ತುಮಕೂರು : ಹಾಲು ಅಳತೆಯಲ್ಲಿ ಮೋಸ ಮಾಡುತ್ತಿದ್ದದ್ದನ್ನು ಪತ್ತೆ ಮಾಡಿದ ರೈತನ ಮೇಲೆ ಡೈರಿ ಕಾರ್ಯದರ್ಶಿ ಹಲ್ಲೆಗೆ ಯತ್ನಿಸಿರುವ ಘಟನೆ ನಡೆದಿದೆ.
ತುಮಕೂರು ಹಾಲು ಒಕ್ಕೂಟ ವ್ಯಾಪ್ತಿಯ ಕುಣಿಗಲ್ ತಾಲೂಕಿನ ಹೆಡ್ಡಿಗೆರೆ ಡೈರಿಯಲ್ಲಿ ರೈತರಿಗೆ ಮೋಸ ಮಾಡಲಾಗುತ್ತಿದೆ ಎಂದು ಆರೋಪಿಸಿ ಗುರುವಾರ ರೈತರು ತಗಾದೆ ತೆಗೆದಿದ್ದಾರೆ. ಹಾಲು ಪರೀಕ್ಷೆಗೆ ಹೆಚ್ಚುವರಿ ಹಾಲು ಪಡೆದು ಮೋಸ ಮಾಡಲಾಗುತ್ತಿದೆ ಎಂದು ಆರೋಪಿಸಿರುವ ರೈತರು, ಮೋಸವನ್ನು ಪತ್ತೆ ಮಾಡಿ ಪ್ರಶ್ನಿಸಿದ ರೈತರ ಕೊರಳಪಟ್ಟಿ ಹಿಡಿದು ಕಾರ್ಯದರ್ಶಿ ಬೊರಮ್ಮ ಎಂಬಾಕೆ ಹಲ್ಲೆಗೆ ಯತ್ನಿಸಿದ್ದಾಳೆ ಎಂದು ದೂರಿದ್ದಾರೆ.
ಹೆಡ್ಡಿಗೆರೆ ಹಾಲು ಉತ್ಪಾದಕರ ಸಹಕಾರ ಸಂಘದಿಂದ ಸಂಗ್ರಹಿಸುವ ಹಾಲಿನಲ್ಲಿ ರೈತರಿಗೆ ಮೋಸ ಮಾಡಲಾಗುತ್ತಿದೆ ಎಂಬ ದೂರು ಕೇಳಿ ಬಂದಿದ್ದು, ಹಾಲು ಪರೀಕ್ಷೆಗೆ 30 ಮಿ.ಲೀ ಹಾಲು ಪಡೆಯುವ ಬದಲು 180 ಮಿ.ಲೀ ಹಾಲು ಪಡೆಯಲಾಗುತ್ತಿದೆ ಎಂದು ಕಾರ್ಯದರ್ಶಿ ಬೋರಮ್ಮ ವಿರುದ್ಧ ರೈತರು ಆರೋಪಿಸಿದ್ದಾರೆ.
ಹೆಚ್ಚುವರಿ ಹಾಲು ಪಡೆಯುತ್ತಿದ್ದದ್ದನ್ನು ಪಶ್ನೆ ಮಾಡಿದಾಗ 50 ಮಿ.ಲೀ ಅಷ್ಟೇ ಎಂದು ವಾದಿಸಿ ಕಾರ್ಯದರ್ಶಿ ಬೋರಮ್ಮ ಗಲಾಟೆ ತೆಗೆದಿದ್ದಾರೆ. ಬಳಿಕ ರೈತರು ಸ್ಥಳದಲ್ಲೇ ತಾವೇ ಅಳತೆ ಮಾಡಿ ನೋಡಿದಾಗ ಹೆಚ್ಚುವರಿ ಹಾಲು ಪಡೆದಿದ್ದು ಬಯಲಿಗೆ ಬಂದಿದೆ.
ಇದಕ್ಕೂ ಮುನ್ನ ರೈತರು ಅಳತೆ ಮಾಡಲು ಮುಂದಾದಾಗ ಲೀಟರ್ ಮುಟ್ಟದಂತೆ ಕಾರ್ಯದರ್ಶಿ ಬೋರಮ್ಮ ತಡೆಯೊಡ್ಡಿದ್ದು, ರೈತರ ಕೊರಳಪಟ್ಟಿ ಹಿಡಿದು ಗಲಾಟೆ ಮಾಡಿದ್ದಾಳೆ. ಆದಾಗ್ಯೂ ರೈತರು ಪಟ್ಟು ಬಿಡದೆ ಅಳತೆ ಮಾಡಿದಾಗ ಮೋಸ ಮಾಡುತ್ತಿದ್ದಿದ್ದು ಬಯಲಾಗಿದೆ ಎಂದು ಸ್ಥಳೀಯ ರೈತರು ಆರೋಪಿಸಿದ್ದಾರೆ.
ಮೋಸ ಬಯಲಿಗೆ ಎಳೆದ ರೈತ – ಡೈರಿ ಕಾರ್ಯದರ್ಶಿಯಿಂದ ಹಲ್ಲೆ
Previous Articleಜಾನ್ವಿ ಕಪೂರ್ ಅಭಿನಯದ ‘Good Luck Jerry’ ಟ್ರೈಲರ್ ಬಿಡುಗಡೆ
Next Article ‘ಗಾಳಿಪಟ-2’ ಎಣ್ಙೆ ಸಾಂಗ್ ರಿಲೀಸ್!