Facebook X (Twitter) Instagram
    Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ
    Vartha Chakra
    You are at:Home » ಗಣೇಶೋತ್ಸವ: ಬೆಂಗಳೂರಲ್ಲಿ ಕಟ್ಟುನಿಟ್ಟಿನ ನಿಯಮ
    ಸುದ್ದಿ

    ಗಣೇಶೋತ್ಸವ: ಬೆಂಗಳೂರಲ್ಲಿ ಕಟ್ಟುನಿಟ್ಟಿನ ನಿಯಮ

    vartha chakraBy vartha chakraಆಗಷ್ಟ್ 28, 2022Updated:ಆಗಷ್ಟ್ 28, 2022ಯಾವುದೇ ಟಿಪ್ಪಣಿಗಳಿಲ್ಲ2 Mins Read
    Facebook Twitter WhatsApp Pinterest LinkedIn Tumblr Email
    ಬೆಂಗಳೂರಿಗೆ ಗಣೇಶ ಬಂದ!
    Share
    Facebook Twitter LinkedIn Pinterest Email WhatsApp

    ಬೆಂಗಳೂರು,ಆ.28-ಗಣೇಶ ಚತುರ್ಥಿಗೆ ಇನ್ನೂ ಮೂರು ದಿನವಷ್ಟೆ ಬಾಕಿಯಿರುವ ಬೆನ್ನಲ್ಲೇ ನಗರದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುಂಜಾಗ್ರತಾ ಕ್ರಮವಾಗಿ ಬಿಗಿ ಪೊಲೀಸ್ ಭದ್ರತೆಯನ್ನು ಕೈಗೊಳ್ಳಲಾಗಿದೆ.
    ಗಣೇಶನ ಪ್ರತಿಷ್ಠಾಪನೆ ವಿಸರ್ಜನೆ ವರೆಗೂ ನಗರದಲ್ಲಿ ಪೊಲೀಸ್ ಭದ್ರತೆಯು ಮುಂದುವರೆಯಲಿದ್ದು ಸೂಕ್ಷ್ಮ ಅತಿಸೂಕ್ಷ್ಮ ಪ್ರದೇಶದಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಗಣೇಶ ಮೂರ್ತಿ ಕೂರಿಸಲು ಸೂಕ್ಷ್ಮ, ಅತಿ ಸೂಕ್ಷ್ಮ, ಸಾಮಾನ್ಯ ಎಂದು ಮೂರು ಪ್ರದೇಶಗಳನ್ನು ಗುರುತಿಸಲಾಗಿದೆ. ಚಾಮರಾಜಪೇಟೆ, ಚಂದ್ರಾಲೇಔಟ್, ಡಿ.ಜೆ.ಹಳ್ಳಿ, ಕೆ.ಜಿ.ಹಳ್ಳಿ, ಗೋವಿಂದಪುರ ಸೂಕ್ಷ್ಮ ಪ್ರದೇಶ ಎಂದು ಗುರುತಿಸಲಾಗಿದ್ದು ಇಲ್ಲಿ ದಿನದ 24 ಗಂಟೆಯೂ ಭದ್ರತೆ ಇರಲಿದರ 3 ಪಾಳಿಯಲ್ಲಿ ಹೆಚ್ಚಿನ ಪೊಲೀಸ್ ಸಿಬ್ಬಂದಿ ನಿಯೋಜನೆ ಮಾಡಲಾಗುತ್ತಿದೆ. ಸೂಕ್ಷ್ಮ ಪ್ರದೇಶಗಳಲ್ಲಿ ಇನ್ಸ್‌ಪೆಕ್ಟರ್​ಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದು,ಪ್ರದೇಶದ ಸುತ್ತಮುತ್ತ ಸಿಸಿಕ್ಯಾಮರಾ ಕಣ್ಗಾವಲು ಹಾಕಲಾಗಿದೆ.
