ಬಾಹುಬಲಿ, ಆರ್‌ಆರ್‌ಆರ್‌ನಂತಹ ದೊಡ್ಡ ಸಿನಿಮಾಗಳಿಗೆ ಬರಹಗಾರರಾಗಿ ಕೆಲಸ ಮಾಡಿರುವ ವಿಜಯೇಂದ್ರ ಪ್ರಸಾದ್ ಅವರು ಇತ್ತೀಚೆಗೆ ರಾಷ್ಟ್ರಪತಿ ಕೋಟಾದಡಿ ರಾಜ್ಯಸಭೆಗೆ ನಾಮನಿರ್ದೇಶನಗೊಂಡಿರುವುದು ಗೊತ್ತೇ ಇದೆ. ಕೇಂದ್ರ ಸರ್ಕಾರ ಅವರನ್ನು ರಾಜ್ಯಸಭೆಗೆ ನಾಮನಿರ್ದೇಶನ ಮಾಡುವುದರೊಂದಿಗೆ ಅದರ ಹಿಂದಿನ ನಿಜವಾದ ಉದ್ದೇಶ ಈಗ ಬೆಳಕಿಗೆ ಬಂದಿದೆ.
ಅಂದಹಾಗೆ ವಿಜಯೇಂದ್ರ ಪ್ರಸಾದ್ ಭಾರತೀಯ ಸಿನಿಮಾ ರಂಗದಲ್ಲಿ ಅತ್ಯಂತ ಯಶಸ್ವಿ ಕಥಾ ಲೇಖಕ ಎಂದೇ ಪರಿಗಣಿಸಲ್ಪಡುತ್ತಿದ್ದಾರೆ.
ನಿರ್ದೇಶಕರಾಗಿ ಕೂಡ ವಿಜಯೇಂದ್ರ ಪ್ರಸಾದ್ ಯಶಸ್ಸುಗಳಿಸಿದ್ದಾರೆ. ಇತ್ತೀಚೆಗೆ ನಿರ್ದೇಶನದ ಕ್ಯಾಪ್ ಬಿಟ್ಟು ಬಾಹುಬಲಿ, ಆರ್ ಆರ್ ಆರ್ ನಂತಹ ಫ್ಯಾಂಟಸಿ ಕತೆಗಳ ರಚನೆಯಲ್ಲಿ ತೊಡಗಿದ್ದಾರೆ. ಸದ್ಯ ಮಹೇಶ್ ಬಾಬು ಅಭಿನಯದ ಸಿನಿಮಾ ಕತೆಯಲ್ಲಿ ತೊಡಗಿರುವ ಅವರು ನಿರ್ದೇಶನದಲ್ಲಿ ತಮ್ಮ ಪುತ್ರ ರಾಜಮೌಳಿಗೆ ಸಲಹೆ ಸೂಚನೆಗಳನ್ನು ನೀಡುತ್ತಿದ್ದಾರೆ.
ಇದರ ನಡುವೆ ಈಗ ಸುದೀರ್ಘ ಅವಧಿಯ ನಂತರ ನಿರ್ದೇಶಕನ ಕ್ಯಾಪ್ ತೊಡುತ್ತಿದ್ದಾರೆ. ಅಂದಹಾಗೆ ಇದೊಂದು ಬಿಗ್ ಬಜೆಟ್ ಸಿನಿಮಾವಾಗಲಿದ್ದು, ಹಿಂದಿಯಲ್ಲಿ ಸಿದ್ದಗೊಳ್ಳುವ ಈ ಸಿನಿಮಾ ಎಲ್ಲಾ ಭಾರತೀಯ ಭಾಷೆಗಳಿಗೆ ಡಬ್ ಆಗಲಿದೆ. ಈ ಸಿನಿಮಾಕ್ಕೆ ಯಾರು ಬಂಡವಾಳ ಹೂಡಲಿದ್ದಾರೆ, ತಾರಾಗಣದಲ್ಲಿ ಯಾರುಯಾರಿರಲಿದ್ದಾರೆನ್ನುವುದು ಗೌಪ್ಯ.
ಸಿನಿಮಾದ ಕಥೆ ಸಿದ್ದವಾಗಿದೆ. ಅಂದಹಾಗೆ ಈ ಸಿನಿಮಾದ ಹೆಸರು ಭಗವಾಧ್ವಜ. ದೇಶಗಳಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಉಗಮ ಮತ್ತು ಅದರ ಬೆಳವಣಿಗೆಯ ಹಲವು ಘಟನಾವಳಿಗಳಿಗೆ ರೋಚಕತೆಯ ಸ್ಪರ್ಷ ನೀಡಿ ವಿಜಯೇಂದ್ರ ಪ್ರಸಾದ್ ಸಿನಿಮಾ ಕತೆಯನ್ನು ಸಿದ್ಧಪಡಿಸಿದ್ದಾರೆ.
ತೆಲುಗಿನ ಸೂಪರ್ ಹಿಟ್ ಶ್ರೀವಲ್ಲಿಯ ನಂತರ ವಿಜಯೇಂದ್ರ ಪ್ರಸಾದ್ ನಿರ್ದೇಶನದಲ್ಲಿ ಬರುತ್ತಿರುವ ಈ ಸಿನಿಮಾ ಸಾಕಷ್ಟು ಕುತೂಹಲ ಮೂಡಿಸಿದೆ.
