ಬೆಂಗಳೂರು, ಸೆ.12 – ಡ್ರಗ್ಸ್ ಮಾರಾಟ (Drug Peddler) ಸರಬರಾಜು ಸೇವನೆ ಸಾಗಾಣೆ ಮಾರಾಟದ ವಿರುದ್ಧ ಕಾರ್ಯಾಚರಣೆ ತೀವ್ರಗೊಳಿಸಿರುವ ಸಿಸಿಬಿ ಪೊಲೀಸರು ಓರ್ವ ವಿದೇಶಿ ಪ್ರಜೆ ಸೇರಿ 34 ಮಂದಿ ಅಂತರರಾಜ್ಯ ಡ್ರಗ್ ಪೆಡ್ಲರ್ (Drug Peddler) ಗಳನ್ನು ಬಂಧಿಸಿ 2.42 ಕೋಟಿಗೂ ಅಧಿಕ ಮೌಲ್ಯದ ಮಾದಕ ವಸ್ತುಗಳನ್ನು ಜಪ್ತಿ ಮಾಡಿದ್ದಾರೆ.
ಸಿಸಿಬಿಯ ಮಾದಕ ದ್ರವ್ಯ ನಿಗ್ರಹ ದಳದ ಸಿಬ್ಬಂದಿಯು ನಗರದ ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಯ ಪ್ರಮುಖ ಕಾಲೇಜು ವಿದ್ಯಾರ್ಥಿಗಳನ್ನು ಗಮನದಲ್ಲಿಟ್ಟುಕೊಂಡು ಸಂಗ್ರಹಿಸಲಾದ ಮಾಹಿತಿಯ ಆಧಾರದ ಮೇಲೆ ಕಾರ್ಯಾಚರಣೆಯನ್ನು ನಡೆಸಿ 24 ಪ್ರಕರಣಗಳಲ್ಲಿ 34 ಮಂದಿ ಡ್ರಗ್ ಪೆಡ್ಲರ್ ಗಳನ್ನು ಬಂಧಿಸಿದ್ದಾರೆ ಎಂದು ಪತ್ರಿಕಾಗೋಷ್ಠಿಯಲ್ಲಿ ನಗರ ಪೊಲೀಸ್ ಆಯುಕ್ತ ಬಿ.ದಯಾನಂದ ಅವರು ತಿಳಿಸಿದರು.
ಬಂಧಿತ ಡ್ರಗ್ ಪೆಡ್ಲರ್ ಗಳಲ್ಲಿ ಕೇರಳದ 15, ಕರ್ನಾಟಕದ10, ಬಿಹಾರದ 4, ಒರಿಸ್ಸಾದ ಇಬ್ಬರು, ಅಸ್ಸಾಂ, ಹರಿಯಾಣದ ತಲಾ ಒಬ್ಬ ಹಾಗೂ ನೈಜೀರಿಯಾ ದೇಶದ ಒಬ್ಬ ಸೇರಿದ್ದು ಅವರನ್ನು ಹೆಚ್ಚಿನ ವಿಚಾರಣೆ ನಡೆಸಲಾಗಿದೆ ಎಂದು ಹೇಳಿದರು.
ಬಂಧಿತರಿಂದ 2.42 ಕೋಟಿಗೂ ಅಧಿಕ ಮೌಲ್ಯದ 37 ಕೆಜಿ 900 ಗ್ರಾಂ ಗಾಂಜಾ, 167,56 ಗ್ರಾಂ ಕ್ರಿಸ್ಟೇಲ್,ಗಾಂಜಾ ಎಣ್ಣಿ ಇನ್ನಿತರ ಮಾದಕವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದರು. ಸಿಸಿಬಿಯ ಮಾದಕದ್ರವ್ಯ ನಿಗ್ರಹ ದಳದ ಅಧಿಕಾರಿ ಮತ್ತು ಸಿಬ್ಬಂದಿಗಳ ತಂಡವು ವೈಟ್‌ಫೀಲ್ಡ್ – ವರ್ತೂರು, ಕಾಟನ್ ಪೇಟೆ, ಮೈಕೋಲೇಔಟ್, ಆರ್.ಟಿ. ನಗರ – ಬೊಮ್ಮನಹಳ್ಳಿ, ಕೆಂಗೇರಿ, ಚಾಮರಾಜಪೇಟೆ, ಬೈಯ್ಯಪ್ಪನಹಳ್ಳಿ, ರಾಮಮೂರ್ತಿನಗರ, ಕೊಡಿಗೇಹಳ್ಳಿ, ಕೆಆರ್ ಪುರಂ, ಪರಪ್ಪನ ಅಗ್ರಹಾರ, ಗಿರಿನಗರ, ಹೆಣ್ಣೂರು, ಹೊತ್ತನೂರು , ಯಲಹಂಕ, ಮಾರತ್ ಹಳ್ಳಿ, ಹುಳಿಮಾವು ಹಾಗೂ ಜೆ ಜೆ ನಗರ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ಕಾರ್ಯಾಚರಣೆಯನ್ನು ನಡೆಸಿ ಡ್ರಗ್ ಶೆಡ್ಡಿಂಗ್ ನಲ್ಲಿ ತೊಡಗಿದ್ದವರನ್ನು ಬಂಧಿಸಲಾಗಿದೆ.
ಬಂಧಿತ ಆರೋಪಿಗಳು ಕಡಿಮೆ ಸ ಮಯದಲ್ಲಿ ಹೆಚ್ಚಿನ ಹಣ ಸಂಪಾದನೆ ಮಾಡುವ ಉದ್ದೇಶದಿಂದ ಕಡಿಮೆ ಬೆಲೆಗೆ ನಿಷೇಧಿತ ಮಾದಕ ವಸ್ತುಗಳನ್ನು ಖರೀದಿ ಮಾ ಡಿ ಅವುಗಳನ್ನು ಪರಿಚಯಸ್ಥ ಗ್ರಾಹಕರಿಗೆ ಕಾಲೇಜು ವಿದ್ಯಾರ್ಥಿಗಳಿಗೆ, ಐಟಿ ಬಿಟಿ ಉದ್ಯೋಗಿಗಳಿಗೆ ಹೆಚ್ಚಿನ ಬೆಲೆಗೆ ಮಾರಾಟ ಮಾಡಿ ಅಕ್ರಮ ಹಣ ಸಂಪಾದನೆಯಲ್ಲಿ ತೊಡಗಿರುವುದು ಪತ್ತೆಯಾಗಿದೆ ಎಂದರು.