ಇಂದು (ಜುಲೈ 1) ರಿಲೀಸ್ ಆದ ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಅವರ ‘ಬೈರಾಗಿ’ ಚಿತ್ರಕ್ಕೆ ವಿಜಯ್ ಮಿಲ್ಟನ್ ಆ್ಯಕ್ಷನ್ ಕಟ್ ಹೇಳಿದ್ದಾರೆ. ಟೀಸರ್ ಮೂಲಕ ಸಿನಿಮಾ ಗಮನ ಸೆಳೆದಿತ್ತು. ಹಾಗಾದರೆ, ಈ ಸಿನಿಮಾ ಹೇಗಿದೆ? ಶಿವರಾಜ್ಕುಮಾರ್ ಅವರು ಯಾವ ರೀತಿಯಲ್ಲಿ ಕಾಣಿಸಿಕೊಂಡಿದ್ದಾರೆ ಎಂಬಿತ್ಯಾದಿ ವಿಚಾರಗಳಿಗೆ ಇಲ್ಲಿದೆ ಉತ್ತರ.
ಹುಲಿ ಶಿವಪ್ಪ (ಶಿವರಾಜ್ಕುಮಾರ್) ಹುಲಿವೇಶ ಹಾಕಿ ಬದುಕು ನಡೆಸುವ ವ್ಯಕ್ತಿ. ಜೈಲಿಗೆ ಹೋಗಿ ಬಂದಿದ್ದಾನೆ. ಹಳ್ಳಿಯ ಯುವಕ ಕರ್ಣ (ಧನಂಜಯ) ಊರಿಗೆ ಒಳಿತು ಮಾಡುತ್ತಾ ಜೀವನ ಸಾಗಿಸುತ್ತಿರುತ್ತಾನೆ. ತನ್ನದೇ ಹುಡುಗರು ಹೆಣ್ಣುಮಕ್ಕಳನ್ನು ಚುಡಾಯಿಸಿದರೂ ಆತ ಸಹಿಸಿಕೊಳ್ಳುವುದಿಲ್ಲ. ಹುಲಿ ಶಿವಪ್ಪ ಹಾಗೂ ಕರ್ಣ ಮುಖಾಮುಖಿ ಆಗ್ತಾರೆ, ಅವರಿಬ್ಬರೂ ಹೀರೋಗಳಾ? ವಿಲನ್ ಯಾರು ಎಲ್ಲವೂ ಚಿತ್ರ ನೋಡಿನೇ ತಿಳೀಬೇಕು.
ತಮಿಳಿನಲ್ಲಿ ಸಕ್ಸಸ್ ಆದ ‘ಕಡುಗು’ ಚಿತ್ರಕ್ಕೆ ವಿಜಯ್ ಮಿಲ್ಟನ್ ನಿರ್ದೇಶನ ಮಾಡಿದ್ದು ಅದೇ ಕಥೇನ ಕನ್ನಡಕ್ಕೆ ತಂದಿದ್ದಾರೆ ಆದರೆ ಮೇಕಿಂಗ್ನಲ್ಲಿ ಸಾಕಷ್ಟು ಬದಲಾವಣೆ ಮಾಡಿಕೊಂಡಿದ್ದಾರೆ. ‘ಟಗರು’ ಬಳಿಕ ಶಿವರಾಜ್ಕುಮಾರ್ ಹಾಗೂ ಧನಂಜಯ ಮತ್ತೆ ಮುಖಾಮುಖಿ ಆಗಿದ್ದಾರೆ. ಮಾಸ್ ವಿಚಾರಗಳ ಜತೆ ಸಮಾಜಕ್ಕೆ ಸಂದೇಶ ನೀಡುವ ಸಿನಿಮಾ ಇದು
ಇಡೀ ಸಿನಿಮಾವನ್ನು ಶಿವಣ್ಣ ಆವರಿಸಿಕೊಂಡಿದ್ದಾರೆ. ಅವರು ವಯಸ್ಸು ೬೦ ಆಗಿದ್ರೂ ೧೬ರ ಯುವಕನಿಗೆ ಅಭಿನಯಿಸಿದ್ದಾರೆ ಶಿವರಾಜ್ಕುಮಾರ್ ಮಾಸ್ ಆ್ಯಕ್ಷನ್ಗೆ ಆಡಿಯನ್ಸ್ನಿಂದ ಶಿಳ್ಳೆ ಗ್ಯಾರಂಟಿ.
ಕರ್ಣನಾಗಿ ಧನಂಜಯ ತೂಕ ಇರೋ ಪಾತ್ರ ಮಾಡಿದ್ದಾರೆ, ಪೃಥ್ವಿ ಅಂಬಾರ್ ಯಶಾ ಶಿವಕುಮಾರ್, ಅಂಜಲಿ, ಶಶಿಕುಮಾರ್ ಶರತ್ ಲೋಹಿತಾಶ್ವ ಅಭಿನಯ ಇಷ್ಟವಾಗುತ್ತದೆ ರಾಜಕಾರಣಿಗಳು ಮತ್ತು ಪೊಲೀಸ್ ವ್ಯವಸ್ಥೆ ಬಗ್ಗೆ ಸಿನಿಮಾದಲ್ಲಿ ಹೇಳಲಾಗಿದೆ. ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯದ ಕುರಿತು ಸಂದೇಶ ಕೂಡ ಇದೆ
ಛಾಯಾಗ್ರಾಹಕರೂ ಆಗಿರೋ ನಿರ್ದೇಶಕ ಸಿನಿಮಾಟೋಗ್ರಫಿ ಚೆನ್ನಾಗಿ ಮಾಡಿದ್ದಾರೆ. ಅನೂಪ್ ಸಿಳೀನ್ ಹಿನ್ನೆಲೆ ಸಂಗೀತ ಉತ್ತಮ ಆಗಿದೆ. ಆದರೆ ಹಾಡುಗಳಾವುದೂ ಮನಸ್ಸಲ್ಲಿ ನಿಲ್ಲುವುದಿಲ್ಲ.