ನವದೆಹಲಿ,ಆ.18-ಕರೋಲ್ ಬಾಘ್ನಲ್ಲಿನ ಮಹಿಳಾ ಹಾಸ್ಟೆಲ್ನ ಸೆಕ್ಯುರಿಟಿ ಗಾರ್ಡ್ ವಿದ್ಯಾರ್ಥಿನಿಯರನ್ನು ಥಳಿಸುವ ಹಾಗು ಕಿರುಕುಳ ನೀಡುತ್ತಿರುವ ಆಘಾತಕಾರಿ ದೃಶ್ಯ ಹಾಸ್ಟೆಲ್ನ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಘಟನೆ ಬೆಳಕಿಗೆ ಬರುತ್ತಿದ್ದಂತೆ ಮಧ್ಯ ಪ್ರವೇಶಿಸಿರುವ ದೆಹಲಿ ಮಹಿಳಾ ಆಯೋಗ ಆದಷ್ಟು ಬೇಗ ವರದಿ ನೀಡುವಂತೆ ದೆಹಲಿ ಪೊಲೀಸರಿಗೆ ಸೂಚನೆ ನೀಡಿದೆ.
ನಗರದ ಗೋಲ್ಡ್ಸ್ ವಿಲ್ಲಾ ಪೇಯಿಂಗ್ ಗೆಸ್ಟ್ ಹಾಸ್ಟೆಲ್ನಲ್ಲಿ ಈ ಭಯಾನಕ ಘಟನೆ ನಡೆದಿದೆ. ಸಿಸಿಟಿವಿ ದೃಶ್ಯದಲ್ಲಿ, ವಿದ್ಯಾರ್ಥಿನಿಯರ ಗುಂಪು ನಡೆದುಕೊಂಡು ಬರುತ್ತಿರುತ್ತಾರೆ. ಕೆಲವೇ ಕ್ಷಣಗಳಲ್ಲಿ ಭಯ ಭೀತರಾಗಿ ಚೆಲ್ಲಾಪಿಲ್ಲಿಯಾಗಿ ಓಡುತ್ತಾರೆ. ಇದೇ ಸಮಯದಲ್ಲಿ ಸೆಕ್ಯುರಿಟಿ ಗಾರ್ಡ್ ವಿದ್ಯಾರ್ಥಿನಿಯೊಬ್ಬಳನ್ನು ಹಿಂದಿನಿಂದ ತಬ್ಬಿಕೊಂಡು ಆಕೆಯ ಮೇಲೆ ದೌರ್ಜನ್ಯ ಎಸಗುತ್ತಿರುವುದು ದೃಶ್ಯದಲ್ಲಿದೆ. ವಿದ್ಯಾರ್ಥಿನಿ ಬಿಡಿಸಿಕೊಳ್ಳಲು ಪ್ರಯತ್ನಿಸಿದರೂ ಆತ ಬಿಡದೇ ವಿದ್ಯಾರ್ಥಿನಿಯನ್ನು ಗಟ್ಟಿಯಾಗಿ ಹಿಡಿದುಕೊಂಡಿದ್ದಾನೆ.
ಸಿಸಿಟಿವಿ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಬಳಿಕ ಈ ಘಟನೆ ಬೆಳಕಿಗೆ ಬಂದಿದೆ. ಇದೇ ಸಮಯದಲ್ಲಿ ಈ ಘಟನೆ ಬಗ್ಗೆ ದೂರು ನೀಡಿದರೂ ಹಾಸ್ಟೆಲ್ನ ಮಾಲೀಕ ಈವರೆಗೂ ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂಬ ಆರೋಪ ಕೇಳಿಬಂದಿದೆ. ಸೆಕ್ಯುರಿಟಿ ನಡೆದುಕೊಂಡಿರುವ ರೀತಿಯನ್ನು ನೋಡಿ ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರು ಕಠಿಣ ಕ್ರಮಕ್ಕೆ ಆಗ್ರಹಿಸುತ್ತಿದ್ದಾರೆ.
ಸಿಸಿಟಿವಿ ದೃಶ್ಯಾವಳಿ ಆಧಾರದ ಮೇಲೆ ದೂರು ದಾಖಲಿಸಿಕೊಂಡು ತನಿಖೆ ಆರಂಭಿಸಿರುವುದಾಗಿ ದೆಹಲಿ ಪೊಲೀಸರು ಮಾಹಿತಿ ನೀಡಿದ್ದಾರೆ. ಈ ವಿಡಿಯೋ ದೆಹಲಿ ಮಹಿಳಾ ಆಯೋಗದ ಗಮನಕ್ಕೂ ಬಂದಿದ್ದು, ವರದಿ ನೀಡುವಂತೆ ಪೊಲೀಸರಿಗೆ ಸೂಚನೆ ನೀಡಿದೆ.
ಹಾಸ್ಟೆಲ್ನ ವಿದ್ಯಾರ್ಥಿನಿಯರಿಗೆ ಥಳಿಸಿ ಕಿರುಕುಳ
Previous Articleಕಬ್ಬಿಣದ ವಿಗ್ರಹಕ್ಕೆ ಚಿನ್ನದ ಲೇಪನ ಮಾಡಿ ಮೋಸ ಮಾಡಿದ ಕಳ್ಳ ಸ್ವಾಮೀಜಿ
Next Article ಕಾಲೇಜುಗಳಲ್ಲೂ ರಾಷ್ಟ್ರಗೀತೆ ಕಡ್ಡಾಯ..