ವಾಷಿಂಗ್ಟನ್: ಅಮೆರಿಕದ ಜನಪ್ರಿಯ ಮಾಡೆಲ್ ಹಾಗೂ ಸೆಲೆಬ್ರಿಟಿ ಕಿಮ್ ಕಾರ್ಡ್‌ಶಿಯಾನ್‌ರಂತೆಯೇ ಕಾಣಬೇಕೆಂದು ಆಸೆ ಹೊತ್ತ ಮಾಡೆಲ್ ಒಬ್ಬರು ಬರೋಬ್ಬರಿ 40 ಬಾರಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ.
ಇದಕ್ಕಾಗಿ ಆರು ಲಕ್ಷ ಡಾಲರ್ ವ್ಯಯಿಸಿ ಥೇಟ್ ಕಿಮ್ ಕಾರ್ಡಶಿಯಾನ್ ಅವರ ರೂಪವನ್ನು ಪಡೆದ ಬಳಿಕ ಮಾಡೆಲ್ ಜೆನ್ನಿಫರ್ ಪ್ಯಾಪ್ಲೋನಾಗೆ ತಾನು ಮೊದಲಿನಂತೆ ಆಗಬೇಕು ಎಂದೆನಿಸಿದೆ. ಇದೀಗ ಮತ್ತೆ ಕೋಟಿಗಟ್ಟಲೇ ಖರ್ಚು ಮಾಡಿ ಅಸಲಿ ರೂಪ ವಾಪಸ್ ಪಡೆಯಲು ಹೆಣಗಾಡುತ್ತಿದ್ದಾರೆ.
17ನೇ ವಯಸ್ಸಿನಲ್ಲಿ ಕಿಮ್ ಕಾರ್ಡಶಿಯಾನ್‌ರಂತೆ ಆಗಬೇಕೆಂದು ಜೆನ್ನಿಫರ್ ಕೋಟಿಗಟ್ಟಲೇ ಹಣ ವ್ಯಯಿಸಿ ಮುಖಕ್ಕೆ ಸರ್ಜರಿ ಮಾಡಿಸಿದ್ದಾರೆ. ಆದರೆ ಎಲ್ಲರೂ ಇವರನ್ನು ಕಿಮ್ ಕಾರ್ಡಶಿಯಾನ್ ಅಂದರೇ ಹೊರತು ಜೆನ್ನಿಫರ್ ಹೆಸರಿನಲ್ಲಿ ಯಾರೂ ಗುರುತಿಸಲಿಲ್ಲ. ಇದರಿಂದ ಬೇಸತ್ತ ಜೆನ್ನಿಫರ್ ಮತ್ತೆ ತಮ್ಮ ಮೊದಲ ರೂಪವನ್ನು ಪಡೆಯಲು ಚಿಕಿತ್ಸೆ ಆರಂಭಿಸಿದ್ದಾರೆ.