ಮೈಸೂರು : ನಗರದ ಸ್ವಚ್ಛತೆಗಾಗಿ ಪೌರಕಾರ್ಮಿಕರು ಹಗಲಿರುಳು ಶ್ರಮಿಸುತ್ತಾರೆ. ಅವರ ಸುರಕ್ಷತೆಗಾಗಿ ಸರ್ಕಾರ ಕೋಟ್ಯಾಂತರ ರೂ. ಮೀಸಲಿಟ್ಟಿದೆ. ಹೀಗಿದ್ದರೂ ಪೌರಕಾರ್ಮಿಕರಿಗೆ ಸ್ವಚ್ಛತಾ ಪರಿಕರಗಳು ತಲುಪುತ್ತಿಲ್ಲ. ತಲುಪಿದರೂ ಸಮರ್ಪಕವಾಗಿ ಬಳಕೆಯಾಗುತ್ತಿಲ್ಲ. ಚರಂಡಿ, ಮ್ಯಾನ್ ಹೋಲ್ ಗಳನ್ನ ಸ್ವಚ್ಛಗೊಳಿಸುವಾಗ ಸುರಕ್ಷತೆಗಾಗಿ ನೀಡಲಾದ ಪರಿಕರಗಳನ್ನ ಧರಿಸುತ್ತಿಲ್ಲ. ಮೈಸೂರಿನ ಚಾಮುಂಡಿಪುರಂನ ಚರಂಡಿಯೊಂದರ ಸ್ವಚ್ಛತೆ ಮಾಡುತ್ತಿರುವ ಪೌರಕಾರ್ಮಿಕರೊಬ್ಬರು ಕೈಗ್ಲೌಸು, ಕಾಲಿಗೆ ಬೂಟು, ಮಾಸ್ಕ್ ಧರಿಸದೇ ಕೆಲಸ ಮಾಡುತ್ತಿದ್ದಾರೆ. ಸುಮಾರು ನಾಲ್ಕು ಅಡಿ ಆಳವಿರುವ ಚರಂಡಿಗೆ ಇಳಿದು ಸ್ವಚ್ಛತಾ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಈಗಾಗಲೇ ಮಾರಕ ರೋಗಗಳು ಭೀತಿ ಹುಟ್ಟಿಸಿದೆ, ಹಲವರ ಪ್ರಾಣ ತೆಗೆದಿದೆ. ಹೀಗಿದ್ದೂ ಸುರಕ್ಷತಾ ಕ್ರಮ ಅನುಸರಿಸದೇ ಸ್ವಚ್ಛತಾ ಕಾರ್ಯದಲ್ಲಿ ನಿರತರಾಗಿದ್ದಾರೆ. ಇನ್ನಾದರೂ ಪೌರಕಾರ್ಮಿಕರ ಜೀವನದಲ್ಲಿ ಚೆಲ್ಲಾಟವಾಡದೆ ಅಧಿಕಾರಿಗಳು ಸುರಕ್ಷತಾ ಕ್ರಮ ಅನುಸರಿಸುವರೇ…?