ಮಂಡ್ಯ,ಸೆ.10-ಬಿಜೆಪಿ ಮುಖಂಡ ಜಗನ್ನಾಥ್ ಶೆಟ್ಟಿ ಹನಿಟ್ರ್ಯಾಪ್ ಪ್ರಕರಣವು ಮತ್ತೊಂದು ತಿರುವು ಪಡೆದುಕೊಂಡಿದೆ. ಶೆಟ್ಟಿ ಕೊಟ್ಟ ದೂರಿನಲ್ಲಿರುವ ಮಾಹಿತಿ ಹಾಗೂ ವೈರಲ್ ಆಗಿರುವ ವಿಡಿಯೋದಲ್ಲಿರುವ ಮಾಹಿತಿಯು ಸುಳ್ಳು ಎನ್ನುವುದು ಪತ್ತೆಯಾಗಿದೆ.
ಹನಿಟ್ರ್ಯಾಪ್ ಬಲೆಗೆ ಶೆಟ್ಟಿಯನ್ನು ಕೆಡವಲು ಹಲವು ದಿನಗಳಿಂದ ಸಂಚು ನಡೆಸಲಾಗಿತ್ತು ಜತೆಯಲ್ಲಿದ್ದ ಯುವತಿ ಮೂಲಕ ಸಲ್ಮಾ ಭಾನು ಮತ್ತು ತಂಡ ಖೆಡ್ಡಾ ತೋಡಿದ್ದರು. ಫೋನ್ ಮೂಲಕ ಶೆಟ್ಟಿಯವರನ್ನು ಯುವತಿ ಪರಿಚಯಿಸಿಕೊಂಡಿದ್ದಳು.
ಶೆಟ್ಟಿಗೆ ಮೊದಲ ಬಾರಿಗೆ ಕರೆ ಮಾಡಿದಾಗ ಪರಿಚಯವೇ ಇಲ್ಲದಂತೆ ಯುವತಿ ವರ್ತಿಸಿದ್ದಳು. ಇತ್ತ ಶೆಟ್ಟಿ ತಾನೊಬ್ಬ ಉಪನ್ಯಾಸಕ ಎಂದು ಹೇಳಿಕೊಂಡಿದ್ದರು. ಶೆಟ್ಟಿ ಅವರು ಸುಳ್ಳು ಹೇಳಿದ್ದನ್ನು ಸಲ್ಮಾಭಾನು ಮತ್ತು ಗ್ಯಾಂಗ್ ಬಂಡವಾಳ ಮಾಡಿಕೊಂಡು ನಾಜೂಕಾಗಿ ಮಾತನಾಡುತ್ತಲೇ ಮುಗ್ಧ ಯುವತಿಯಂತೆ ಫೋನ್ ಕಾಲ್ನಲ್ಲಿ ನಟಿಸಿದ್ದಳು. ಸಲುಗೆ ಬೆಳೆಯುತ್ತಿದ್ದಂತೆ ಶೆಟ್ಟಿ, ಯುವತಿಯನ್ನು ಲಾಡ್ಜ್ ಕರೆದಿದ್ದರು. ಇದಾದ ಬಳಿಕ ಶೆಟ್ಟಿಯವರನ್ನು ಲಾಕ್ ಮಾಡಲು ಮತ್ತೆ ಸಂಚು ನಡೆಯಿತು. ಯುವತಿ ರೂಮಿಗೆ ಹೋದ ಕೆಲವೇ ಕ್ಷಣಗಳಲ್ಲಿ ಸಲ್ಮಾ ಮತ್ತು ತಂಡ ಲಾಡ್ಜ್ ಮೇಲೆ ದಾಳಿ ಮಾಡಿತು.
