ವಾಷಿಂಗ್ಟನ್.
ಅಮೆರಿಕಾದಲ್ಲಿ ನೆಲೆಸಿರುವ ಭಾರತೀಯ ಮೂಲದ ಗರ್ಭಿಣಿಯರು ಅವಧಿ ಮುನ್ನವೇ ಸಿಸೇರಿಯನ್ ಮೂಲಕ ಹೆರಿಗೆ ಮಾಡಿಸಿಕೊಳ್ಳಲು ಮುಗಿಬೀಳುತ್ತಿದ್ದಾರೆ. ಏಳು ತಿಂಗಳ ಗರ್ಭಿಣಿಯರೂ ಕೂಡ ಸಿಸೇರಿಯನ್ ಮೊರೆ ಹೋಗಿದ್ದಾರೆ.
ಅವಧಿಗೆ ಮುನ್ನವೇ ಹೆರಿಗೆ ಮಾಡಿಸಿಕೊಳ್ಳಲು ಬರುತ್ತಿರುವ ಗರ್ಭಿಣಿಯರಿಗೆ ನಿಮ್ಮ ನಿರ್ಧಾರ ಅತ್ಯಂತ ಅಪಾಯಕಾರಿ ಎಂದು ವೈದ್ಯರು ಎಚ್ಚರಿಸಿದರು ಅದನ್ನು ಕಿವಿಗೆ ಹಾಕಿಕೊಳ್ಳದೆ ಆಸ್ಪತ್ರೆಯ ಬಾಗಿಲು ಬಡಿಯುತ್ತಿದ್ದಾರೆ.
ಇದಕ್ಕೆ ಪ್ರಮುಖ ಕಾರಣ ಅಮೆರಿಕದ ನೂತನ ಅಧ್ಯಕ್ಷ ಡೊನಾಲ್ಡ್ ಟ್ರಂಪ್.
ಯಾರಾದರೂ ಅಮೆರಿಕದಲ್ಲಿ ಜನಿಸಿದರೆ ಅವರು ಅಮೆರಿಕದ ಪ್ರಜೆ. ಇಲ್ಲಿ ಪೋಷಕರ ವಲಸೆ ಸ್ಥಿತಿಗತಿ ಪರಿಗಣಿಸಲಾಗುವುದಿಲ್ಲ. ಉದಾಹರಣೆಗೆ, ಪ್ರವಾಸಿ ವೀಸಾ ಅಥವಾ ಇನ್ಯಾವುದೇ ರೀತಿಯ ವೀಸಾ ಇರುವ ಭಾರತೀಯ ವ್ಯಕ್ತಿ ಅಮೆರಿಕದಲ್ಲಿ ಮಗುವಿಗೆ ಜನ್ಮ ನೀಡಿದರೆ, ಆ ಮಗು ಅಧಿಕೃತವಾಗಿ ಅಮೆರಿಕದ ಪ್ರಜೆ. ಅದರ ಪೋಷಕರನ್ನು ನಾಗರಿಕನ ಪೋಷಕರೆಂದು ಪರಿಗಣಿಸಲಾಗುತ್ತದೆ.
ಇದು ಅಮೆರಿಕಾದ ಸಂವಿಧಾನದಲ್ಲೇ ಅಡಕವಾಗಿದ್ದು, 14ನೇ ತಿದ್ದುಪಡಿ ಮೂಲಕ ಈ ಪೌರತ್ವದ ಹಕ್ಕು ನೀಡಲಾಗಿದೆ. ಟ್ರಂಪ್ ಹಾಗೂ ಬೆಂಬಲಿಗರಿಗೆ ಈ ತಿದ್ದುಪಡಿಯ ಬಗ್ಗೆ ಅಸಮಾಧಾನ ಇದ್ದು, ಪೌರತ್ವ ಪಡೆಯಲು ಕಠಿಣ ನಿಯಮ ಇರಬೇಕು ಎನ್ನುವುದು ಅವರ ನಿಲುವು.
ಹುಟ್ಟಿನಿಂದಾಗಿ ಸಿಗುವ ಪೌರತ್ವ’ ಹಕ್ಕು ನೀತಿಯನ್ನು ಅಂತ್ಯಗೊಳಿಸುವ ಕಾನೂನು ರದ್ದಿಗೆ ಅಧಿಕಾರ ಸ್ವೀಕರಿಸಿದ ಕೂಡಲೇ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಹಿ ಹಾಕಿದ್ದಾರೆ.
ಟ್ರಂಪ್ ಅವರ ಹೊಸ ಆದೇಶದಿಂದಾಗಿ, ಹುಟ್ಟಿನಿಂದಲೇ ಸ್ವಯಂಚಾಲಿತವಾಗಿ ಪೌರತ್ವ ಸಿಗುವುದಿಲ್ಲ.
ನೂತನ ನಿಯಮ ಜಾರಿಗೆ ಬರಲು ಇನ್ನೂ ಒಂದು ತಿಂಗಳ ಸಮಯ ಅವಕಾಶವಿದೆ. ಒಂದು ತಿಂಗಳಾದ ಬಳಿಕ ಜನಿಸಿದ ಮಕ್ಕಳಿಗೆ ಅಮೆರಿಕದ ಪೌರತ್ವ ಸಿಗುವುದಿಲ್ಲ ಹೀಗಾಗಿ ಗರ್ಭಿಣಿಯರು ಒಂದು ತಿಂಗಳಿಗೂ ಮೊದಲೇ ತಮ್ಮ ಮಕ್ಕಳನ್ನು ಹೆರುವ ಮೂಲಕ ಅವರನ್ನು ಅಮೆರಿಕದ ಪ್ರಜೆಗಳನ್ನಾಗಿಸಲು ಹೊರಟಿದ್ದಾರೆ ಹೀಗಾಗಿ ಇವರೆಲ್ಲರೂ ಸಿಸೇರಿಯನ್ ಹೆರಿಗೆಯ ಮೊರೆ ಹೊಕ್ಕಿದ್ದಾರೆ