ಲಕ್ನೋ (ಉತ್ತರ ಪ್ರದೇಶ),ಜು.20-ಚೌಧರಿ ಚರಣ್ ಸಿಂಗ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ಕಾರ್ಯಾಚರಣೆ ಕೈಗೊಂಡು ದುಬೈನಿಂದ ಬಂದಿಳಿದ ಪ್ರಯಾಣಿಕನೊಬ್ಬನನ್ನು ಬಂಧಿಸಿ 20,54 ಲಕ್ಷ ಮೌಲ್ಯದ ಏರ್‌ಗನ್‌ಗಳೂ ಸೇರಿದಂತೆ ಶಸ್ತ್ರಾಸ್ತ್ರ ಪರಿಕರಗಳನ್ನು ವಶಪಡಿಸಿಕೊಂಡಿದ್ದಾರೆ.
ದುಬೈನಿಂದ ಬಂದಿಳಿದ ಪ್ರಯಾಣಿಕನೊಬ್ಬನನ್ನು ಹಸಿರು ಕಾರಿಡಾರ್ ಬಳಿ ಕಸ್ಟಮ್ಸ್ ಅಧಿಕಾರಿಗಳು ಪರಿಶೀಲನೆ ನಡೆಸಿದಾಗ ಅಕ್ರಮವಾಗಿ ಲಗೇಜ್ ಬ್ಯಾಗ್ನಲ್ಲಿ 10 ಏರ್ ಗನ್ಗಳು ಸೇರಿದಂತೆ ಟೆಲಿಸ್ಕೋಪಿಕ್ ದೃಶ್ಯಗಳು ಮತ್ತು ಇತರೆ ಶಸ್ತ್ರಾಸ್ತ್ರ ಪರಿಕರಗಳನ್ನು ಯಾವುದೇ ದಾಖಲೆಗಳಿಲ್ಲದೇ ಸಾಗಿಸುತ್ತಿರುವುದು ಕಂಡುಬಂದಿದೆ.
ಬಂದೂಕುಗಳ ಜೊತೆ ಬ್ಯಾಗ್ ಅನ್ನು ಕಸ್ಟಮ್ಸ್ ಆಕ್ಟ್, 1962 ರ ಸೆಕ್ಷನ್ 110 ರ ಅಡಿ ವಶಪಡಿಸಿಕೊಳ್ಳಲಾಗಿದೆ. ಪ್ರಯಾಣಿಕನನ್ನು ಬಂಧಿಸಲಾಗಿದ್ದು, ಲಕ್ನೋದ ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಲಾಗುವುದು. ಈ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದಕ್ಕೂ ಮುನ್ನ, ಕಳೆದ ಜುಲೈ 14 ರಂದು ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಯೆಟ್ನಾಂನಿಂದ ಆಗಮಿಸಿದ ಭಾರತೀಯ ದಂಪತಿಯನ್ನು ಬಂಧಿಸಿ ಅವರ ಬ್ಯಾಗ್‌ಗಳಿಂದ 22 ಲಕ್ಷಕ್ಕೂ ಹೆಚ್ಚು ಮೌಲ್ಯದ ಕನಿಷ್ಠ 45 ಗನ್‌ಗಳನ್ನು ಕಸ್ಟಮ್ಸ್ ಅಧಿಕಾರಿಗಳು ವಶಪಡಿಸಿಕೊಂಡಿದ್ದರು.
Previous Articleಇಡಿ ವಿಚಾರಣೆ: ಸೋನಿಯಾ ಗಾಂಧಿ ನಾಳೆ ಹಾಜರು
Next Article ವಂಚಕರ Gang Arrest..