    ಗಣೇಶೋತ್ಸವ ಆಯೋಜಕರ ಜೊತೆ ಸಭೆ ನಡೆಸಿ ಕಾರ್ಯಕ್ರಮಗಳು ಮೆರವಣಿಗೆ ಬಗ್ಗೆ ಮಾಹಿತಿ ಪಡೆಯುವಂತೆ ಹೇಳಿದ್ದು, ಎರಡು ದಿನದಲ್ಲಿ ಸೂಕ್ಷ್ಮ ಪ್ರದೇಶಗಳ ಮೆರೆವಣಿಗೆಯ ಬ್ಲೂ ಪ್ರಿಂಟ್ ರೆಡಿ ಮಾಡಲು ಸೂಚನೆ ನೀಡಲಾಗಿದೆ.
    ಮೆರವಣಿಗೆಯ ಪ್ರತಿ ರಸ್ತೆಯಲ್ಲೂ ಸಿಸಿಟಿವಿ ಅಳವಡಿಕೆಗೆ ಮಾಡಲಾಗುತ್ತಿದ್ದು, ಅಲ್ಲದೇ ಮೆರವಣಿಗೆ ವೇಳೆ ಎರಡು ಡ್ರೋಣ್ ಕ್ಯಾಮೆರಾ ಬಳಸಲು ಕಮಿಷನರ್ ಸೂಚನೆ ನೀಡಿದ್ದಾರೆ. ಹಬ್ಬ, ಮೆರವಣಿಗೆಯು ಕ್ಯಾಮರಾದಲ್ಲಿ ಕವರ್ ಆಗಬೇಕು. ಏರಿಯಾಗಳಲ್ಲಿ ಪೊಲೀಸ್ ಸಿಬ್ಬಂದಿ ಸದಾ ಬೀಟ್ ಇರಬೇಕು. ಹೀಗೆ ಸೂಕ್ಷ್ಮ ಏರಿಯಾಗಳ ಇನ್ಸ್‌ಪೆಕ್ಟರ್​ಗಳಿಗೆ ಕಮೀಷನರ್ ಸೂಚನೆ ನೀಡಿದ್ದಾರೆ.
    ಬೆಂಗಳೂರಿನಲ್ಲಿ ಗಣೇಶೋತ್ಸವ ಆಚರಣೆಗೆ ಪೊಲೀಸ್ ಇಲಾಖೆ ಮಾರ್ಗಸೂಚಿಗಳನ್ನು ಹೊರಡಿಸಿದೆ. ಆಯೋಜಕರು ಗಣೇಶ ಪ್ರತಿಷ್ಟಾಪನೆಗೆ ಬಿಬಿಎಂಪಿಯ ಏಕಗವಾಕ್ಷಿ ಅನುಮತಿಯನ್ನು ಕಡ್ಡಾಯವಾಗಿ ಪಡೆದಿರಬೇಕು. ಮೂರ್ತಿ ಪ್ರತಿಷ್ಟಾಪನೆ ಸ್ಥಳದಲ್ಲಿ ಸದೃಡವಾಗಿ ಚಪ್ಪರ ಅಥವಾ ಶಾಮಿಯಾನ ಹಾಕತಕ್ಕದ್ದು ಎಂದು ತಿಳಿಸಿದೆ.
    ಮಾರ್ಗಸೂಚಿಗಳು

    1. ಶಾಮಿಯಾನ ಹೊರತುಪಡಿಸಿ ಬೇರೆಡೆ ಬ್ಯಾನರ್ ಬಂಟಿಂಗ್ಸ್ ಹಾಕಲು ಬಿಬಿಎಂಪಿ ಅನುಮತಿ ಕಡ್ಡಾಯ.

    2. ವಿವಾದಿತ ಸ್ಥಳದಲ್ಲಿ ಮೂರ್ತಿ ಪ್ರತಿಷ್ಟಾಪನೆ ಮಾಡುವಂತಿಲ್ಲ.

    3. ಆಯೋಜಕರ ಪರವಾಗಿ ಕಾರ್ಯಕರ್ತರು 24 ಗಂಟೆಯೂ ಮೇಲ್ವಿಚಾರಣೆ ನೋಡಿಕೊಳ್ಳತಕ್ಕದ್ದು.