1925 ರಲ್ಲಿ ಡಾ.ಕೇಶವ ಬಲಿರಾಮ್ ಹೆಡ್ಗೆವಾರ್ ಅವರಿಂದ ಆರ್ ಎಸ್ ಎಸ್ ಸ್ಥಾಪನೆಯೊಂದಿಗೆ ಆರಂಭವಾಗಲಿರುವ ಈ ಸಿನಿಮಾ ಅಂತ್ಯವಂತೂ ಅದ್ಭುತ ವಾಗಿ ಮೂಡಿಬರಲಿದೆಯಂತೆ. ಈ ಮೂಲಕ ಬಿಜೆಪಿ ಸರ್ಕಾರ ವಿಜಯೇಂದ್ರ ಪ್ರಸಾದ್ ಅವರನ್ನು ರಾಜ್ಯಸಭೆಗೆ ನಾಮಕರಣ ಮಾಡಿದ ಅಸಲಿ ಉದ್ದೇಶ ಬೆಳಕಿಗೆ ಬಂದಿದೆ.
ಆರ್ ಆರ್ ಆರ್ ಸಿನಿಮಾ ಸಮಯದಲ್ಲಿ ಮಾಜಿ ಪ್ರಧಾನಿ ದಿವಂಗತ ನೆಹರು ಅವರ ನಿಲುವುಗಳ ಕುರಿತು ಮಾಡಿದ ಟೀಕೆಗಳು ಸಾಕಷ್ಟು ವಿವಾದ ಸೃಷ್ಟಿಸಿದ್ದವು. ಕಾಶ್ಮೀರ ಕುರಿತಾದ ನೆಹರು ಬಗೆಗಿನ ವಿಜಯೇಂದ್ರ ಪ್ರಸಾದ್ ಅವರ ವಿಡಿಯೋ ಸಾಕಷ್ಟು ವಿವಾದ ಸೃಷ್ಟಿಸಿತ್ತು.
ಇದೀಗ ಇವರ ಹೊಸ ಸಿನಿಮಾ ಭಗವಾದ್ವಜ 1925 ರಲ್ಲಿ ಆರ್ ಎಸ್ ಎಸ್ ಉಗಮದೊಂದಿಗೆ ಆರಂಭವಾಗಲಿದ್ದು, 1963ಕ್ಕೆ ಮುಕ್ತಾಯವಾಗಲಿದೆ. ಇಲ್ಲೇ ಇರುವುದು ವಿಶೇಷ ಅಂದು ಭಾರತ ಮತ್ತು ಚೀನಾ ನಡುವೆ ನಡೆದ ಸಮರದ ವೇಳೆ ಆರ್ ಎಸ್ ಎಸ್ ಪಾತ್ರವನ್ನು ಮುಕ್ತ ಕಂಠದಿಂದ ಹೊಗಳಿದ್ದ ಪ್ರಧಾನಿ ಜವಹರಲಾಲ್ ನೆಹರು ಗಣರಾಜ್ಯೋತ್ಸವದ ಪರೇಡ್ ನಲ್ಲಿ ಭಾಗವಹಿಸಲು ಆರ್ ಎಸ್ ಎಸ್ ಕಾರ್ಯಕರ್ತರಿಗೆ ಅವಕಾಶ ನೀಡಿದ್ದರು. ಗಣವೇಶಧಾರಿಗಳಾದ ನೂರು ಮಂದಿ ಸಂಘದ ಕಾರ್ಯಕರ್ತರು ಭಾರತೀಯ ಯೋಧರೊಂದಿಗೆ ಗಣರಾಜ್ಯೋತ್ಸವದ ಪರೇಡ್ ನಲ್ಲಿ ಭಾಗವಹಿಸಿದ್ದು ಅತ್ಯಂತ ರೋಮಾಂಚಕ ಸನ್ನಿವೇಶ ಇದರೊಂದಿಗೆ ಸಿನಿಮಾ ಅಂತ್ಯವಾಗುತ್ತದೆ.
ಆರ್ ಎಸ್ ಎಸ್ ತತ್ವ, ಸಿದ್ಧಾಂತಗಳನ್ನು ನಖ ಶಿಖಾಂತ ವಿರೋಧಿಸುವ ನೆಹರು ಅವರ ಮರಿ ಮೊಮ್ಮಗ ರಾಹುಲ್ ಗಾಂಧಿ ಪ್ರಮುಖ ಪ್ರತಿಪಕ್ಷ ಕಾಂಗ್ರೆಸ್ ನಾಯಕ. ಇವರ ತಾತ ನೆಹರು ಪ್ರಧಾನಿಯಾಗಿ ರಾಷ್ಟ್ರೀಯ ಸ್ವಯಂ ಸೇವಕ ಸಂಘವನ್ನು ಶ್ಲಾಘಿಸಿದ ವ್ಯಕ್ತಿ ಈ ವೈರುಧ್ಯವನ್ನು ವಿಜಯೇಂದ್ರ ಪ್ರಸಾದ್ ಮೂಲಕ ಜನರ ಮುಂದಿಡುವ ಬಿಜೆಪಿಯ ಕಾರ್ಯಸೂಚಿ ಎಷ್ಟರ ಮಟ್ಟಿಗೆ ಜನರನ್ನು ತಲುಪಲಿದೆ ಕಾದು ನೋಡಬೇಕಿದೆ.
ವಿಜಯೇಂದ್ರ ಪ್ರಸಾದ್ ರಾಜ್ಯಸಭೆ ಸದಸ್ಯರಾಗಿದ್ದು ಯಾಕೆ ಗೊತ್ತಾ.. ?
Previous Articleಭಾರತೀಯ ಸೇನೆಗೆ ಅವಮಾನ:‘ಲಾಲ್ ಸಿಂಗ್ ಚಡ್ಡಾ’ ಅಮೀರ್ ಖಾನ್ ವಿರುದ್ಧ ದೂರು
Next Article ಕಾಂತಾರದ ಸಿಂಗಾರ ಸಿರಿಯೇ ಹಾಡು ರಿಲೀಸ್