ಸುಕೇಶ್ ಚಂದ್ರಶೇಖರ್ ಮತ್ತು ಇತರ ಆರೋಪಿಗಳಿಗೆ ಸಂಬಂಧಿಸಿದ ಬಹುಕೋಟಿ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡೀಸ್ ಅವರನ್ನು ಆರೋಪಿಯನ್ನಾಗಿ ಹೆಸರಿಸಲು ಜಾರಿ ನಿರ್ದೇಶನಾಲಯ ನಿರ್ಧರಿಸಿದೆ ಎಂದು ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ. ತನಿಖಾ ಸಂಸ್ಥೆಯು ಈ ಪ್ರಕರಣದಲ್ಲಿ ಬುಧವಾರ ಹೊಸ (ಪೂರಕ) ಚಾರ್ಜ್ಶೀಟ್ ಅಥವ ಪ್ರಾಸಿಕ್ಯೂಷನ್ ದೂರನ್ನು ದೆಹಲಿಯ ವಿಶೇಷ ಮನಿ ಲಾಂಡರಿಂಗ್ ಆಕ್ಟ್ ನ್ಯಾಯಾಲಯದ ಮುಂದೆ ಸಲ್ಲಿಸುವ ನಿರೀಕ್ಷೆಯಿದೆ ಮತ್ತು ನಟಿಯನ್ನು ಆರೋಪಿಯಾಗಿ ವಿಚಾರಣೆಗೆ ಒಳಪಡಿಸಲಾಗುತ್ತದೆ ಎಂದು ಅವರು ಹೇಳಿದರು.
ಈ ಪ್ರಕರಣದಲ್ಲಿ 36 ವರ್ಷದ ನಟಿಯನ್ನು ಏಜೆನ್ಸಿಯು ಹಲವು ಬಾರಿ ಪ್ರಶ್ನಿಸಿದೆ, ಶ್ರೀಲಂಕಾ ಪ್ರಜೆಯಾದ ಈ ನಟಿ 2009 ರಲ್ಲಿ ಹಿಂದಿ ಚಲನಚಿತ್ರೋದ್ಯಮಕ್ಕೆ ಪಾದಾರ್ಪಣೆ ಮಾಡಿದರು. ವಿಕ್ರಾಂತ್ ರೋಣ ಸಿನಿಮಾ ಮೂಲಕ ಸ್ಯಾಂಡಲ್ ವುಡ್ ನಲ್ಲಿ ಚಾಪು ಮೂಡಿಸಿರೋ ನಟಿ ರಾ ರಾ ರಕ್ಕಮ್ಮ ಹಾಡು ಸೂಪರ್ ಹಿಟ್ ಆಗಿದೆ.
Previous Articleಪತ್ನಿ ಕೊಂದ ಪತಿರಾಯ ಎಂತಾ ಕತೆ ಕಟ್ಟಿದ ಗೊತ್ತಾ…?
Next Article 69 ಜನ ಕಳ್ಳರ ಬಂಧನ- ರಿವಾಲ್ವರ್ ವಶ..