ಪ್ರಶಾಂತ್ ನೀಲ್ ಅವರು ಸ್ಯಾಂಡಲ್ವುಡ್ನ ಯಶಸ್ವಿ ನಿರ್ದೇಶಕ ಎನ್ನುವ ಖ್ಯಾತಿಗೆ ಪಾತ್ರರಾಗಿದ್ದಾರೆ. ಅವರ ನಿರ್ದೇಶನದ ‘ಕೆಜಿಎಫ್ 2’ ಸಿನಿಮಾ ದೊಡ್ಡ ಮಟ್ಟದ ಯಶಸ್ಸು ಕಂಡಿದೆ. ವಿಷಯ ಏನಂದ್ರೆ ಪುನೀತ್ ರಾಜ್ಕುಮಾರ್ ಹಾಗೂ ಪ್ರಶಾಂತ್ ನೀಲ್ ಅವರು ಒಟ್ಟಾಗಿ ಒಂದು ಸಿನಿಮಾ ಮಾಡಬೇಕಿತ್ತು ಆದ್ರೆ ಅದು ಕಾರಣಾಂತರದಿಂದ ತಪ್ನಿಹೋಗಿತ್ತು.ಇದನ್ನು ಪ್ರಶಾಂತ್ ನೀಲ್ ಖಚಿತಪಡಿಸಿದ್ದಾರೆ. ಆ್ಯಂಕರ್ ಅನುಶ್ರೀ ಜತೆಗಿನ ಸಂದರ್ಶನದಲ್ಲಿ ಈ ವಿಚಾರವನ್ನು ಅವರು ಬಹಿರಂಗಪಡಿಸಿದ್ದಾರೆ.
ಕೆಜಿಎಫ್ ಗೆ ಮುನ್ನವೇ ಪ್ರಶಾಂತ್ ನೀಲ್ ಪುನೀತ್ ರಾಜಕುಮಾರ್ ಅವರ ಚಿತ್ರ ಮಾಡಬೇಕಿತ್ತು ಆದ್ರೆ ಅದಾಗಿರಲಿಲ್ಲ
‘ಉಗ್ರಂ ಆದ್ಮೇಲೆ ನಾನು ಪುನೀತ್ ಜತೆಗೆ ಒಂದು ಕಥೆ ಚರ್ಚೆ ಮಾಡಿದ್ದೆ. ಆ ಸಿನಿಮಾಗೆ ‘ಆಹ್ವಾನ’ ಎನ್ನುವ ಶೀರ್ಷಿಕೆ ಇಟ್ಟಿದೆ. ಇದೊಂದು ಪಕ್ಕಾ ಫ್ಯಾಮಿಲಿ ಕಥೆ ಆಗಿತ್ತು. ಉಗ್ರಂ ಸಿನಿಮಾ ಹಿಟ್ ಜನರಿಗೆ ತಲುಪದೆ ಇರಲು ಫ್ಯಾಮಿಲಿ ಎಲಿಮೆಂಟ್ ಇರಲಿಲ್ಲ ಅನ್ನೋದು ನನ್ನ ನಂಬಿಕೆ. ಈ ಕಾರಣಕ್ಕೆ ನಾನು ಫ್ಯಾಮಿಲಿ ಎಲಿಮೆಂಟ್ ಇರುವ ಕಥೆ ಆಯ್ಕೆ ಮಾಡಿಕೊಂಡಿದ್ದೆ. ಅಪ್ಪು ಅವರಿಗೆ ಕಥೆ ಇಷ್ಟವಾಗಿತ್ತು. ಆ ಸಂದರ್ಭದಲ್ಲಿ ಅವರು ಹಲವು ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇದ್ದರು. ಹೀಗಾಗಿ ಸಿನಿಮಾ ಮಾಡಲು ಆಗಿರಲಿಲ್ಲ’ ಪ್ರಶಾಂತ್ ನೀಲ್ ಹೇಳಿದ್ದಾರೆ.
ಆ ನಂತರ ನಾನು ಕೆಜಿಎಫ್ ಶುರು ಮಾಡಿದೆ, ಮತ್ತೆ ಪುನೀತ್ ಗಾಗಿ ಸಿನಿಮಾ ಮಾಡೋಕೆ ಆಗಿಲ್ಲ ಅಂತ ನಿರ್ದೇಶಕ ಹೇಳಿದ್ದಾರೆ