ಗದಗ: ನೆನ್ನೆ ಬಾಗಲಕೋಟೆಯಲ್ಲಿ ಸರ್ಕಾರ್ 30 ಪರ್ಸೆಂಟ್ ಹೇಳಿಕೆ ವಿಚಾರವನ್ನು ಮಠಾಧೀಶರೇ ಪ್ರಾಸ್ತಾಪಿಸಿದ್ದ ಸರ್ಕಾರವನ್ನು ತೀವ್ರ ಮುಜುಗರಕ್ಕೀಡುಮಾಡಿದೆ.ಹೌದು, ಈ ವಿಚಾರವಾಗಿ ಶಿರಹಟ್ಟಿಯ ಫಕೀರೇಶ್ವರಮಠದ ದಿಂಗಾಲೇಶ್ವರ ಸ್ವಾಮೀಜಿಗಳ 30 ಪರ್ಸೆಂಟೇಜ್ ಹೇಳಿಕೆ ಈಗಾಗಲೇ ವಿರೋಧ ಪಕ್ಷಗಳ 40 ಪರ್ಸೆಂಟ್ ಆರೋಪದ ಹೋರಾಟಕ್ಕೆ ಮತ್ತಷ್ಟು ಬಲತಂದಿದೆ. ಗುತ್ತಿಗೆದಾರ ಸಂತೋಷ ಸಾವಿನ ನಂತರ ಕಾಂಗ್ರೆಸ್ ಪಕ್ಷ ಈ ಪರ್ಸೆಂಟೇಜ್ ವ್ಯವಹಾರವನ್ನಿಟ್ಟುಕೊಂಡು ಬೀದಿಗಿಳಿದಿದೆ. ಈ ಕಾರಣಕ್ಕಾಗಿ ಪ್ರಸ್ತುತ ಸನ್ನಿವೇಶದಲ್ಲಿ ಸರ್ಕಾರದ ಪರ್ಸೆಂಟೇಜ್ ವ್ಯವಹಾರದ ಕುರಿತು ದಿಂಗಾಲೇಶ್ವರ ಶ್ರೀಗಳು ಪ್ರತಿಕ್ರಿಯಿಸಿದ್ದು ಮಹತ್ವ ಪಡೆದುಕೊಂಡಿದೆ. ಇದೇ ವಿಚಾರವಾಗಿ ಶಾಸಕ ಹೆಚ್.ಕೆ. ಪಾಟೀಲ, ಮಠದ ಹಣವನ್ನೂ ಕಿತ್ತುಕೊಳ್ಳುವ ಮನೋಭಾವ ಸರ್ಕಾರದಲ್ಲಿದ್ರೆ, ಇವರನ್ನ ದೇವರೇ ಕಾಪಾಡಬೇಕು. ಬಿಜೆಪಿ ಸರ್ಕಾರ ಯಾವ ಮಟ್ಟಕ್ಕೆ ಇಳಿದಿದೆ ಅನ್ನೋದು ಇದ್ರಿಂದ ಸ್ಪಷ್ಟವಾಗುತ್ತೆ. ವಿಧಾನ ಸಭೆ, ಪರಿಷತ್ ನಲ್ಲಿ ಈ ಹಿಂದೆ ಅವರದೇ ಪಕ್ಷದ ಸದಸ್ಯರು ಆ ಭಾವ ಬರುವ ಹಾಗೆ ಮಾತಾಡಿದ್ರು. ಅಲ್ದೆ ಗುತ್ತೆಗೆದಾರರ ಸಂಘವು ಪ್ರಧಾನ ಮಂತ್ರಿಯವರಿಗೆ, ಪಕ್ಷದ ರಾಜ್ಯಾಧ್ಯಕ್ಷ ನಡ್ಡಾ ಅವರಿಗೆ ಪತ್ರ ಬರೆದಿದ್ರು.
ಇವೆಲ್ಲದ್ರ ನಂತರ ಸ್ವಾಮಿಗಳೇ ಈ ವಿಚಾರವಾಗಿ ಪ್ರತಿಕ್ರಿಯಿಸಿದ್ದು, ಸರ್ಕಾರದ ಬಹಿರಂಗ ಭ್ರಷ್ಟಾಚಾರವನ್ನು ಬಹಿರಂಗಗೊಳಿಸಿದೆ. ಬಹಿರಂಗ ಭ್ರಷ್ಟಾಚಾರ ಅವರ ಕಾರ್ಯಕರ್ತನನ್ನೇ ಬಲಿ ಪಡೆದಿದೆ. ಈ ವಿಚಾರವಾಗಿ ಇನ್ನು ಏನು ಸಾಬೀತು ಮಾಡಬೇಕು?
ಇಷ್ಟೆಲ್ಲ ನಡೆದ್ರೂ ಸರ್ಕಾರ ನಡೆಸುತ್ತಿದ್ದಾರೆ ಅಂದ್ರೆ ಬಿಜೆಪಿಯವರಿಗೆ ನಾಚಿಕೆಯಾಗಬೇಕು. ಇದರಿಂದ ಬಿಜೆಪಿ ಸರ್ಕಾರ ನೈತಿಕ ಹಕ್ಕನ್ನು ಕಳೆದುಕೊಂಡಂತಾಗಿದೆ ಎನ್ನುವ ಅಭಿಪ್ರಾಯ ವ್ಯಕ್ತವಾಗಿದೆ.