    4. ಮೇಲ್ವಿಚಾರಣೆ ನೋಡಿಕೊಳ್ಳುವವರ ಮಾಹಿತಿಯನ್ನ ಪೊಲೀಸ್ ಠಾಣೆಗೆ ನೀಡಬೇಕು.

    5. ಮೂರ್ತಿ ಪ್ರತಿಷ್ಠಾಪಿಸುವ ಸ್ಥಳದಲ್ಲಿ ಬಿಬಿಎಂಪಿ ಸುತ್ತೋಲೆಯಂತೆ ಸಿಸಿಟಿವಿ ಅಳವಡಿದತಕ್ಕದ್ದು.

    6. ಸ್ಥಳದಲ್ಲಿ ಅಗ್ನಿ ನಂದಕಗಳು, ನೀರು ಅಥವಾ ಮರಳಿನ ವ್ಯವಸ್ಥೆ ಇರತಕ್ಕದ್ದು.

    7. ಸುತ್ತಮುತ್ತ ಕಟ್ಟಿಗೆ, ಉರುವಲು, ಸೀಮೆಎಣ್ಣೆ ಇರದಂತೆ ಎಚ್ಚರ ವಹಿಸತಕ್ಕದ್ದು.

    8. ಮೂರ್ತಿ ಪ್ರತಿಷ್ಟಾಪನೆ ಸ್ಥಳದಲ್ಲಿ ಓರ್ವ ಎಲೆಕ್ಟ್ರಿಶಿಯನ್ ಇರತಕ್ಕದ್ದು.

    9. ಸಮರ್ಪಕವಾಗಿ ಬೆಳಕು ಹಾಗೂ ವಿದ್ಯುತ್ ವ್ಯವಸ್ಥೆ ಇರುವಂತೆ ನೋಡಿಕೊಳ್ಳಬೇಕು.

    10. ಮೂರ್ತಿ ಪ್ರತಿಷ್ಟಾಪನೆ ಸ್ಥಳದಲ್ಲಿ ಆಗಮನ ನಿರ್ಗಮನ ವ್ಯವಸ್ಥೆ ಸೂಕ್ತವಾಗಿರಬೇಕು.

    11. ಬ್ಯಾರಿಕೇಡ್ ಅಳವಡಿಸಿ ಸ್ವಯಂ ಸೇವಕರನ್ನ ಸ್ಥಳದಲ್ಲಿ‌ ನಿಯೋಜಿಸತಕ್ಕದ್ದು.

    12. ಮೆರವಣಿಗೆ ಸಂದರ್ಭದಲ್ಲಿ ಅಹಿತಕರ ಘಟನೆಗಳಾಗದಂತೆ ಆಯೋಜಕರು ಎಚ್ಚರ ವಹಿಸಬೇಕು.

    13. ಬೆಳಿಗ್ಗೆ 6ರಿಂದ ರಾತ್ರಿ 10ರವರೆಗೆ ಮಾತ್ರ ಧ್ವನಿವರ್ಧಕ ಬಳಕೆಗೆ ಅವಕಾಶ ನೀಡಲಾಗಿದೆ.

    14. ಆಯೋಜಕರು, ಅಧ್ಯಕ್ಷರು, ಪದಾಧಿಕಾರಿಗಳ ಹೆಸರು, ವಿಳಾಸ, ನಂಬರನ್ನು ಸ್ಥಳಿಯ ಠಾಣೆಗೆ ನೀಡಬೇಕು.

    15. ಆಯೋಜಕರು, ಅಧ್ಯಕ್ಷರು, ಪದಾಧಿಕಾರಿಗಳ ಹೆಸರು, ವಿಳಾಸ, ನಂಬರನ್ನು ಸ್ಥಳದಲ್ಲಿ ಪ್ರದರ್ಶಿಸತಕ್ಕದ್ದು.

    16. ಲೇಸರ್ ಪ್ರೊಜೆಕ್ಷನ್ ಮಾಡಲು ಅವಕಾಶವಿಲ್ಲ.

