ಮುಂಬಯಿ(ಮಹಾರಾಷ್ಟ್ರ),ಜು.16-ಮೃತ ಮಹಿಳೆಯ ಅಂಗಾಂಗದಾನದಿಂದ ಯೋಧರು ಸೇರಿ ಐವರ ಪ್ರಾಣ ಉಳಿಸಿ ಸ್ಪೂರ್ತಿ ನೀಡುವ ಘಟನೆ ಪುಣೆಯಲ್ಲಿ ನಡೆದಿದೆ.
ಪುಣೆಯ ಸದರ್ನ್ ಕಮಾಂಡ್ ಆಸ್ಪತ್ರೆಯಲ್ಲಿ ಸೇನಾ ಯೋಧರು ಸೇರಿದಂತೆ ಮೃತ ಮಹಿಳೆಯ ಅಂಗಾಂಗ ದಾನವು ಐವರು ಜೀವಗಳನ್ನು ಉಳಿಸಿದೆ.
ಮಹಿಳೆಗೆ ಮೆದುಳಿನ ಸಮಸ್ಯೆ ಉಂಟಾಗಿದ್ದರಿಂದ ಆಕೆಯನ್ನು ಕಮಾಂಡ್ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಘಲಕಾರಿಯಾಗದೇ ಆಕೆ ಸಾಯುವ ಪರಿಸ್ಥಿತಿಯಲ್ಲಿ ಇದ್ದಳು. ಈ ಹಿನ್ನೆಲೆ ಆಕೆಯ ಕುಟುಂಬದವರು ಮಹಿಳೆಯ ಅಗಾಂಗಗಳನ್ನು ಅಗತ್ಯ ಇರುವ ರೋಗಿಗಳಿಗೆ ದಾನ ಮಾಡಬೇಕೆಂದು ನಿರ್ಧರಿಸಿದ್ದಾರೆ.
ಕಳೆದ ಜುಲೈ 14 ರ ರಾತ್ರಿ ಮತ್ತು ಜುಲೈ 15 ರ ಮುಂಜಾನೆ, ಮೂತ್ರಪಿಂಡದ ಅಂಗಗಳನ್ನು ಭಾರತೀಯ ಸೇನೆಯ ಇಬ್ಬರು ಸೈನಿಕರಿಗೆ ಕಸಿ ಮಾಡಲಾಯಿತು. ಕಣ್ಣುಗಳನ್ನು ಸಶಸ್ತ್ರ ಪಡೆಗಳ ವೈದ್ಯಕೀಯ ಕಾಲೇಜು ಕಣ್ಣಿನ ಬ್ಯಾಂಕ್‍ನಲ್ಲಿ ಸಂರಕ್ಷಿಸಲಾಗಿದೆ ಮತ್ತು ಪುಣೆಯ ರೂಬಿ ಹಾಲ್ ಕ್ಲಿನಿಕ್‍ನಲ್ಲಿ ರೋಗಿಯೊಬ್ಬರಿಗೆ ಮಹಿಳೆಯ ಲಿವರ್ ನೀಡಲಾಯಿತು.
ಈ ಕುರಿತು ಟ್ವೀಟ್ ಮಾಡಿದ ಅಧಿಕಾರಿಗಳು ಅಂಗಾಂಗ ದಾನವನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ಟ್ವೀಟ್‍ನಲ್ಲಿ, ಸದರ್ನ್ ಕಮಾಂಡ್ ಆಸ್ಪತ್ರೆಯಲ್ಲಿ ವೈದ್ಯಕೀಯ ತಜ್ಞರ ಉತ್ತಮ ಕೆಲಸ, ಅವರ ಪಟ್ಟುಬಿಡದ ಪ್ರಯತ್ನ ಐದು ತೀವ್ರ ಅಸ್ವಸ್ಥ ರೋಗಿಗಳಿಗೆ ಜೀವನ ಮತ್ತು ದೃಷ್ಟಿ ನೀಡಿತು ಎಂದು ಬರೆದುಕೊಂಡಿದ್ದಾರೆ.