ಬೆಂಗಳೂರು,ಆ.9-ಸ್ಯಾಂಡಲ್ ವುಡ್ ನಲ್ಲಿ ನಟ ದರ್ಶನ್, ತಮ್ಮ ಸಿನಿಮಾಗಳು ಹಾಗು ವೈಯಕ್ತಿಕ ವಿಚಾರಗಳಿಗಳಿಂದ ಹೆಚ್ಚು ಸುದ್ದಿಯಲ್ಲಿ ಇರಲಿದ್ದು, ಇದೀಗ ಸಿನಿಮಾ ನಿರ್ಮಾಪಕನಿಗೆ ಧಮ್ಕಿ ಹಾಕಿದ ಆರೋಪ ಅವರ ಮೇಲೆ ಬಂದಿದೆ. ನಟ ದರ್ಶನ್ ಬೆದರಿಕೆ ಹಾಕಿರುವುದಾಗಿ ಆರೋಪಿಸಿ ನಿರ್ಮಾಪಕ ಭರತ್ ಎನ್ನುವರು ಕೆಂಗೇರಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಕೊರೊನಾ ಸಂದರ್ಭದಲ್ಲಿ ದರ್ಶನ್ ಸಂಬಂಧಿಯಾಗಿರುವ, ಧ್ರುವನ್ಗೆ ಸಿನಿಮಾ ಮಾಡಬೇಕು ಎಂದು ನಿರ್ಮಾಪಕ ಭರತ್, ‘ಭಗವಾನ್ ಶ್ರೀಕೃಷ್ಣ ಪರಮಾತ್ಮ’ ಹೆಸರಿನ ಸಿನಿಮಾವನ್ನು ಎರಡು ವರ್ಷದ ಹಿಂದೆ ಮುಹೂರ್ತ ನೆರವೇರಿಸಿ, ಶೂಟಿಂಗ್ ಶುರು ಮಾಡಿದ್ದರು.
ಆದರೆ ಹಣಕಾಸಿನ ತೊಂದರೆಯಿಂದ ಆ ಸಿನಿಮಾ ಚಿತ್ರೀಕರಣ ನಿಂತು ಹೋಗಿತ್ತು. ಆಗ ನಿರ್ಮಾಪಕ ಭರತ್ ಹಣಕಾಸಿನ ಸಮಸ್ಯೆ ಆಗಿದೆ. ಅದಕ್ಕೆ ಚಿತ್ರೀಕರಣ ತಡವಾಗಿದೆ ಎಂದು ನಟ ಧ್ರುವನ್ ಬಳಿ ಹೇಳಿದ್ದರು. ಆಗ ಧ್ರುವನ್ ಅವರು ದರ್ಶನ್ ಅವರಿಂದ ನಿರ್ಮಾಪಕರಿಗೆ ಕರೆ ಮಾಡಿಸಿದ್ದು ದರ್ಶನ್, ನಿರ್ಮಾಪಕರಿಗೆ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಕೆಂಗೇರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಎನ್‌ಸಿಆರ್ ಮಾಡಿಕೊಳ್ಳಲಾಗಿದೆ. ದೂರಿನ ಸಂಬಂಧ ನಾಯಕ ನಟ ಧ್ರುವನ್ ಭಗವಾನ್ ಶ್ರೀ ಕೃಷ್ಣ ಪರಮಾತ್ಮ ಸಿನಿಮಾದ ನಿರ್ದೇಶಕ ಅಂಥೊನಿ, ಸಿನಿಮಾದ ಕ್ಯಾಮರಾಮ್ಯಾನ್ ಅವರ ಜೊತೆ ಠಾಣೆಗೆ ಹೋಗಿ ಹೇಳಿಕೆ ನೀಡಿದ್ದಾರೆ.
ದೂರಿಗೆ ಸಂಬಂಧಿಸಿದಂತೆ ದರ್ಶನ್ ಅವರದ್ದು ಎನ್ನಲಾಗುತ್ತಿರುವ ಆಡಿಯೋ ಒಂದು ಹರಿದಾಡುತ್ತಿದ್ದು, ನೀನು ಇರಲ್ಲ, ಏನಾದರೂ ಮಾಡುವ ಮುಂಚೆ ಹೇಳಿಯೇ ಮಾಡ್ತೀನಿ ರೆಡಿ ಇರು. ನೀನೇ ಕಾಣಿಸದಂತೆ ಮಾಡಿಬಿಡ್ತೀನಿ. ಹುಷಾರಾಗಿ ಇರು ಎಂದು ದರ್ಶನ್ ಧಮ್ಕಿ ಹಾಕಿದ್ದಾರೆ ಎಂದು ಆಡಿಯೋ ಆಧಾರದ ಮೇಲೆ ಪೊಲೀಸ್ ಠಾಣೆಯಲ್ಲಿ, ಚಾಲೆಂಜಿಂಗ್ ಸ್ಟಾರ್ ವಿರುದ್ಧ ದೂರು ದಾಖಲಾಗಿದೆ ಆ ಧ್ವನಿ ದರ್ಶನ್ ಅವರ ಧ್ವನಿ ಹೋಲುತ್ತಿದೆ.
ಚಾಲೆಂಜಿಂಗ್ ಸ್ಟಾರ್ ದರ್ಶನ್ ಧಮ್ಕಿ ಪೊಲೀಸರಿಗೆ ನಿರ್ಮಾಪಕನ ದೂರು
Previous Articleಜಿ.ಓ.ಡಿ. : ಹೊಸ ಪ್ಯಾನ್ ಇಂಡಿಯಾ ಸಿನಿಮಾ ಅನೌನ್ಸ್ ಮಾಡಿದ ರಾಘಣ್ಣ
Next Article ವಿಮಾನದಲ್ಲಿ ಬಾಂಬ್- ಬೆದರಿಕೆ ಪತ್ರ ಸೃಷ್ಟಿಸಿದ ಆತಂಕ..