ಹುಬ್ಬಳ್ಳಿ: ಹುಬ್ಬಳ್ಳಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೋರ್ವ ಮಾಸ್ಟರ್ ಮೈಂಡ್ ಮೊಹಮ್ಮದ್ ಆರೀಫ್ ಸೇರಿ ಇಬ್ಬರನ್ನು ನಗರದಲ್ಲಿ ಸಿನಿಮೀಯ ಶೈಲಿಯ ಕಾರ್ಯಾಚರಣೆ ಕೈಗೊಂಡು ಪೊಲೀಸರು ಬಂಧಿಸಿದ್ದಾರೆ.
ಹುಬ್ಬಳ್ಳಿ ಗಲಭೆ ನಂತರ ಮೊಹಮ್ಮದ್ ಆರೀಫ್ ನಾಪತ್ತೆಯಾಗಿ ಬೇರೆ ಕಡೆಗಳಲ್ಲಿ ಸುತ್ತಾಡಿ ನಗರಕ್ಕೆ ಬಂದು ತಲೆಮರೆಸಿಕೊಂಡಿದ್ದು, ಗಲಭೆಗೆ ಕಾರಣರಾದವರು ಸೃಷ್ಟಿ ಮಾಡಿದ್ದ ವಾಟ್ಸಪ್ ಗ್ರೂಪ್‍ನಲ್ಲಿ ಕೆಲವೊಂದು ವಾಯ್ಸ್ ಮೆಸೇಜ್ ಮತ್ತು ಸಂದೇಶಗಳನ್ನು ಆಧರಿಸಿ ಕಾಟನ್ಪೇಟೆ ಹೊಟೆಲ್ನಲ್ಲಿ ಬಂಧಿಸಲಾಗಿದೆ.
ಆರೋಪಿಗಳ ಚಲನವಲನಗಳ ಮಾಹಿತಿಯನ್ನು ಆಧರಿಸಿ ಹಿಂಬಾಲಿಸಿದ್ದ ಹುಬ್ಬಳ್ಳಿ ಪೊಲೀಸರು ಸ್ಥಳೀಯ ಪೊಲೀಸರೊಂದಿಗೆ ಸುತ್ತುವರೆದಿದ್ದರು.
ಆರೋಪಿಗಳು ಹಿಂದಕ್ಕೆ ತಿರುಗಿದಾಗ ಹೆಗಲ ಮೇಲೆ ಕೈ ಹಾಕಿ ಬಿಗಿಯಾಗಿ ಹಿಡಿದುಕೊಂಡರು. ಹುಬ್ಬಳ್ಳಿಯಿಂದ ತಪ್ಪಿಸಿಕೊಂಡು ಹೊರಟಿದ್ದ ನಾಲ್ವರು ಹಾವೇರಿಯ ಬಂಕಾಪುರ ಬಸ್ಸ್ಟಾಪ್ನಲ್ಲಿ ಇಳಿದು, ಅಲ್ಲಿಂದ ಬೇರೆಡೆಗೆ ಪರಾರಿಯಾಗಿದ್ದರು. ಇನ್ನಿಬ್ಬರು ಬೆಂಗಳೂರಿನತ್ತ ಪ್ರಯಾಣ ಮಾಡಿದ್ದರು. ರೌಡಿಶೀಟರ್ ಅಬ್ದುಲ್ ಮಲ್ಲಿಕ್ ಬೇಫಾರಿ ಹಾಗೂ ತುಫೇಲ್ ಮುಲ್ಲಾ ಎರಡು ದಿನಗಳ ಹಿಂದೆ ಬೆಂಗಳೂರಿಗೆ ಬಂದಿದ್ದರು. ಬುಧವಾರ ಬೆಳಿಗ್ಗೆ ರಂಜಾನ್ಗೆಂದು ಬಟ್ಟೆ ಖರೀದಿ ಮಾಡಿದ್ದ ಆರೋಪಿಗಳು. ಸಂಜೆಯ ನಂತರ ತವಕಲ್ ಮಸೀದಿ ಬಳಿ ಇದ್ದ ಲಾರ್ಡ್ನಲ್ಲಿ ಕೊಠಡಿ ಬುಕ್ ಮಾಡಿದ್ದರು.
ಹೋಟೆಲ್ಗೆ ಊಟಕ್ಕೆ ಹೋಗಿದ್ದ ಸಂದರ್ಭದಲ್ಲಿ ಅಷ್ಟರಲ್ಲಾಗಲೇ ಹುಬ್ಬಳ್ಳಿಯಿಂದ ಬಂದಿದ್ದ ಪೊಲೀಸರಿಗೆ ಮಾಹಿತಿ ಸಿಕ್ಕಿತ್ತು. ಕೂಡಲೇ ಸ್ಥಳೀಯ ಡಿಸಿಪಿ ಸಂಜೀವ್ ಪಾಟೀಲ್ಗೆ ವಿವರ ನೀಡಿದ ಅವರು, ಸ್ಥಳೀಯ ಪೊಲೀಸರ ಸಹಾಯದಿಂದ ಆರೋಪಿಗಳನ್ನು ಬಂಧಿಸಿದರು.
Previous Articleಸಿರಿಯಾ, ಪಾಕ್ ನಿಂದ ಬೆದರಿಕೆ ಕರೆ
Next Article ಹಿಂದೂ ಮಹಿಳೆ ಅಂತ್ಯ ಸಂಸ್ಕಾರಕ್ಕೆ ನಿಂತ ಮುಸ್ಲಿಮರು…