ಬೆಂಗಳೂರು,ಜು.19-ರಾಜ್ಯ ಪೊಲೀಸ್ ಮಹಾನಿರ್ದೇಶಕ(ಡಿಜಿ-ಐಜಿಪಿ) ಆದೇಶದ ಬಳಿಕವೂ ನಿಯಮ ಉಲ್ಲಂಘಿಸಿ ಸುಖಾ ಸುಮ್ಮನೆ ದ್ವಿಚಕ್ರ ವಾಹನಗಳನ್ನು ತಡೆಯುತ್ತಿದ್ದ ಹೆಚ್ಎಸ್ಆರ್ ಸಂಚಾರ ಠಾಣೆಯ ಪೊಲೀಸ್ ಪೇದೆಯ ವಿರುದ್ಧ ತನಿಖೆಗೆ ಆದೇಶಿಸಲಾಗಿದೆ.
ಡಿಜಿಪಿ ಆದೇಶ ಉಲ್ಲಂಘಿಸಿ ಬೆಳ್ಳಂದೂರು ಇಕೋ ಸ್ಪೇಸ್ ಬಳಿ ಸುಖಾ ಸುಮ್ಮನೆ ದ್ವಿಚಕ್ರ ವಾಹನ ತಡೆಯುತ್ತಿದ್ದರು. ಈ ಕುರಿತು ಸಾರ್ವಜನಿಕರು ಟ್ವೀಟ್ ಮೂಲಕ ಮೂಲಕ ಡಿಜಿಪಿ ಪ್ರವಿಣ್ ಸೂದ್, ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿಗೆ ದೂರು ನೀಡಿದ್ದರು.
ಈ ಬಗ್ಗೆ ತನಿಖೆ ನಡೆಸುವಂತೆ ಪೊಲೀಸ್ ಆಯುಕ್ತರು ನಗರ ಸಂಚಾರ ಜಂಟಿ ಪೊಲೀಸ್ ಆಯುಕ್ತ ರವಿಕಾಂತೇಗೌಡ ಹಾಗು ಪೂರ್ವ ವಿಭಾಗದ ಡಿಸಿಪಿ ಕಲಾ ಕೃಷ್ಣಸ್ವಾಮಿಗೆ ಸೂಚನೆ ನೀಡಿದ್ದರು.
ತನಿಖೆ ವೇಳೆ ಕಾನ್ಸ್‌ಟೇಬಲ್ ಸುಖಾ ಸುಮ್ಮನೆ ವಾಹನ ತಡೆದಿರುವುದು ಬೆಳಕಿಗೆ ಬಂದಿದೆ. ಅಲ್ಲದೆ ಪೊಲೀಸರು ಕರ್ತವ್ಯ ವೇಳೆ ಬಾಡಿ ವೋರ್ನ್ ಕ್ಯಾಮೆರಾ ಆನ್ ಮಾಡಿಕೊಂಡು ಕೆಲಸ ಮಾಡಬೇಕು. ಆದರೆ ಟ್ರಾಫಿಕ್ ಕಾನ್ಸ್‌ಟೇಬಲ್ ಬಾಡಿ ವೋರ್ನ್ ಕ್ಯಾಮರಾ ರೆರ್ಕಾಡಿಂಗ್ ಆನ್ ಮಾಡದೇ ಕರ್ತವ್ಯ ನಿರ್ವಹಿಸುತ್ತಿದ್ದ ಎಂದು ತಿಳಿದುಬಂದಿದ್ದು, ಈ ಬಗ್ಗೆ ಜಂಟಿ ಪೊಲೀಸ್ ಆಯುಕ್ತ ರವಿಕಾಂತೇಗೌಡ ಅವರ ವಿರುದ್ಧ ಇಲಾಖೆ ತನಿಖೆಗೆ ಆದೇಶಿಸಿದ್ದಾರೆ.
Previous Articleರಾಘವೇಂದ್ರ ಶೆಟ್ಟಿ ಒರ್ವ ಕ್ರಿಮಿನಲ್…! ರೂಪಾ ಮೌದ್ಗೀಲ್ ಆರೋಪ
Next Article ಉತ್ಸವದ ವೇಳೆ ಕುಸಿದು ಬಿದ್ದ ಅರ್ಚಕ