ಬೆಂಗಳೂರು,ಜು.24- ಕರ್ನಾಟಕ ಹೈಕೋರ್ಟ್ ನ ಮುಖ್ಯ ನ್ಯಾಯಮೂರ್ತಿ ಸೇರಿದಂತೆ 6 ಮಂದಿ ನ್ಯಾಯಮೂರ್ತಿಗಳಿಗೆ ಕೊಲೆ ಬೆದರಿಕೆ ಹಾಕಲಾಗಿದೆ.
ತಕ್ಷಣವೇ ಅಲೈಡ್ ಬ್ಯಾಂಕ್ ಲಿಮಿಟೆಡ್‍ನ ಈ ಖಾತೆಗೆ ಐವತ್ತು ಲಕ್ಷ ರೂಪಾಯಿ ಹಾಕಬೇಕು ಎಂದು ಹೇಳಿ ಬ್ಯಾಂಕ್ ಸಂಖ್ಯೆಯನ್ನು ನೀಡಿದ್ದಾರೆ. ಇಲ್ಲವಾದರೆ ನ್ಯಾಯಮೂರ್ತಿಗಳನ್ನು ಕೊಲೆ ಮಾಡಿಸುವುದಾಗಿ ವಾಟ್ಸ್ ಆಪ್ ಮೂಲಕವೂ ಬೆದರಿಕೆ ಸಂದೇಶ ಕಳುಹಿಸಲಾಗಿದೆ.
ಹೈಕೋರ್ಟ್ನ ಸಾರ್ವಜನಿಕ ಸಂಪರ್ಕಾಧಿಕಾರಿ(P.R.O) ಮುರಳಿಧರ್ ಅವರ ಮೊಬೈಲ್ಗೆ ಅಪರಿಚಿತ ನಂಬರ್ನಿಂದ ಸಂದೇಶ ಬಂದಿದೆ. ಇದರಲ್ಲಿ, ನ್ಯಾಯಮೂರ್ತಿಗಳಾದ ಮಹಮ್ಮದ್ ನವಾಜ್, ಎಚ್.ಟಿ.ನರೇಂದ್ರ ಪ್ರಸಾದ್, ಅಶೋಕ್.ಜಿ.ನಿಜಗಣ್ಣನವರ್, ಎಚ್.ಪಿ. ಸಂದೇಶ್, ಕೆ ನಟರಾಜನ್ ಹಾಗೂ ವೀರಪ್ಪನವರ ಕೊಲೆ ಮಾಡುವುದಾಗಿ ತಿಳಿಸಲಾಗಿದೆ.
ಹಿಂದಿ, ಉರ್ದು ಮತ್ತು ಇಂಗ್ಲಿಷ್ ಭಾಷೆಯಲ್ಲಿ ಸಂದೇಶ ಕಳುಹಿಸಿರುವ ಅಪರಿಚಿತರು, ಪಾಕಿಸ್ತಾನ ಮೂಲದ ಅಲೈಡ್ ಬ್ಯಾಂಕ್ ಲಿಮಿಟೆಡ್‍ನ
ಅಕೌಂಟ್ ನಂಬರ್ ನೀಡಿ 50 ಲಕ್ಷ ಹಣ ನೀಡಬೇಕು ಇಲ್ಲವಾದರೆ ದುಬೈ ಗ್ಯಾಂಗ್ ನಿಂದ ಕೊಲೆ ಮಾಡುವುದಾಗಿ ಬೆದರಿಕೆಯನ್ನು ಹಾಕಿದ್ದಾರೆ.
ಈ ಹಿನ್ನೆಲೆಯಲ್ಲಿ ಮುರಳಿಧರ್ ಪೊಲೀಸರಿಗೆ ದೂರು ನೀಡಿದ್ದಾರೆ.ಸಂದೇಶ ಕುರಿತಂತೆ ಸೆಂಟ್ರಲ್ ಕ್ರೈಮ್ ಠಾಣೆಯಲ್ಲಿ ದೂರು ನೀಡಲಾಗಿದ್ದು ಎಫ್‍ಐಆರ್ ದಾಖಲಾಗಿದೆ