ರಾಮನಗರ : ಕೇಂದ್ರ ಸರ್ಕಾರದ ಹಿಂದಿ ಏರಿಕೆ ವಿರುದ್ಧ ರಾಮನಗರದಲ್ಲಿ ಕಸ್ತೂರಿ ಕರ್ನಾಟಕ ಜನಪರವೇದಿಕೆ ಪ್ರತಿಭಟನೆ ನಡೆಸಲಾಯಿತು.
ನಗರದ ಐಜೂರು ವೃತ್ತದಲ್ಲಿ ವೇದಿಕೆಯ ರಾಜ್ಯಾಧ್ಯಕ್ಷ ರಮೇಶ್ ಗೌಡ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ ಕೇಂದ್ರ ಸರ್ಕಾರದ ವಿರುದ್ದ ವಾಗ್ಧಾಳಿ ನಡೆಸಿದರು.
ನಮ್ಮ ಕರುನಾಡು ಕನ್ನಡಾಂಬೆಯ ತವರೂರು. ಕನ್ನಡವೇ ನಮ್ಮ ಉಸಿರು. ಕನ್ನಡ ಭಾಷೆ ನಮ್ಮ ಮಾತೃ ಭಾಷೆ. ಹೀಗಿರುವಾಗ ಕೇಂದ್ರ ಸರ್ಕಾರ ಹಿಂದಿ ಭಾಷೆಯನ್ನ ಸಾರ್ವಜನಿಕರ ಮೇಲೆ ಏರಿಕೆ ಖಂಡನೀಯ. ಯಾವುದೇ ಕಾರಣಕ್ಕೂ ನಮ್ಮ ನಾಡಿನಲ್ಲಿ ಹಿಂದೆ ಭಾಷೆ ಏರಿಕೆಯನ್ನ ಸಹಿಸುವುದಿಲ್ಲ.
ಈ ಕೂಡಲೆ ನಮ್ಮ ನಾಡಿನ ಜನರ ಮೇಲೆ ಹಿಂದಿ ಭಾಷೆ ಏರಿಕೆ ಮಾಡುವುದನ್ನ ಕೈ ಬಿಡಬೇಕು.ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ವೇದಿಕೆ ರಾಜ್ಯಾಧ್ಯಕ್ಷ ರಮೇಶ್ ಗೌಡ ಎಚ್ಚರಿಸಿದರು.