    17. ಸೂಕ್ಷ್ಮ, ಅತಿಸೂಕ್ಷ್ಮ ಸ್ಥಳಗಳಲ್ಲಿ ಮೆರವಣಿಗೆ ಸಾಗುವಾಗ ಸಿಡಿಮದ್ದು, ಪಟಾಕಿಗಳನ್ನ ಸಿಡಿಸುವಂತಿಲ್ಲ.

    18. ಕಾರ್ಯಕ್ರಮ ಆಯೋಜನೆಗಾಗಿ ಬಲವಂತದ ವಂತಿಗೆ ವಸೂಲಿ ಮಾಡಿದರೆ ಕಠಿಣ ಕಾನೂನು ಕ್ರಮ ತಗೆದುಕೊಳ್ಳಲಾಗುವುದು.

    19. ಆಯೋಜಕರು, ಕಾರ್ಯಕರ್ತರನ್ನು ಗುರುತಿಸಲು ಅನುಕೂಲವಾಗುವಂತೆ ಶರ್ಟ್ ಅಥವಾ ಕ್ಯಾಪ್ ಧರಿಸಿರಬೇಕು.

    20. ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸುವ ಕಡೆ ಪೊಲೀಸರಿಗೆ ಮಾಹಿತಿ‌ ನೀಡಿ ಭದ್ರತೆ ಪಡೆಯಬೇಕು.

    21. ವಿಸರ್ಜನಾ ಮೆರವಣಿಗೆ ನಿಗದಿತ ಸಂದರ್ಭದಲ್ಲಿ ನಡೆಯತಕ್ಕದ್ದು.

    22. ಮೆರವಣಿಗೆ ಸಂದರ್ಭದಲ್ಲಿ ವಿದ್ಯುತ್ ತಂತಿ, ಮರದ ಕೊಂಬೆಗಳ ಬಗ್ಗೆ ಸೂಕ್ತ ಎಚ್ಚರ ವಹಿಸಬೇಕು.

    ಕಾನೂನು
    Share. Facebook Twitter Pinterest LinkedIn Tumblr Email WhatsApp
    Previous Articleಹುಕ್ಕಾ ಬಾರ್ ಮೇಲೆ CCB ದಾಳಿ
    Next Article ರಷ್ಯನ್ ಸ್ಮಾರಕ ಧ್ವಂಸ ಮಾಡಿದ ಲ್ಯಾಟ್ವಿಯ
    vartha chakra
    • Website

    Related Posts

    ಜಲಾಶಯಗಳಿಗೆ ಪ್ರವಾಸಿಗರು ಬರುವಂತಿಲ್ಲ

    ಮೇ 9, 2025

    ಗೆಲುವಿಗಾಗಿ ವಿಶೇಷ ಪೂಜೆ.

    ಮೇ 8, 2025

    ಬೆಚ್ಚಿ ಬಿದ್ದ ಮಂಗಳೂರು

    ಮೇ 2, 2025

    Comments are closed.

    ವಿಭಾಗಗಳು
    • Trending
    • Viral
    • ಅಂತಾರಾಷ್ಟ್ರೀಯ
    • ಅಪರಾಧ
    • ಆರೋಗ್ಯ
    • ಕಲೆ
    • ಕಾನೂನು
    • ಕಾಮಗಾರಿ
    • ಕ್ರೀಡೆ
    • ಗಾಂಧಿ ಜಯಂತಿ
    • ಗೃಹಲಕ್ಷ್ಮಿ
    • ಗ್ಯಾರಂಟಿ ಯೋಜನೆ
    • ಚುನಾವಣೆ
    • ಚುನಾವಣೆ 2024
    • ಡಿ.ಕೆ.ಶಿವಕುಮಾರ್
    • ತಂತ್ರಜ್ಞಾನ
    • ಧಾರ್ಮಿಕ
    • ಪ್ರಚಲಿತ
    • ಬಂಧನ
    • ಬೆಂಗಳೂರು
    • ಮತ್ತಷ್ಟು
    • ಮನರಂಜನೆ
    • ಮಾಹಿತಿ
    • ಮಾಹಿತಿ
    • ಮುಖ್ಯಮಂತ್ರಿಗಳು
    • ರಾಜಕೀಯ
    • ರಾಜ್ಯ
    • ರಾಷ್ಟ್ರೀಯ
    • ವಾಣಿಜ್ಯ
    • ವಾರ್ತಾಚಕ್ರ ವಿಶೇಷ
    • ವಿಜ್ಞಾನ
    • ವಿಶೇಷ ಸುದ್ದಿ
    • ಶಿಕ್ಷಣ
    • ಸಂಚಾರ
    • ಸಮಾಜ
    • ಸಮೂಹ ಶಕ್ತಿ
    • ಸರ್ಕಾರ
    • ಸಾಹಿತ್ಯ
    • ಸಿನೆಮ
    • ಸುದ್ದಿ
    • ಹವಾಮಾನ
    • Facebook
    • Twitter
    • YouTube
    ಅದನ್ನು ಕಳೆದುಕೊಳ್ಳಬೇಡಿ

