ನನ್ನ ಸ್ನೇಹಿತರು ಚೆನ್ನೈಲಿ ನನ್ನ ಪುಟ್ಟು ಪುಟ್ಟು ಅಂತಾನೇ ಕರೆಯೋದು ನನ್ನ ಒರಿಜಿನಲ್ ಹೆಸರು ನಾಗರಾಜ್ ಶಿವಪುಟ್ಟಸ್ವಾಮಿ ಇವಾಗ್ಲು ನಾನು ಚೆಕ್ ಗೆ ಸೈನ್ ಮಾಡೋದು ಪುಟ್ಟಸ್ವಾಮಿ ಅಂತಾನೆ ನನ್ನ ಹೆಸರು ಶಿವರಾಜ್ ಕುಮಾರ್ ಅಂತಾ ಇರಲಿಲ್ಲಾ…! ಹೀಗೆಂದು ಹೇಳಿದವರು ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್. ಹೌದು ನಟ ಶಿವಣ್ಣ ಅವರ ಅಸಲಿ ಹೆಸರು ಶಿವರಾಜ್ ಕುಮಾರ್ ಅಂತಲ್ಲ. ಈ ಕುರಿತು ಮೈಸೂರಲ್ಲಿ ಮಾತನಾಡಿದ ನಟ ನನ್ನ ಎಲ್ಲಾ ದಾಖಲೆಗಳಲ್ಲಿ ಶಿವಪುಟ್ಟಸ್ವಾಮಿ ಅಂತಾನೆ ಇದೆ.ಸಿನಿಮಾಗೆ ಎಂಟ್ರಿ ಆಗೋವಾಗ ಅಪ್ಪಾಜಿ (ರಾಜ್ ಕುಮಾರ್) ಗೆಳೆಯ ರಾಮಸ್ವಾಮಿ ನೀವು ರಾಜ್ ಕುಮಾರ್ ಕುಟುಂಬದವರು, ಶಿವರಾಜ್ ಕುಮಾರ್ ಎಂದು ಹೆಸರಿಟ್ಟುಕೊಳ್ಳಿ ಅಂತ ಸಲಹೆ ನೀಡಿದರು ಹಾಗಾಗಿ ಹೆಸರನ್ನು ಶಿವರಾಜ್ ಎಂದು ಬದಲಿಸಿದೆ ಎಂದಿದ್ದಾರೆ