ಬೆಂಗಳೂರು,ಏ.12- ಹಾಲಿನ ದರ ಏರಿಕೆಯಾದ ಬೆನ್ನಲ್ಲೇ ನಗರದಲ್ಲಿ ಹಾಲು ಕಳ್ಳರ ಹಾವಳಿ ಹೆಚ್ಚಾಗಿದ್ದು, ಕಾಮಾಕ್ಷಿಪಾಳ್ಯದ ಬಳಿ ಬೈಕ್ ನಲ್ಲಿ ಹಾಲು ಕಳ್ಳತನ ಮಾಡಿ ಪರಾರಿಯಾಗಿರುವ ಘಟನೆ ನಡೆದಿದೆ.
ಕಾಮಾಕ್ಷಿಪಾಳ್ಯ ಪೊಲೀಸ್ ಠಾಣಾ ವ್ಯಾಪ್ತಿಯ ನಂದಿನಿ ಬೂತ್ ಒಂದರಲ್ಲಿ ಹಾಲಿನ ಪ್ಯಾಕೆಟ್‌ಗಳನ್ನು ಕಳ್ಳತನ ಮಾಡುವ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಬೆಳಗಿನ ಜಾವ ಹಾಲಿನ ಕ್ರೇಟ್ ಇಳಿಸಿದ ಕೆಲವೇ ನಿಮಿಷಗಳಲ್ಲಿ ಕಳ್ಳರು ಬೆಳಗಿನ ಜಾವ ಹಾಲು ಕಳವು ಮಾಡಿ ಪರಾರಿಯಾಗಿದ್ದಾರೆ.
ಒಂದೇ ಸ್ಕೂಟರ್ ನಲ್ಲಿ ಹೆಲೈಟ್ ಇಲ್ಲದೇ ಬಂದ ಯುವಕರು ಸಂಚಾರ ನಿಯಮ ಉಲ್ಲಂಘಿಸಿದ್ದಾರೆ.
ಹಾಲು ಕಳ್ಳತನದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಕಳ್ಳರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.
Previous Articleಪೋಸ್ಟರ್ ಅಂಟಿಸಿದವರಿಗೆ ಸಿಕ್ತು ನೋಡಿ
Next Article ಬಾವಿಗೆ ಬಿದ್ದ ಆನೆಗಳು ರಕ್ಷಣೆ