    ಚೀನಾ ನಂಬಿ ಕೆಟ್ಟ ಪಾಪಿ ಪಾಕಿಸ್ತಾನ..!

    ವಿಮಾನ ಹತ್ತಲು ಮೂರು ಗಂಟೆ ಮೊದಲು ಹೋಗಿ

    ಪೊಲೀಸರೇ ದರೋಡೆ ಮಾಡಿದ್ರಾ

    ಜಲಾಶಯಗಳಿಗೆ ಪ್ರವಾಸಿಗರು ಬರುವಂತಿಲ್ಲ

    Quick Links
    • About Us
    • Privacy Policy
    • Terms & Conditions
    • Contact Us 
    Latest Comments
    • social-accounts-marketplaces.live_Lob ರಲ್ಲಿ Cricket Betting ಅಡ್ಡೆ ಮೇಲೆ ದಾಳಿ
    • accounts-marketplace.xyz_Lob ರಲ್ಲಿ ಸಿಎಂ ಸಿದ್ದರಾಮಯ್ಯ ಅವರಿಗೆ ನಾನೇ ವಿಲನ್ | Siddaramaiah
    • accounts-marketplace.xyz_Lob ರಲ್ಲಿ ಜಾತಿ ಜನಗಣತಿ ವರದಿ ಸ್ವೀಕಾರಕ್ಕೂ ಮುನ್ನ ವಿವಾದ | Caste Census Karnataka
    Latest Kannada News

    ಚೀನಾ ನಂಬಿ ಕೆಟ್ಟ ಪಾಪಿ ಪಾಕಿಸ್ತಾನ..!

    ಮೇ 9, 2025

    ವಿಮಾನ ಹತ್ತಲು ಮೂರು ಗಂಟೆ ಮೊದಲು ಹೋಗಿ

    ಮೇ 9, 2025

    ಪೊಲೀಸರೇ ದರೋಡೆ ಮಾಡಿದ್ರಾ

    ಮೇ 9, 2025
    Connect With Us
    • Facebook
    • Twitter
    • YouTube
    Copyright © 2023 Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ

    Type above and press Enter to search. Press Esc to cancel.

    Vartha Chakra

    ಎಡಕ್ಕೂ ಇಲ್ಲ ಬಲಕ್ಕೂ ಇಲ್ಲ, ಬರಿ ನೇರ ನೇರ - ಅದೇ ವಾರ್ತಾಚಕ್ರ
    ಕನ್ನಡದ ಅನನ್ಯ ನ್ಯೂಸ್ ಚಾನಲ್
    ಸತ್ಯ ಶುದ್ದ ಶಿಷ್ಠ
    #Kannada #Kannadiga #Bangalore #Bengaluru #Kannadanews #Karnataka

    Vartha Chakra
    Kannada Digital News Channel - Curated, Managed and Operated by Professional Journalists ಇನ್ನಷ್ಟು ನಂಬಲರ್ಹ ಸುದ್ದಿಗಳಿಗಾಗಿ ಭೇಟಿ ನೀಡಿ www.varthachakra.com
    ಚೀನಾ ನಂಬಿ ಕೆಟ್ಟ ಪಾಪಿ ಪಾಕಿಸ್ತಾನ ! #china #pm #pakistan #soldier #modi #viralvideo #news #worldnews
    Subscribe