ಚೆನ್ನೈ.
ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ಫ್ಯಾನ್ ಇಂಡಿಯಾ ಸಿನಿಮಾ ʼಜೈಲರ್ʼ ಬಾಕ್ಸ್ ಆಫೀಸಿನಲ್ಲಿ ದೊಡ್ಡ ಸದ್ದು ಮಾಡಿತ್ತು
ಸೂಪರ್ ಸ್ಟಾರ್ ರಜಿನಿಕಾಂತ್ ಜೊತೆಗೆ ಸೌತ್ ಹಾಗೂ ಬಿಟೌನ್‌ನ ದೊಡ್ಡ ಸ್ಟಾರ್ ಗಳು ಈ ಸಿನಿಮಾದಲ್ಲಿ ಅಭಿಮಾನಿಗಳ ಸಿಳ್ಳೆ ಗಿಟ್ಟಿಸಿದ್ದರು.
ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್,ಮಳಯಾಳಂ ಸೂಪರ್ ಸ್ಟಾರ್ ಮೋಹನ್ ಲಾಲ್, ಬಾಲಿವುಡ್ ನಜಾಕಿಶ್ರಾಫ್ ಅತಿಥಿ ಪಾತ್ರಗಳಲ್ಲಿ ನಟಿಸಿದ್ದರು.
ರಜಿನಿಕಾಂತ್ ಜೈಲರ್ ʼಮುತ್ತುವೇಲ್ ಪಾಂಡಿಯನ್ʼ ಆಗಿ ಕಾಣಿಸಿಕೊಂಡಿದ್ದರು. ಇದರಲ್ಲಿ ʼನರಸಿಂಹʼ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗಿತ್ತು.
ಇದೀಗ ಜೈಲರ್ -2 ಸಿನಿಮಾ ಸೆಟ್ಟೇರಲಿದೆ ಇದರಲ್ಲಿ ಮತ್ತೆ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್
ಕಾಣಿಸಿಕೊಳ್ಳಲಿದ್ದಾರೆ. ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ʼಜೈಲರ್ -2ʼಗಾಗಿ 14 ದಿನಗಳ ಕಾಲ್ ಶೀಟ್ ನೀಡಿದ್ದಾರೆ ಎಂದು ಗೊತ್ತಾಗಿದೆ.
Previous Articleಅನ್ನಭಾಗ್ಯ ಕಾರ್ಡ್ ಗೆ ದುಡ್ಡು ಕೊಡುವುದಿಲ್ಲ
Next Article ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಇಲ್ಲ -ಯಾಕೆ ಗೊತ್ತಾ?