Facebook X (Twitter) Instagram
    Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • Videos
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ
    Vartha Chakra
    You are at:Home » 40% ಜನ AI ನಿಂದಾಗಿ ಕೆಲಸ ಕಳೆದುಕೊಳ್ಳುತ್ತಾರಂತೆ!
    ಸುದ್ದಿ

    40% ಜನ AI ನಿಂದಾಗಿ ಕೆಲಸ ಕಳೆದುಕೊಳ್ಳುತ್ತಾರಂತೆ!

    vartha chakraBy vartha chakraಜನವರಿ 16, 202426 ಪ್ರತಿಕ್ರಿಯೆಗಳು2 Mins Read
    Facebook Twitter WhatsApp Pinterest LinkedIn Tumblr Email
    Share
    Facebook Twitter LinkedIn Pinterest Email WhatsApp
    Verbattle
    Verbattle

    ಮುಂದಿನ ದಿನಗಳಲ್ಲಿ ವಿಶ್ವದ ಎಲ್ಲೆಡೆ ನೌಕರಿಯಲ್ಲಿರುವ ನೂರು ಜನರ ಪೈಕಿ ನಲ್ವತ್ತು ಮಂದಿ ಉದ್ಯೋಗ ಕಳೆದುಕೊಳ್ಳಲಿರುವ ಸಾಧ್ಯತೆ ಇದೆ ಎಂದು IMF ನ ಮುಖ್ಯಸ್ಥೆ ಕ್ರಿಸ್ಟಲಿನ ಜೊರ್ಜಿಯೇವ ಹೇಳಿದ್ದಾರೆ. ಇದಾಗುವುದು ಕೃತಕ ಬುದ್ದಿ (AI) ತಂತ್ರಜ್ಞಾನದಿಂದ ಎಂದೂ ಅವರು ಹೇಳಿದ್ದಾರೆ. ಈ ಸಮಸ್ಯೆಯೊಂದಿಗೆ ವಿಶ್ವದಾದ್ಯಂತ ತಾರತಮ್ಯಗಳು ಮತ್ತು ಶ್ರೀಮಂತರ ಹಾಗು ಬಡವರ ನಡುವಿನ ಸಂಪತ್ತಿನ ಅಂತರ ಕೂಡ ಹೆಚ್ಚಾಗಲಿದೆ ಎಂದೂ ಹೇಳಿದ್ದಾರೆ.

    ಈ ಕಾರಣಗಳಿಂದಾಗಿ ವಿಶ್ವದಾದ್ಯಂತ ಸಾಮಾಜಿಕ ಸಂಘರ್ಷಗಳು ನಡೆಯುವ ಸಾಧ್ಯತೆ ಇದ್ದು ಅದರಿಂದ ವಿಶ್ವ ಬಹಳ ತೊಂದರೆಯನ್ನು ಅನುಭವಿಸಬಹುದು ಎಂದೂ ಬರೆದುಕೊಂಡಿದ್ದಾರೆ. ಜೊರ್ಜಿಯೇವ ಅವರು ಡೆವೊಸ್ ನಲ್ಲಿ ನಡೆಯುತ್ತಿರುವ ವಿಶ್ವ ಆರ್ಥಿಕ ವೇದಿಕೆಯಲ್ಲಿ ಮಾತನಾಡುವ ಮೊದಲು ಈ ಲೇಖನವನ್ನು ತಾವು ಹೇಳಲಿರುವ ವಿಚಾರಕ್ಕೆ ಮುನ್ನುಡಿಯಂತೆ ಬರೆದಿದ್ದಾರೆ. ಆದರೆ ಇದೆ ವೇದಿಕೆಯಲ್ಲಿ ಅತ್ಯಂತ ಜನಪ್ರಿಯವಾಗಿರುವ AI ಕಂಪನಿ Open AI ನ ಮುಖ್ಯಸ್ಥ ಸ್ಯಾಮ್ ಆಲ್ಟ್ ಮ್ಯಾನ್ ಕೂಡ ಮಾತನಾಡಲಿದ್ದಾರೆ. ಆಲ್ಟ್ ಮ್ಯಾನ್ ಅವರು AI ಇಂದಾಗಿ ಇನ್ನು ನಾಲ್ಕನೇ ಉತ್ಪಾದನಾ ಕ್ರಾಂತಿಯನ್ನು ವಿಶ್ವ ನೋಡಲಿದೆ ಎಂಬ ವಿಷಯದ ಬಗ್ಗೆ ಮಾತನಾಡಲಿದ್ದಾರೆ.

