ಬೆಂಗಳೂರು,ಜು.28-ಸ್ನೇಹಿತರ ನಡುವಿನ ಗಲಾಟೆ ಕೊಲೆಯಲ್ಲಿ ಅಂತ್ಯವಾಗಿರುವ ದಾರುಣ ಘಟನೆ ಸಿಟಿ ಮಾರ್ಕೆಟ್ ಪೊಲೀಸ್ ಠಾಣೆಯ ಸನಿಹದಲ್ಲೇ ನಿನ್ನೆ ರಾತ್ರಿ ನಡೆದಿದೆ.
ಠಾಣಾ ಬಳಿಯ ಸಿಟಿ ಮಾರ್ಕೆಟ್ ಕಾಂಪ್ಲೆಕ್ಸ್ ಹಿಂಭಾಗದಲ್ಲಿ ಕೊಲೆಯಾಗಿರುವ ಯುವಕನನ್ನು ಪ್ರಶಾಂತ್ (30)ಎಂದು ಗುರುತಿಸಲಾಗಿದೆ.
ಪ್ರಶಾಂತ್ ಹಾಗು ಸ್ನೇಹಿತನ ನಡುವೆ ಕುಡಿದ ಅಮಲಿನಲ್ಲಿ ಕ್ಷುಲ್ಲಕ ಕಾರಣಕ್ಕೆ ಗಲಾಟೆ ಆರಂಭವಾದ, ಜಗಳ ಅತಿರೇಕಕ್ಕೆ ಹೋಗಿ ಆರೋಪಿ ಬಾಟಲಿಯಿಂದ ಹೊಡೆದು ಪ್ರಶಾಂತ್ ನನ್ನು ಬರ್ಬರವಾಗಿ ಹತ್ಯೆ ಮಾಡಿ ಪರಾರಿಯಾಗಿದ್ದಾನೆ.
ಸುದ್ದಿ ತಿಳಿದ ತಕ್ಷಣವೇ ಘಟನಾ ಸ್ಥಳಕ್ಕೆ ಸಿಟಿ ಮಾರ್ಕೆಟ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿ ಆರೋಪಿಯನ್ನು ಬಂಧಿಸಿದ್ದಾರೆ ಎಂದು ಡಿಸಿಪಿ ಲಕ್ಷ್ಮಣ ನಿಂಬರಗಿ ತಿಳಿಸಿದ್ದಾರೆ.