ಬೆಂಗಳೂರು, ಜು.27- ಒಂದೇ ಕಾಲೇಜಿನ ಇಬ್ಬರು ವಿದ್ಯಾರ್ಥಿನಿಯರು ಕೊಳಚೆ ನೀರಿನ ಪಿನಾಕಿನಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಹೊಸಕೋಟೆ ತಾಲೂಕಿನ ತಿರುವರಂಗ ಬ್ರಿಡ್ಜ್‌ನಲ್ಲಿ ನಡೆದಿದೆ.
ಕೋಲಾರ ಜಿಲ್ಲೆ ಮಾಲೂರು ತಾಲೂಕಿನ ಲಕ್ಕೂರು ಪಿಯು ಕಾಲೇಜಿನಲ್ಲಿ ಓದುತ್ತಿದ್ದ ಸುಪ್ರಿತಾ (18) ಹಾಗು ರಾಜೇಶ್ವರಿ (18) ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿಯರು.
ಮಾಲೂರಿನ ಸುಪ್ರಿತಾ ಮತ್ತು ಹೊಸಕೋಟೆ ತಾಲೂಕಿನ ಬಾಗೂರಿನ ರಾಜೇಶ್ವರಿ ಇಬ್ಬರೂ ಒಟ್ಟಿಗೆ ಕೊಳಚೆ ನೀರಿನ ನಾಲೆಗೆ ಹಾರಿದ್ದಾರೆ. ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ. ಅಗ್ನಿಶಾಮಕ ದಳದ ಸಿಬ್ಬಂದಿ ಯುವತಿಯರ ಮೃತದೇಹ ಮೇಲಕ್ಕೆತ್ತಿದ್ದಾರೆ. ಅನುಗೊಂಡನಹಳ್ಳಿ ಪೊಲೀಸರು ಘಟನೆ ಸ್ಥಳಕ್ಕೆ ಭೇಟಿ ನೀಡಿ ಪರೀಶೀಲನೆ ನಡೆಸುತ್ತಿದ್ದಾರೆ.
Previous Articleಯುವಕರ ಪ್ರಚೋದನೆ : ಬಂಧಿತ ಉಗ್ರರು ಬಾಯ್ಬಿಟ್ಟ ಸತ್ಯ
Next Article ಶೀಲ ಶಂಕಿಸಿ ಪತ್ನಿ ಮತ್ತು ಮಗನ ಕತ್ತು ಸೀಳಿದ ಪತಿ