ಚಾಮರಾಜನಗರ,ಜ.2-ಮಗುವಿಗೆ ಸೌತೆಕಾಯಿ ತಿನ್ನಿಸಿದ ವಿಚಾರದಲ್ಲಿ ರೊಚ್ಚಿಗೆದ್ದ ವ್ಯಕ್ತಿಯೊಬ್ಬ ಕುಟುಂಬದ ಮೂವರಿಗೆ ಮನಬಂದಂತೆ ಚಾಕುವಿನಿಂದ ಇರಿದ ಘಟನೆ ಕೊಳ್ಳೇಗಾಲದ ಈದ್ಗಾ ಮೊಹಲ್ಲಾದಲ್ಲಿ
ನಡೆದಿದೆ.
ಚಾಕು ಇರಿತಕ್ಕೊಳಗಾದ ಐಮಾನ್ ಬಾನು(26) ಸ್ಥಳದಲ್ಲೇ ಮೃತಪಟ್ಟರೆ, ಸೈಯದ್(60) ಮತ್ತು ತಸ್ಲಿಮಾ ತಾಜ್(25) ಗಂಭೀರವಾಗಿ ಗಾಯಗೊಂಡು ಸಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಜ್ವರ ಬಂದಿದ್ದ ಮಗುವಿಗೆ ಸೌತೆಕಾಯಿ ತಿನ್ನಿಸಬೇಡ ಎಂದಿದ್ದೇ ಕಲಹಕ್ಕೆ ಕಾರಣ. ಇದರಿಂದ ಕೋಪಗೊಂಡ ವ್ಯಕ್ತಿ ಎಲ್ಲರಿಗೂ ಚಾಕುವಿನಿಂದ ಇರಿದಿರುವುದಾಗಿ ಪೊಲೀಸರ ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ. ಚಾಕು ಇರಿದ ಫರ್ಮಾನ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ಫರ್ಮಾನ್ ತನ್ನ ಅಣ್ಣನ ಮಗಳಿಗೆ ಸೌತೆಕಾಯಿ ತಿನ್ನಿಸುತ್ತಿದ್ದಾಗ ಸಹೋದರಿ ಐಮಾನ್ ಬಾನು, ಜ್ವರ ಬಂದಿರುವ ಮಗುವಿಗೆ ಸೌತೆಕಾಯಿ ಏಕೆ ತಿನ್ನಿಸುತ್ತಿದ್ದಿಯಾ ಎಂದು ಪ್ರಶ್ನಿಸಿದ್ದಾರೆ. ನಂತರ ಮಾತಿಗೆ ಮಾತು ಬೆಳೆದು ಐಮಾನ್ ಅವರಿಗೆ ಚಾಕುವಿನಿಂದ ಕುತ್ತಿಗೆಗೆ ಇರಿದಿದ್ದಾನೆ. ಬಳಿಕ, ತಂದೆ ಸೈಯದ್ ಮತ್ತು ಅತ್ತಿಗೆಗೂ ಇರಿದಿದ್ದಾನೆ. ಗಲಾಟೆಯಲ್ಲಿ ಸೈಯದ್ ಅವರ ಕೈ ಕೂಡಾ ಮುರಿದಿದೆ.
ಕೊಳ್ಳೇಗಾಲ ಪಟ್ಟಣ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಆರೋಪಿಯನ್ನು ಬಂಧಿಸಿ ಮುಂದಿನ ತನಿಖೆಯನ್ನು ಕೈಗೊಂಡಿದ್ದಾರೆ.
Previous Articleಅಭಿಮಾನಿಗಳಿಗೆ ಶಿವರಾಜ್ ಕುಮಾರ್ ಸಂದೇಶ
Next Article ಐಶ್ವರ್ಯಾ ಗೌಡ ವಂಚನೆಯ ಮತ್ತೊಂದು ಪುರಾಣ


1 ಟಿಪ್ಪಣಿ
?Brindemos por cada experto en tacticas !
Los casino sin registro actualizan promociones diarias con giros gratis y bonos. Siempre hay nuevas oportunidades para maximizar tus ganancias. El casino sin dni mantiene la emociГіn viva constantemente.
Los casinos sin verificaciГіn implementan sistemas de reputaciГіn portable. Puedes transferir historial entre plataformas. En casino crypto sin kyc tu reputaciГіn te pertenece.
Encuentra un casino crypto sin kyc con juegos variados – п»їhttps://casinosinverificacion.org/
?Que la fortuna te sonria con que el destino te otorgue intensos pagos espectaculares !