ್ತ್ರೀರೋಗ ತಜ್ಞರಾದ ಡಾ. ಶಾಂತಲಾ, ಮಕ್ಕಳ ತಜ್ಞರಾದ ಡಾ.ಕೋಮಲಾ ಮತ್ತು ಜನರಲ್ ಫಿಸಿಜೀಷಿಯನ್ ಡಾ. ಶೂನ್ಯ ಸಂಪತ್ ಪಾಲ್ಗೊಂಡು ನೂರಾರು ಮಂದಿಯನ್ನು ತಪಾಸಣೆಗೆ ಒಳಪಡಿಸಿ ಆರೋಗ್ಯ ಸಲಹೆ ನೀಡಿದರು.
ಇದೆ ವೇಳೆ ಗೊಪ್ಪೇನಹಳ್ಳಿ,ಕಂಚಿಗನಹಳ್, ಹಾಗೂ ಮಾಲಹಳು ಗ್ರಾಮದ ಅನೇಕರು ಸ್ವಯಂ ಪ್ರೇರಿತ ರಕ್ತದಾನ ಶೀಘ್ರದಲ್ಲಿ ಪಾಲ್ಗೊಂಡು ರಕ್ತದಾನ ಮಾಡುವ ಮೂಲಕ ಮೆಚ್ಚುಗೆಗೆ ಪಾತ್ರರಾದರು.
ಈ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಚೆನ್ನಗಿರಿ ತಾಲೂಕು ಆರೋಗ್ಯ ಅಧಿಕಾರಿಡಾ. ಶಿವಕುಮಾರ್
ರಕ್ತದಾನದ ಮಹತ್ವವನ್ನು ಒತ್ತಿ ಹೇಳಿದರು ಹಾಗೆಯೇ ಗ್ರಾಮದ ಸ್ವಚ್ಛತೆಯ ಬಗ್ಗೆ ಪಾಠ ಮಾಡಿದ ಅವರು ಸಮೂಹಕ್ತಿಯ ಕಾರ್ಯವನ್ನು ಶ್ಲಾಘಿಸಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಗೋಪ್ಪೇನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಶ್ರೀಮತಿ ವಿದ್ಯಾ ಅವರು ರಕ್ತದಾನದ ಮಹತ್ವವನ್ನು ವಿವರಿಸಿದರು ಹಾಗೆಯೇ ತಮ್ಮ ಸುತ್ತ ಮುತ್ತಲಿನ ಗ್ರಾಮದಲ್ಲಿ ಸಮೂಹ ಶಕ್ತಿ ಸಂಘಟನೆಯ ಸದಸ್ಯರು ಮಾಡುತ್ತಿರುವ ಜನೋಪಕಾರಿ ಕಾರ್ಯಗಳಿಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಸಮಾರಂಭದಲ್ಲಿ ಪಂಚಾಯತ್ ಅಧ್ಯಕ್ಷರುಗಳಾದ ಶ್ರೀಮತಿ ದೇವಮ್ಮ, ಶ್ರೀಮತಿ ಸರೋಜಮ್ಮ ಗ್ರಾಮ ಪಂಚಾಯತ್ ಸದಸ್ಯರಾದ ಶ್ರೀಮತಿ ಉಮಾದೇವಿ ಶ್ರೀಮತಿ ಸಂಗೀತ ಸಿದ್ದೇಶ್ ಜಿ ಎಸ್ ಭರತ್ ಜಿ ಯು ಗಿರೀಶ್ ಕುಮಾರ್ ಚೇತನ್ ಕುಮಾರ್ ಪಿಡಿಒ ಭಾಗವಹಿಸಿದ್ದರು.
ಪ್ರಾಥಮಿಕ ಆರೋಗ್ಯ ಕೇಂದ್ರ ಗೊಪ್ಪೇನಹಳ್ಳಿಯ ಡಾ. ಹನುಮೇಶ್ , ಸಮೂಹ ಶಕ್ತಿ ರಾಜ್ಯ ಸಂಘಟನಾ ಕಾರ್ಯದರ್ಶಿ ಕೆ.ಇ .ರವಿ
ಎಂ.ಇ .ಶಿವಕುಮಾರ್ ,ಹನುಮಂತಪ್ಪ ಸತೀಶ್ ಬಾಬು ಟಿ ಮಹೇಶ್ ಕುಮಾರಸ್ವಾಮಿ ಹಾಗೂ ಪ್ರಾಥಮಿಕ ಆರೋಗ್ಯಕೇಂದ್ರದ ಸಿಬ್ಬಂದಿ ಅಶೋಕ್.ಎಂ ವಿನಯ್.ಜಿ ಮತ್ತು ಆಶಾ ಕಾರ್ಯಕರ್ತೆಯರು ಭಾಗವಹಿಸಿದ್ದರು.
Previous ArticleE Dಪತ್ತೆ ಹಚ್ಚಿದ ಕೋಕನಟ್ ಕೋಡ್ ಏನು ಗೊತ್ತಾ
Next Article ಸೈಫ್ ಅಲಿ ಖಾನ್ ಗೆ ಚಾಕು ಹಾಕಿದ್ದು ಯಾರು ಗೊತ್ತಾ