ಗದಗ: ಗೃಹ ಮಂಡಳಿ ಇಲಾಖೆಯವರು ಗದಗ ಜಿಲ್ಲೆಯ ಮುಂಡರಗಿ ಪಟ್ಟಣದ ಹೆಸರೂರು ರಸ್ತೆಯ ಬಳಿ ನಿರ್ಮಿಸಿದ ಲೇಔಟ್ ನಲ್ಲಿ ನಿವೇಶನ ಹಂಚಿಕೆಯಲ್ಲಿ ತಾರತಮ್ಯ ಎಸಗಲಾಗಿದೆ ಅಂತ ಸ್ಥಳೀಯ ನಿವಾಸಿಗಳು ಆರೋಪಿಸಿದ್ದಾರೆ. ಇಂದು ಗದಗ ನಗರದಲ್ಲಿ ಇರುವ ಗೃಹ ಮಂಡಳಿ ಎದುರು ಕೂತು ಧರಣಿ ಮಾಡಿ ಹಂಚಿಕೆಯನ್ನ ಪುನರ್ ಪರಿಶೀಲನೆ ಮಾಡಿ ನಿಜವಾದ ಕಟ್ಟಡ ಕಾರ್ಮಿಕರಿಗೆ ವೇತನ ಹಂಚಿಕೆ ಮಾಡಬೇಕು ಅಂತ ಆಗ್ರಹಿಸಿದರು. ಸುಮಾರು 8 ವರ್ಷಗಳ ಹಿಂದೆ ಮುಂಡರಗಿ ಪಟ್ಟಣದಲ್ಲಿ 72 ಎಕರೆ ಕೃಷಿ ಜಮೀನಿನಲ್ಲಿ ಲೇಔಟ್ ನಿರ್ಮಾಣ ಮಾಡಿತ್ತು. ಬಳಿಕ ಲಾಟರಿ ಯೋಜನೆಯ ಅಡಿಯಲ್ಲಿ ಹಂಚಿಕೆ ಮಾಡಲಾಗಿತ್ತು. ಆದ್ರೆ ಇದರಲ್ಲಿ ಅಪೇಕ್ಷಿತರ ಸಂಖ್ಯೆ ಹೆಚ್ಚಿರುವಾಗಲೇ ಅವೈಜ್ಞಾನಿಕವಾಗಿ ನಿವೇಶನ ಹಂಚಿಕೆ ಮಾಡಲಾಗಿದೆ. ಹೀಗಾಗಿ ಈ ಹಂಚಿಕೆ ವಿಚಾರ ಪುನರ್ ಪರಿಶೀಲನೆಯಾಗಬೇಕು ಅಂತ ಒತ್ತಾಯಿಸಿದರು.
ಗೃಹ ಮಂಡಳಿ ನಿರ್ಮಿಸಿದ ಲೇಔಟ್ ನಲ್ಲಿ ತಾರತಮ್ಯ ಆರೋಪ
Previous Articleಶೀಲ ಶಂಕಿಸಿ ಪತ್ನಿ ಮತ್ತು ಮಗನ ಕತ್ತು ಸೀಳಿದ ಪತಿ
Next Article ಕಾಂಗ್ರೆಸ್ ಎಂದರೆ ಭ್ರಷ್ಟಾಚಾರದ ಗಂಗೋತ್ರಿ..!