    AI ಅನ್ನು ಬಳಸಲಿರುವ ಕಂಪೆನಿಗಳಿಂದಾಗಿ ಎಷ್ಟು ಒಳ್ಳೆಯದಾಗಲಿದೆಯೊ ಅಷ್ಟೇ ಕೆಟ್ಟದ್ದೂ ಆಗಲಿದೆ ಎಂದು ಈಗಾಗಲೇ ಅಂದಾಜು ಮಾಡಲಾಗಿದೆ. ಈತನಕ ಬಳಸಲ್ಪಟ್ಟಿರುವ AI ಇಂದಾಗಿಯೇ ಬಹಳಷ್ಟು ಕ್ಷೇತ್ರಗಳಲ್ಲಿ ಜನರು ಕೆಲಸ ಕಳೆದು ಕೊಂಡು ಕಂಪನಿಗಳು ಕನಿಷ್ಠ ವೆಚ್ಚದಲ್ಲಿ ಅದೇ ಕೆಲಸವನ್ನು AI ಮೂಲಕ ಮಾಡಿಸಿಕೊಳ್ಳುತ್ತಿವೆ ಎನ್ನುವುದು ವರದಿಯಾಗಿದೆ. ಕಿರಿಯಾಶೀಲ ಬರವಣಿಗೆ, ದಾಖಲೆ ಮಾಡುವುದು, ಲೆಕ್ಕ ಪಾತ್ರದ ನಿರ್ವಹಣೆ, ದತ್ತಾಂಶದ ವಿಶ್ಲೇಷಣೆ, ಮಾಹಿತಿ ಕ್ರೊಡೀಕರಣ ಮುಂತಾದ ಅನೇಕ ಕೆಲಸಗಳನ್ನು AI ಈಗಾಗಲೇ ಕ್ಷಣಾರ್ಧದಲ್ಲಿ ಮಾಡಿ ಮುಗಿಸಿ ಕಂಪನಿಗಳು ಹಣ ಉಳಿಸುವಂತೆ ಮಾಡುತ್ತಿದೆ. ಭಾರತದಂತಹ ದೇಶಗಳಲ್ಲಿ ಸಧ್ಯಕ್ಕೆ ಸರ್ಕಾರಗಳು ಕಡಿಮೆ ಜನರಿಗೆ ಸರ್ಕಾರಿ ಉದ್ಯೋಗ ನೀಡುತ್ತಿರುವ ಹಿನ್ನೆಲೆಯಲ್ಲಿ ಇನ್ನು ಮುಂದೆ ಖಾಸಗಿ ಕ್ಷೇತ್ರದಲ್ಲೂ ಕೆಲಸಗಳ ಕೊರತೆಯಾಗಿಬಿಟ್ಟರೆ ಅದು ಸಾಮಾಜಿಕ ವಿಪ್ಲವಕ್ಕೆ ಕಾರಣವಾಗಬಹುದು ಎಂದು ಅನೇಕ ಅರ್ಥಶಾಸ್ತ್ರಜ್ಞರು ಆತಂಕ ವ್ಯಕ್ತ ಪಡಿಸುತ್ತಿದ್ದಾರೆ.

    ಹೊರ ಹೊಮ್ಮುತ್ತಿರುವ ಆರ್ಥಿಕತೆಗಳಾದ ಭಾರತ ಮತ್ತು ಬ್ರೆಜಿಲ್ ನಂಥ ದೇಶಗಳಲ್ಲಿ AI ದೊಡ್ಡ ರೀತಿಯಲ್ಲಿ ಪರಿಣಾಮ ಬೀರಲು ಇನ್ನಷ್ಟು ವರ್ಷಗಳು ಬೇಕಾಗಬಹುದು ಎನ್ನುವ ಅರ್ಥಶಾಸ್ತ್ರಜ್ಞರು ಮುಂದುವರಿದ ರಾಷ್ಟ್ರಗಳು ಈಗಾಗಲೇ ಬಹಳಷ್ಟು ತಂತ್ರಜ್ಞಾನವನ್ನು ಬಳಸುವುದರಿಂದ ಈ ದೇಶಗಳಲ್ಲಿ ನೂರಕ್ಕೆ ಸುಮಾರು 60 ಮಂದಿ ಕೆಲಸ ಕಳೆದುಕೊಳ್ಳುವ ಸಾಧ್ಯತೆ ಇದೆ ಎಂದು ಹೇಳುತ್ತಿದ್ದಾರೆ. ಆ ಕಾರಣದಿಂದಾಗಿ ಸರ್ಕಾರಗಳು ಈ ಕೂಡಲೇ ಇದೆಲ್ಲದರ ಬಗ್ಗೆ ಮೊದಲೇ ತಯಾರಿ ನಡೆಸಿಕೊಂಡು ತಮ್ಮ ಜನರಿಗೆ ಸಾಮಾಜಿಕ ಸುರಕ್ಷತೆ ನೀಡುವ ಬಗ್ಗೆ ತಲೆಕೆಡಿಸಿಕೊಂಡು ಜನ ಧೃತಿಗೆಡದಂತೆ ನೋಡಿಕೊಳ್ಳಬೇಕು ಎಂಬ ಸಲಹೆ ನೀಡಲಾಗಿದೆ.

