ಮದ್ದೂರು : ಗುತ್ತಿಗೆದಾರ ಸಂತೋಷ್ ಪಾಟೀಲ್ ಅವರ ಸಾವಿಗೆ ನ್ಯಾಯ ಸಿಗುವುದು ಅನುಮಾನ ಎಂದು ಶಾಸಕ ಸುರೇಶ್ ಗೌಡ ಕಳವಳ ವ್ಯಕ್ತಪಡಿಸಿದ್ದಾರೆ. ಮಂಡ್ಯದ ಮದ್ದೂರಿನಲ್ಲಿ ಮಾತನಾಡಿದ ಅವರು ಬಿಜೆಪಿ ಪಕ್ಷದ 40% ಕಮಿಷನ್ ವಿಚಾರಕ್ಕೆ ಕಿಡಿಕಾರಿದರು.
ರಾಜ್ಯದಲ್ಲಿ ಕಮಿಷನ್ ದಂಧೆ ನಡೆಯುತ್ತಿದೆ ಎನ್ನುವುದು ಸಂತೋಷ್ ಸಾವಿಗಿಂತ ಬೇರೆ ಉದಾಹರಣೆ ಬೇಕಿಲ್ಲ.ರಾಜ್ಯದಲ್ಲಿ ಸಂತೋಷ್ ನಂತೆ ಸಾವಿಗೀಡಾದವರಿಗೆ ಎಷ್ಟು ಮಂದಿಗೆ ನ್ಯಾಯ ಸಿಕ್ಕಿದೆ.? ಸಂತೋಷ್ ಸಾವಿಗೆ ನ್ಯಾಯ ಸಿಗುವುದು ಅನುಮಾನ ಎಂದರಲ್ಲದೇ, ಜೆಡಿಎಸ್ ನಲ್ಲಿ ಪಕ್ಷಾಂತರ ಪರ್ವ ವೇನು ಪ್ರಾರಂಭವಾಗಿಲ್ಲ. ಜೆಡಿಎಸ್ ಪಕ್ಷವನ್ನು ಬಿಟ್ಟು ಹೋಗುವವರಿಂದ ಪಕ್ಷಕ್ಕೆ ಯಾವುದೇ ಹಾನಿಯಾಗುವುದಿಲ್ಲ. ಪಂಜಾಬ್ ರಾಜ್ಯದಲ್ಲಿ ಒಬ್ಬ ಹಳೆಯ ಶಾಸಕನನ್ನು ಬಿಟ್ಟರೆ ಗೆದ್ದಿರುವುದಲ್ಲ ಹೊಸಬರು. ಜನ ಮನಸ್ಸು ಮಾಡಿದರೆ ಬದಲಾವಣೆಯಾಗುತ್ತದೆ ಎಂದು ತಿಳಿಸಿದರು