ನವದೆಹಲಿ: ಅ,01- ಚಂಡೀಗಢದಿಂದ ಲೇಹ್‌ಗೆ ಪ್ರಯಾಣಿಸುತ್ತಿದ್ದ ಭಾರತೀಯ ವಾಯುಪಡೆಯ ವಿಮಾನ ಎಎನ್-12 1968ರ ಫೆಬ್ರುವರಿ 7ರಂದು ಹಿಮಾಚಲ ಪ್ರದೇಶದ ರೋಹ್ತಾಂಗ್ ಪಾಸ್ ಬಳಿ ಪತನಗೊಂಡಿತ್ತು. ಈ ನತದೃಷ್ಟ ವಿಮಾನದಲ್ಲಿ 102 ಮಂದಿ ಪ್ರಯಾಣಿಕರು ಇದ್ದರು.
ವಿಮಾನ ಪತನಗೊಂಡ ಸುದ್ದಿ ತಿಳಿಯುತ್ತಿದ್ದಂತೆ ಕಾರ್ಯಾಚರಣೆಗೆ ಇಳಿದ ರಕ್ಷಣಾ ತಂಡಗಳು ಹಲವು ಮೃತ ದೇಹಗಳನ್ನು ಹೊರತೆಗೆಯಲು ಯಶಸ್ವಿಯಾಗಿದ್ದವು. ಆದರೆ ವಿಮಾನದಲ್ಲಿ ಪ್ರಯಾಣ ಮಾಡುತ್ತಿದ್ದ ಇನ್ನೂ ಕೆಲ ಪ್ರಯಾಣಿಕರು ಮತ್ತು ಪತನಗೊಂಡ ವಿಮಾನದ ಅವಶೇಷಗಳು ಪತ್ತೆಯಾಗಿರಲಿಲ್ಲ.
ನಾಪತ್ತೆಯಾದ ಪ್ರಯಾಣಿಕರು ಮತ್ತು ವಿಮಾನದ ಅವಶೇಷಗಳಿಗಾಗಿ ಭಾರತೀಯ ಸೇನೆಯ ಡೋಗ್ರಾ ಸ್ಕೌಟ್ಸ್ ಮತ್ತು ತಿರಂಗಾ ಮೌಂಟೇನ್ ರೆಸ್ಕ್ಯೂ ತಂಡಗಳ ಸಿಬ್ಬಂದಿ ಇಲ್ಲಿಯವರೆಗೆ ಹುಡುಕಾಟ ನಡೆಸುತ್ತಿದ್ದರು.
ಈ ಸಿಬ್ಬಂದಿ ಇಲ್ಲಿಯವರೆಗೆ ಸತತವಾಗಿ ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಕೆಲವು ಮೃತದೇಹಗಳು ಪತ್ತೆಯಾಗಿವೆ ಎಂದು ಸೇನೆಯ ಅಧಿಕಾರಿಗಳು ತಿಳಿಸಿದ್ದಾರೆ. ಸುಧೀರ್ಘ 56 ವರ್ಷಗಳ ಕಾರ್ಯಾಚರಣೆಯ ನಂತರ ಈಗ ಐದು ಮೃತ ದೇಹಗಳು ಪತ್ತೆಯಾಗಿವೆ.
ಈಗ ಪತ್ತೆಯಾಗಿರುವ ಮೃತದೇಹಗಳು ಮಲ್ಖಾನ್ ಸಿಂಗ್, ನಾರಾಯಣ್ ಸಿಂಗ್ ಮತ್ತು ಥಾಮಸ್ ಚರಣ್ ಅವರದ್ದು ಎಂದು ಗುರುತಿಸಲಾಗಿದೆ. ಇನ್ನೊಂದು ಮೃತದೇಹದ ಗುರುತು ಪತ್ತೆಯಾಗಿಲ್ಲ.
ವಿಮಾನದ ಅವಶೇಷವನ್ನು 2003 ರಲ್ಲಿ ಪತ್ತೆಹಚ್ಚಲಾಗಿದ್ದರೆ, 2019ರ ವರೆಗೆ ಕೇವಲ ಐವರ ಮೃತದೇಹಗಳನ್ನು ಪತ್ತೆ ಹಚ್ಚಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
Previous Articleಕೆಲಸವಿಲ್ಲದ ಬಿಜೆಪಿ ನಾಯಕರಿಗೆ ಸಾರಿಗೆ ಸಚಿವರ ಸವಾಲ್.
Next Article CM ಅವರ ಮತ್ತೊಂದು ನಿವೇಶನ ಅಕ್ರಮ ಕೆದಕಿದ ಕುಮಾರಸ್ವಾಮಿ.