    Verbattle
    Verbattle
    Verbattle
    AI m ತಂತ್ರಜ್ಞಾನ
    Share. Facebook Twitter Pinterest LinkedIn Tumblr Email WhatsApp
    Previous Articleದಾಖಲೆ ಸೃಷ್ಟಿಸಿದ ಸೆನ್ಸೆಕ್ಸ್ | Sensex
    Next Article ಅನಂತ ಕುಮಾರ್ ಹೆಗಡೆ, ವಿಶ್ವೇಶ್ವರ ಹೆಗಡೆ ಕಾಗೇರಿ ಬಿಗ್ ಫೈಟ್ | Anantkumar Hegde
    vartha chakra
    • Website

    Related Posts

    ಬೆಂಗಳೂರಿನಲ್ಲಿ ಬಡ ವಿದ್ಯಾರ್ಥಿಗಳ ಹಾಸ್ಟೆಲ್‌ಗೆ ಜಾಗ ಮಂಜೂರು: ಡಿಸಿಎಂ ಡಿ.ಕೆ. ಶಿವಕುಮಾರ್ ಭರವಸೆ

    ಫೆಬ್ರವರಿ 14, 2026

    ಆಕಾಶದ ಅಧಿಪತಿ ದಸ್ಸೋಲ್ ರಫಾಲೆ: ಯುಪಿಎ ಟೆಂಡರ್‌ನಿಂದ ಎನ್‌ಡಿಎ ಮೆಗಾ ಡೀಲ್‌ ವರೆಗೆ..!

    ಫೆಬ್ರವರಿ 14, 2026

    ಕೇಂದ್ರದ ಅನುಮತಿ ಸಿಕ್ಕರೆ ಮೇಕೆದಾಟು, ಯುಕೆಪಿ ಯೋಜನೆ ಜಾರಿ: ಡಿಸಿಎಂ ಡಿ.ಕೆ. ಶಿವಕುಮಾರ್

    ಫೆಬ್ರವರಿ 13, 2026

    Leave A Reply Cancel Reply

    Verbattle
    ವಿಭಾಗಗಳು
    • Trending
    • Viral
    • ಅಂಕಣ
    • ಅಂತಾರಾಷ್ಟ್ರೀಯ
    • ಅಪರಾಧ
    • ಆರೋಗ್ಯ
    • ಕಲೆ
    • ಕಾನೂನು
    • ಕಾಮಗಾರಿ
    • ಕ್ರೀಡೆ
    • ಗಾಂಧಿ ಜಯಂತಿ
    • ಗೃಹಲಕ್ಷ್ಮಿ
    • ಗ್ಯಾರಂಟಿ ಯೋಜನೆ
    • ಚುನಾವಣೆ
    • ಚುನಾವಣೆ 2024
    • ಡಿ.ಕೆ.ಶಿವಕುಮಾರ್
    • ತಂತ್ರಜ್ಞಾನ
    • ಧಾರ್ಮಿಕ
    • ಪ್ರಚಲಿತ
    • ಬಂಧನ
    • ಬೆಂಗಳೂರು
    • ಮತ್ತಷ್ಟು
    • ಮನರಂಜನೆ
    • ಮಾಹಿತಿ
    • ಮಾಹಿತಿ
    • ಮುಖ್ಯಮಂತ್ರಿಗಳು
    • ರಾಜಕೀಯ
    • ರಾಜ್ಯ
    • ರಾಷ್ಟ್ರೀಯ
    • ವಾಣಿಜ್ಯ
    • ವಾರ್ತಾಚಕ್ರ ವಿಶೇಷ
    • ವಿಜ್ಞಾನ
    • ವಿಶೇಷ ಸುದ್ದಿ
    • ವಿಶ್ಲೇಷಣೆ
    • ವ್ಯಕ್ತಿಚಿತ್ರ
    • ಶಿಕ್ಷಣ
    • ಸಂಚಾರ
    • ಸಮಾಜ
    • ಸಮೂಹ ಶಕ್ತಿ
    • ಸರ್ಕಾರ
    • ಸಾಹಿತ್ಯ
    • ಸಿನೆಮ
    • ಸುದ್ದಿ
    • ಹವಾಮಾನ
    • Facebook
    • Twitter
    • YouTube
    ಅದನ್ನು ಕಳೆದುಕೊಳ್ಳಬೇಡಿ

