ಸಮಂತ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ತೆಲಂಗಾಣ ಸಚಿವ ಕೆಟಿ ರಾಮ್ ರಾವ್ ಅವರ ಫೋಟೋ ಒಂದನ್ನು ಅಪ್ಲೋಡ್ ಮಾಡಿದ ಕೆಲವೇ ನಿಮಿಷಗಳಲ್ಲಿ ಡಿಲೀಟ್ ಮಾಡಿದ್ದಾರೆ. ಆದರೆ ಅಭಿಮಾನಿಗಳು ಈ ಪೋಸ್ಟ್ ಅನ್ನು ಸ್ಕ್ರೀನ್ ಶಾಟ್ ತೆಗೆದು ಸಮಂತ ಅವರಿಗೂ ತೆಲಂಗಾಣ ಸಚಿವ ಕೆಟಿ ರಾಮ್ ರಾವ್ ಸಂಬಂಧಗಳ ಬಗ್ಗೆ ಗಾಸಿಪ್ ಮಾಡಲು ಪ್ರಾರಂಭಿಸಿದ ನಂತರ ಸಮಂತ ತಾಂತ್ರಿಕ ಸಮಸ್ಯೆಯಿಂದ ಈ ಲೋಪವಾಗಿದೆ ಎಂದು ಹೇಳಿದ್ದಾರೆ. ಆದರೆ, ಅಸಲಿ ವಿಷಯವೇ ಬೇರೆಯೇ ಇದೆ ಎನ್ನುತ್ತಾರೆ ಅವರ ಅಪ್ಪಟ ಅಭಿಮಾನಿಗಳು. ಸಮಂತ ಹಾಗು ಕೆಟಿ ರಾಮ್ ರಾಮ್ ಅವರ ಸೋಶಿಯಲ್ ಮೀಡಿಯಾ ಖಾತೆಗಳು ಪಿ ಆರ್ ಏಜೆನ್ಸಿ ಎನ್ನುವ ಸಂಸ್ಥೆ ಹ್ಯಾಂಡಲ್ ಮಾಡುತ್ತಿದ್ದು, ಕೆಟಿ ರಾಮ್ ರಾಮ್ ಅವರ ಖಾತೆಯಲ್ಲಿ ಪೋಸ್ಟ್ ಆಗಬೇಕಿದ್ದ ಅವರ ಫೋಟೋ ಸಮಂತ ಅವರ ಖಾತೆಯಲ್ಲಿ ಅಪ್ಲೋಡ್ ಆಗಿದೆ ಎನ್ನಲಾಗುತ್ತಿದೆ.