ಹುಬ್ಬಳ್ಳಿ
ಹಾವೇರಿಯ ರೈತ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಪ್ರಕರಣಕ್ಕೆ ಸಂಬಂಧಿಸಿದಂತೆ ಟ್ವೀಟ್ ಮಾಡಿ ಸಂಸದ ತೇಜಸ್ವಿ ಸೂರ್ಯ ಫಜೀತಿಗೆ ಸಿಲುಕಿದ್ದಾರೆ.
ತಮ್ಮ ವಿರುದ್ಧ ದಾಖಲಾಗಿರುವ ಎಫ್ ಐಆರ್ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಅವರು ಗ್ರಾಮೀಣಾಭಿವೃದ್ಧಿ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವ ಪ್ರಿಯಾಂಕ ಖರ್ಗೆ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಪ್ರಿಯಾಂಕ ಖರ್ಗೆ ಶಾಸಕರಾದರೂ ಕ್ಷೇತ್ರದಲ್ಲಿ ಅವರಿಗೆ ಯಾವುದೇ ಕೆಲಸವಿಲ್ಲ ಅನ್ನಿಸುತ್ತದೆ. ಹುಡುಕಿ ಹುಡುಕಿ ಎಫ್.ಐ.ಆರ್ ಹಾಕಿಸುವುದೇ ಅವರು ಫುಲ್ ಟೈಮ್ ಕೆಲಸ ಮಾಡಿಕೊಂಡಿದ್ದಾರೆ. ಆದರೆ ಅವರು ಹಾಕಿರುವ ಕೇಸ್ ಗಳನ್ನು ಕೋರ್ಟ್ ಛೀಮಾರಿ ಹಾಕಿ ವಾಪಸ್ ಕಳುಹಿಸುತ್ತದೆ ಎಂದು ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜೆಪಿಸಿ ಸಮಿತಿ ಹಾವೇರಿ ಭೇಟಿ ನೀಡಿದ ಸಂದರ್ಭದಲ್ಲಿ ರೈತನ ಅಹವಾಲು ಪಡೆದಿದ್ದೆವು.ಈ ವೇಳೆ ರೈತ ಸಣ್ಣಪ್ಪ ಎಂಬುವರು ರೈತ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಕುಟುಂಬದವರು ಹೇಳಿದ್ದರು. ಅವರ ಜಮೀನಿಗೆ ವಕ್ಫ್ ಮೊಹರು ಹಾಕಲಾಗಿತ್ತು. ಇದರಿಂದ ಅವರು ನೊಂದು ಸಾವಿಗೆ
ಇದು ಮಾಧ್ಯಮದಲ್ಲಿ ಪ್ರಸಾರ ಆಗಿತ್ತು. ಇದರ ಬಗ್ಗೆ ಎಕ್ಸ್ ನಲ್ಲಿ ಟ್ವೀಟ್ ಮಾಡಿದ್ದೆ. ಇದನ್ನೇ ಇಟ್ಟುಕೊಂಡು ನನ್ನ ವಿರುದ್ಧ ಸಚಿವ ಪ್ರಿಯಾಂಕ ಖರ್ಗೆ ಅವರು ಎಫ್.ಐ.ಆರ್ ಮಾಡಿಸಿದ್ದಾರೆ ಎಂದು ಆಪಾದಿಸಿದರು
ನಾನು ಮಾಡಿದ ಟ್ವೀಟ್ ಗೆ ಹಾವೇರಿ ಎಸ್. ಪಿ. ಸ್ಪಷ್ಟನೆ ನೀಡಿ ಆ ರೀತಿಯ ಘಟನೆ ಆಗಿಲ್ಲ ಎಂದು ಮರು ಟ್ವೀಟ್ ಮಾಡಿದ್ದರು. ಕಾನೂನು ವ್ಯವಸ್ಥೆಗೆ ಗೌರವ ಇರುವುದರಿಂದ ನಾನು ತಕ್ಷಣವೇ ಆ ಟ್ವೀಟ್ ಡಿಲೀಟ್ ಮಾಡಿದೆ. ಆನಂತರ ನಾನು ಪರಿಶೀಲಿಸಿ ಹಾಕಬೇಕಿತ್ತೇನೋ ಎಂದು ಅದನ್ನು ರೀ ಟ್ವೀಟ್ ಮಾಡಿರುತ್ತೇನೆ. ಹೀಗಿದ್ದರೂ ಕೂಡ ಈ ವಿಚಾರದಲ್ಲಿ ನನ್ನನ್ನು ಮೊದಲು ಆರೋಪಿ ಹಾಗೂ ಆ ವೆಬ್ ಮಾಧ್ಯದವರನ್ನು ಎರಡನೇ ಆರೋಪಿ ಮಾಡಿದ್ದಾರೆ.ಇದಕ್ಕೆಲ್ಲಾ ಹೆದರುವುದಿಲ್ಲ ಎಂದು ಹೇಳಿದರು
ಆತ್ಮಹತ್ಯೆ ಮಾಡಿಕೊಂಡ ಕುಟುಂಬದವರು ಹಾಗೂ ಮಾಧ್ಯಮದವರು ನನ್ನನ್ನು ಸಂಪರ್ಕಿಸಿದ್ದಾರೆ. ಇದಕ್ಕೆ ಸಂಬಂಧಿಸಿದ ಪಹಣಿ ಪ್ರಿಂಟ್ ತೆಗದುಕೊಡುತ್ತೇನೆ. ರಾಜಕಾರಣಕ್ಕಾಗಿ ರೈತರ ಭೂಮಿಯನ್ನು ವಕ್ಫ್ ಮಂಡಳಿಗೆ ಕೊಡುವ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದರು
Previous Articleತೇಜಸ್ವಿ ಸೂರ್ಯ ವಿರುದ್ಧ ಎಫ್ಐಆರ್.
Next Article ಉಡುಪಿಯಲ್ಲಿ ನಕ್ಸಲರಿಗಾಗಿ ಶೋಧ.