ಬೆಳಗಾವಿ,ಜು.26- ಐರನ್ ಹಾಗು ಫೋಲಿಕ್ ಆಸಿಡ್ ಮಾತ್ರೆ ಸೇವಿಸಿದ್ದ ವಿದ್ಯಾರ್ಥಿಗಳು ಅಸ್ವಸ್ಥರಾದ ಘಟನೆ ಜಿಲ್ಲೆಯ ಸರ್ಕಾರಿ ಶಾಲೆಯಲ್ಲಿ ನಡೆದಿದೆ.
ಸವದತ್ತಿ ತಾಲೂಕಿನ ಬಸಡೋಣಿ ಗ್ರಾಮದ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕೆಲವು ವಿದ್ಯಾರ್ಥಿಗಳು ಊಟದ ಬಳಿಕ ಸೇವಿಸಬೇಕಿದ್ದ ಮಾತ್ರೆಯನ್ನು ಊಟಕ್ಕೂ ಮೊದಲೇ ಸೇವಿಸಿದ್ದರಿಂದ ಅವಘಢ ಸಂಭವಿಸಿದೆ.
ಮಾತ್ರೆ ಸೇವಿಸಿದ 15 ವಿದ್ಯಾರ್ಥಿನಿಯರು, 6 ವಿದ್ಯಾರ್ಥಿಗಳು ಅಸ್ವಸ್ಥರಾಗಿದ್ದಾರೆ. ಹೊಟ್ಟೆನೋವು, ತಲೆನೋವು ಎಂದು ಬಳಲುತ್ತಿರುವ 21 ಮಂದಿಗೆ ಸವದತ್ತಿ ತಾಲೂಕಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು ಎಲ್ಲಾ ಮಕ್ಕಳು ಅಪಾಯ ದಿಂದ ಪಾರಾಗಿದ್ದಾರೆ.
ಘಟನಾ ಸ್ಥಳಕ್ಕೆ ಟಿಎಚ್‍ಒ ಡಾ. ಮಹೇಶ್ ಚಿತ್ತರಗಿ, ಬಿಇಒ ಶ್ರೀಶೈಲ್ ಕರಿಕಟ್ಟಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಐರನ್ ಮಾತ್ರೆ ಸೇವಿಸಿದ್ದ 21 ವಿದ್ಯಾರ್ಥಿಗಳು ಅಸ್ವಸ್ಥ
Previous Articleಕಾಲೇಜು ವಿದ್ಯಾರ್ಥಿಗಳ ಪಬ್ ಪಾರ್ಟಿಗೆ ಬಜರಂಗದಳದಿಂದ ಪಾರ್ಟಿಗೆ ತಡೆ
Next Article ನಾನು ಉಗ್ರನಾಗಿದ್ದು ಹೀಗೆ…?