    ಬೆಂಗಳೂರಿನಲ್ಲಿ ಬಡ ವಿದ್ಯಾರ್ಥಿಗಳ ಹಾಸ್ಟೆಲ್‌ಗೆ ಜಾಗ ಮಂಜೂರು: ಡಿಸಿಎಂ ಡಿ.ಕೆ. ಶಿವಕುಮಾರ್ ಭರವಸೆ

    ಆಕಾಶದ ಅಧಿಪತಿ ದಸ್ಸೋಲ್ ರಫಾಲೆ: ಯುಪಿಎ ಟೆಂಡರ್‌ನಿಂದ ಎನ್‌ಡಿಎ ಮೆಗಾ ಡೀಲ್‌ ವರೆಗೆ..!

    ಡ್ರಾಪ್‌ಔಟ್‌ನಿಂದ ದೈತ್ಯ ಉದ್ಯಮಿಯವರೆಗೆ: ಅದಾನಿ ಸಾಮ್ರಾಜ್ಯದ ಯಶೋಗಾಥೆ!

    ಕೇಂದ್ರದ ಅನುಮತಿ ಸಿಕ್ಕರೆ ಮೇಕೆದಾಟು, ಯುಕೆಪಿ ಯೋಜನೆ ಜಾರಿ: ಡಿಸಿಎಂ ಡಿ.ಕೆ. ಶಿವಕುಮಾರ್

    Quick Links
    • About Us
    • Privacy Policy
    • Terms & Conditions
    • Contact Us 
    Latest Comments
    • Gxkytc ರಲ್ಲಿ ವಾಲ್ಮೀಕಿ ನಿಗಮದಲ್ಲಿ ಇಲ್ಲದ ವ್ಯಕ್ತಿ ಹೆಸರಲ್ಲಿ ನಡೆದಿದ್ದಾದರೂ ಏನು..?
    • Tracymix ರಲ್ಲಿ ಜಾತಿ ಗಣತಿ ಅಲ್ಲ, ಸಿದ್ದ ಷಡ್ಯಂತ್ರ ಎಂದ ಕುಮಾರಸ್ವಾಮಿ.
    • LinwoodGah ರಲ್ಲಿ ರೆಡ್ಡಿ- ಶ್ರೀರಾಮುಲು ಗೆ ಬಾಯಿ ಮುಚ್ಚಿ ಅಂದ್ರು
    Latest Kannada News

    ಬೆಂಗಳೂರಿನಲ್ಲಿ ಬಡ ವಿದ್ಯಾರ್ಥಿಗಳ ಹಾಸ್ಟೆಲ್‌ಗೆ ಜಾಗ ಮಂಜೂರು: ಡಿಸಿಎಂ ಡಿ.ಕೆ. ಶಿವಕುಮಾರ್ ಭರವಸೆ

    ಫೆಬ್ರವರಿ 14, 2026

    ಆಕಾಶದ ಅಧಿಪತಿ ದಸ್ಸೋಲ್ ರಫಾಲೆ: ಯುಪಿಎ ಟೆಂಡರ್‌ನಿಂದ ಎನ್‌ಡಿಎ ಮೆಗಾ ಡೀಲ್‌ ವರೆಗೆ..!

    ಫೆಬ್ರವರಿ 14, 2026

    ಡ್ರಾಪ್‌ಔಟ್‌ನಿಂದ ದೈತ್ಯ ಉದ್ಯಮಿಯವರೆಗೆ: ಅದಾನಿ ಸಾಮ್ರಾಜ್ಯದ ಯಶೋಗಾಥೆ!

    ಫೆಬ್ರವರಿ 14, 2026
    Connect With Us
    • Facebook
    • Twitter
    • YouTube
    Copyright © 2023 Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • Videos
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ

    Type above and press Enter to search. Press Esc to cancel.