ಗುತ್ತಿಗೆದಾರ ಸಂತೋಷ್ ಆತ್ಮಹತ್ಯೆ ಪ್ರಕರಣದಲ್ಲಿ ಸಿಲುಕಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಈಶ್ವರಪ್ಪ ಅವರನ್ನು ಬಂಧಿಸಬೇಕು ಹಾಗೂ ಸರ್ಕಾರದ ವಿರುದ್ಧದ ಕಮೀಷನ್ ಆರೋಪದ ಬಗ್ಗೆ ನಡೆಯುತ್ತಿರುವ ಕಾಂಗ್ರೆಸ್ ಜನಾಂದೋಲನ ಯಾತ್ರೆ ಹಲವು ರೀತಿಯಿಂದ ಗಮನ ಸೆಳೆಯುತ್ತಿದೆ.
ಅದರಲ್ಲೂ ಚಾಮರಾಜನಗರದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಭಾಗವಹಿಸಿರುವ ಪ್ರತಿಭಟನಾ ಮೆರವಣಿಗೆಯಂತೂ ಕಾಂಗ್ರೆಸ್ ಕಾರ್ಯಕರ್ತರ ಉತ್ಸಾಹವನ್ನು ನೂರ್ಮಡಿಗೊಳಿಸಿತು. ಅಷ್ಟೇ ಅಲ್ಲ ಈ ಪ್ರತಿಭಟನೆಯಲ್ಲಿ ಎಲ್ಲರ ಗಮನ ಸೆಳೆಯುವ ಘಟನೆಯೊಂದು ನಡೆಯಿತು ಅದೇನಂದರೆ ಈ ಮೆರವಣಿಗೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಜೊತೆ ಸಾಗಿಬಂದ ಟಗರು ಮತ್ತು ಅದರ ತಲೆ ಮೇಲೆ ಹಾಕಿರುವ ನಾಮಫಲಕ ಎಲ್ಲರ ಗಮನ ಸೆಳೆಯಿತು.
ಕೊಳ್ಳೇಗಾಲ ತಾಲೂಕಿನ ಅಣಗಳ್ಳಿ ಬಸವರಾಜು ಎಂಬ ಕಾಂಗ್ರೆಸ್ ಕಾರ್ಯಕರ್ತ ಪ್ರತಿಭಟನಾ ಮೆರವಣಿಗೆಗೆ ಟಗರೊಂದನ್ನು ತಂದಿದ್ದಾರೆ. ಆ ಟಗರಿನ ತಲೆ ಮೇಲೆ “ಸಿದ್ದಣ್ಣ ಬಿಜೆಪಿಗೆ ಗುದ್ದಣ್ಣ” ಅಂತ ಬರೆದಿರುವ ನಾಮಫಲಕ ಹಾಕಿದ್ದಾರೆ. ಪ್ರವಾಸಿ ಮಂದಿರದಿಂದ ಸಿದ್ದರಾಮಯ್ಯ ನೇತೃತ್ವದಲ್ಲಿ ಬರುತ್ತಿದ್ದ ಪ್ರತಿಭಟನೆಯಲ್ಲಿ ಟಗರು ಕೂಡಾ ಹೆಜ್ಜೆ ಹಾಕುತ್ತಿದ್ದು ಎಲ್ಲರ ಗಮನ ಸೆಳೆದಿದೆ