ಬೆಂಗಳೂರು,ಜೂ.27- ರಾಜ್ಯದ ಪೊಲೀಸ್ ಇಲಾಖೆಗೆ ಮೇಜರ್ ಸರ್ಜರಿ ಮಾಡಿರುವ ರಾಜ್ಯ ಸರ್ಕಾರ 16 ಮಂದಿ ಐಪಿಎಸ್ ಅಧಿಕಾರಿಗಳನ್ನು ವರ್ಗಾಯಿಸಿ ಆದೇಶ ಹೊರಡಿಸಿದೆ. ತಕ್ಷಣದಿಂದಲೇ ಈ ಆದೇಶ ಜಾರಿಗೆ ಬರಲಿದೆ ಎಂದು ತಿಳಿಸಿದೆ.
ನಗರದ ಪಶ್ಚಿಮ, ದಕ್ಷಿಣ, ಪೂರ್ವ(ಸಂಚಾರ), ಆಗ್ನೇಯ ವಿಭಾಗದ ಡಿಸಿಪಿಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ. ತಕ್ಷಣದಿಂದಲೇ ಈ ಆದೇಶ ಜಾರಿಗೆ ಬರಲಿದೆ ಎಂದು ತಿಳಿಸಿದೆ.
ಪಶ್ಚಿಮ ವಿಭಾಗದ ಡಿಸಿಪಿ ಡಾ.ಸಂಜೀವ್ ಪಾಟೀಲ್ ಅವರನ್ನು ಬೆಳಗಾವಿ ಎಸ್ ಪಿಯಾಗಿ, ಹುದ್ದೆಯ ನಿರೀಕ್ಷೆಯಲ್ಲಿದ್ದ ಸಿಕೆ ಬಾಬಾ ಅವರನ್ನು ಆಗ್ನೇಯ ವಿಭಾಗಕ್ಕೆ, ಎಸಿಬಿ ಎಸ್ ಪಿ ಕಲಾ ಕೃಷ್ಣ ಸ್ವಾಮಿ ಅವರನ್ನು ಪೂರ್ವ (ಸಂಚಾರ)ವಿಭಾಗದ ಡಿಸಿಪಿಯಾಗಿ
ವರ್ಗಾವಣೆ ಮಾಡಲಾಗಿದೆ.
ಸಿಸಿಬಿಗೆ ಶ್ರೀನಿವಾಸಗೌಡ, ಲೋಕಾಯುಕ್ತಕ್ಕೆ ಶ್ರೀನಾಥ್ ಮಹದೇವ ಜೋಷಿ ಎಸಿಬಿಗೆ ಶೋಭಾರಾಣಿ, ಬೆಸ್ಕಾಂಗೆ ಶಾಂತರಾಜು ಅವರನ್ನು ವರ್ಗಾವಣೆ ಮಾಡಲಾಗಿದೆ.
Previous Articleಅಮಲಿನಲ್ಲಿ ಚುಚ್ಚಿ ಕೊಂದ ಭೂಪ
Next Article ಪಠ್ಯಪುಸ್ತಕ ಮರು ತಿದ್ದುಪಡಿಗೆ ಸರ್ಕಾರ ಆದೇಶ