ಮೇಕಪ್ ಕಲಾವಿದನಾಗಿ ಚಿತ್ರರಂಗ ಪ್ರವೇಶಿಸಿದ ದೇವರಾಜ್ ಕುಮಾರ್ ನಂತರದ ದಿನಗಳಲ್ಲಿ ನಿರ್ದೇಶಕರಾದರು. ನಿರ್ದೇಶನದೊಂದಿಗೆ ನಾಯಕನಾಗೂ ನಟಿಸಲು ಆರಂಭಿಸಿದರು. ಪ್ರಸ್ತುತ ಅವರು ನಾಯಕನಾಗಿ ನಟಿಸಿ, ನಿರ್ದೇಶಿಸಿರುವ “ತಾಜ್ ಮಹಲ್ 2” ಚಿತ್ರ ಸೆಪ್ಟೆಂಬರ್ 2 ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.
ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾದ ಭಾ.ಮ.ಹರೀಶ್ ಬಿಡುಗಡೆ “ತಾಜ್ ಮಹಲ್ 2 ” ಚಿತ್ರದ ಬಿಡುಗಡೆ
ದಿನಾಂಕವನ್ನು ಘೋಷಿಸುವ ಮೂಲಕ ಚಿತ್ರತಂಡಕ್ಕೆ ಶುಭ ಕೋರಿದರು.
2019ರಲ್ಲಿ ಈ ಚಿತ್ರವನ್ನು ಆರಂಭಿಸಿದ್ದೆವು. 2020 ರಲ್ಲಿ ಚಿತ್ರೀಕರಣ ಬಹುತೇಕ ಮುಕ್ತಾಯವಾಗಿತ್ತು. ನಂತರ ಬಂದ ಕೊರೋನದಿಂದ ಚಿತ್ರ ಸಿದ್ದವಾಗಲು ವಿಳಂಬವಾಯಿತು. ಇತ್ತೀಚೆಗೆ ಈ ಚಿತ್ರದ ಹಾಡೊಂದನ್ನು ಉತ್ತರ ಕರ್ನಾಟಕದಲ್ಲಿ ಜವಳಿ ಸಚಿವರಾದ ಶಂಕರ್ ಪಾಟೀಲ್ ಬಿಡುಗಡೆ ಮಾಡಿದರು. ಆ ಹಾಡು ಐದು ಲಕ್ಷಕ್ಕೂ ಅಧಿಕ ವೀಕ್ಷಣೆಯಾಗಿದೆ. ಟ್ರೇಲರ್ ಸಹ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಚಿತ್ರ ಸೆಪ್ಟೆಂಬರ್ 2 ರಂದು ಬಿಡುಗಡೆಯಾಗಲಿದೆ. ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾದ ಭಾ.ಮ.ಹರೀಶ್, ನಿರ್ಮಾಪಕರ ಸಂಘದ ಅಧ್ಯಕ್ಷರಾದ ಪ್ರವೀಣ್ ಕುಮಾರ್, ಉಮೇಶ್ ಬಣಕಾರ್ ಅವರು ಸೇರಿದಂತೆ ಇಲ್ಲಿ ನೆರೆದಿರುವ ಎಲ್ಲಾ ಗಣ್ಯರ ಸಹಕಾರವನ್ನು ನೆನೆಯುತ್ತಾ ಅವರಿಗೆ ಧನ್ಯವಾದ ತಿಳಿಸುತ್ತೇನೆ ಎಂದರು ನಾಯಕ ಹಾಗೂ ನಿರ್ದೇಶಕ ದೇವರಾಜ್ ಕುಮಾರ್.
ಮಹಿಳೆಯೊಬ್ಬರು ಈ ಚಿತ್ರ ನಿರ್ಮಾಣ ಮಾಡಿದ್ದಾರೆ. ಇತ್ತೀಚಿನ ದಿನಗಳಲ್ಲಿ ಚಿತ್ರ ನಿರ್ಮಾಣ ಮಾಡುತ್ತಿರುವ ಮಹಿಳೆಯರ ಸಂಖ್ಯೆ ಹೆಚ್ಚಾಗಿರುವುದು ಹೆಮ್ಮೆಯ ವಿಚಾರ. ಈ ಚಿತ್ರಕ್ಕೆ ಒಳ್ಳೆಯದಾಗಲಿ ಎಂದು ಕರ್ನಾಟಕ ಚಲನಚಿತ್ರ ನಿರ್ಮಾಪಕರ ಸಂಘದ ಅಧ್ಯಕ್ಷರಾದ ಪ್ರವೀಣ್ ಕುಮಾರ್ ಹಾರೈಸಿದರು.
ನಿರ್ಮಾಪಕ ಉಮೇಶ್ ಬಣಕಾರ್, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಉಪಾಧ್ಯಕ್ಷರಾದ ಶಿಲ್ಪ ಶ್ರೀನಿವಾಸ್, ಲಿಖಿತ್ ಫಿಲಂಸ್ ನ ರಮೇಶ್ ಬಾಬು, ಪ್ರದರ್ಶಕ ಕುಮಾರ್ ಚಿತ್ರತಂಡಕ್ಕೆ ಶುಭ ಕೋರಿದರು. ಚಿತ್ರದಲ್ಲಿ ಅಭಿನಯಿಸಿರುವ ಕಾಕ್ರೋಜ್ ಸುಧಿ,ವಿಕ್ಚರಿ ವಾಸು, ರಾಜದೇವ್ ಹಾಗು ಹಾಡು ಬರೆದಿರು ಮನ್ವರ್ಷಿ ನವಲಗುಂದ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
Previous Articleಮಾಜಿ ಸಚಿವ ಈಶ್ವರಪ್ಪ ಅವರಿಗೆ ಕ್ಲೀನ್ ಚಿಟ್..?
Next Article ಆಗಸ್ಟ್‌ನಲ್ಲಿ ರಾಕ್ಷಸರು ತೆರೆಗೆ