ಯುವತಿ ಚಿಕ್ಕಪ್ಪ ಎಂದು ಹೇಳಿಕೊಂಡು ಹೆದರಿಸಿ, ವಿಡಿಯೋ ಚಿತ್ರೀಕರಣ ಮಾಡಲಾಗಿದೆ. ವಿಡಿಯೋದಲ್ಲಿ ಶೆಟ್ಟಿ ಒಬ್ಬರನ್ನು ಬಿಟ್ಟು ಉಳಿದವರೆಲ್ಲರೂ ಮಾಸ್ಕ್ ಧರಿಸಿ ಹೈಡ್ರಾಮ ಸೃಷ್ಟಿ ಮಾಡಿದ್ದಾರೆ. ವಿಡಿಯೋ ರೆಕಾರ್ಡ್ ಮಾಡಿ ಹಣಕ್ಕಾಗಿ ಬೇಡಿಕೆಯಿಟ್ಟರು. ಮರ್ಯಾದೆಗೆ ಹೆದರಿ ಲಕ್ಷ ಲಕ್ಷ ರೂಪಾಯಿ ಹಣಕೊಟ್ಟರೂ ಮತ್ತೆ ಹಣಕ್ಕೆ ನೀಡುವಂತೆ ಗ್ಯಾಂಗ್ ಹಾವಳಿ ಒತ್ತಡ ಹಾಕಿತ್ತು.
ಖತರ್ನಾಕ್ ಗ್ಯಾಂಗ್ ಕಾಟ ನಿಲ್ಲದಿದ್ದಾಗ ಶೆಟ್ಟಿ ಪೊಲೀಸರ ಮೊರೆ ಹೋದರು.ಕಳೆದ ಫೆ. 26ರಂದು ನಡೆದ ಘಟನೆಯ ಬಗ್ಗೆ ಆ. 19ರಂದು ದೂರು ದಾಖಲಿಸಿದರು. ಮರ್ಯಾದೆಗೆ ಅಂಜಿ ಅಪಹರಣ ಮತ್ತು ಬೆದರಿಕೆ ದೂರು ನೀಡಿದ್ದರು.
ಶೆಟ್ಟಿಯವರನ್ನು ಲಾಡ್ಜ್ಗೆ ಕರೆಸಿಕೊಂಡಿದ್ದು ಸಹೋದರನ ಮಗಳು ಎಂಬುದು ಶುದ್ಧ ಸುಳ್ಳು. ಚಿಕ್ಕಪ್ಪ… ಚಿಕ್ಕಪ್ಪ…ಎಂದು ಶೆಟ್ರು ಮುಂದೆ ಯುವತಿ ಡ್ರಾಮ ಮಾಡಿದ್ದಳು. ಯುವತಿಗೆ ಹೊಡೆದು, ಗದರಿಸಿ ಶೆಟ್ಟಿಗೆ ನಂಬಿಕೆ ಬರುವಂತೆ ಹೈಡ್ರಾಮ ನಡೆದಿತ್ತು. ವಿಡಿಯೋದಲ್ಲಿ ಅವನ್ಯಾರು? ಇಲ್ಲಿಗೆ ಏಕೆ ಬಂದೆ? ಹೇಳು ಎಂದು ಚಿಕ್ಕಪ್ಪ ಎಂದೇಳಿಕೊಂಡವನಿಂದ ಯುವತಿಯನ್ನು ಕೇಳಿದ್ದ. ಅವರು ನಮ್ಮ ಉಪನ್ಯಾಸಕ, ಅವರಿಗೆ ಏನೂ ಮಾಡಬೇಡಿ ಎಂದು ಯುವತಿ ನಟಿಸಿದ್ದಳು. ಹೊಡೆಯಲು ಮುಂದಾದಾಗ ತಡೆಯುವಂತೆ ಮಾಡಿ ಜಗನ್ನಾಥ್ ಶೆಟ್ಟಿಗೆ ತನ್ನ ಮೇಲೆ ಅನುಕಂಪ ಬರುವಂತೆ ಯುವತಿ ಡ್ರಾಮ ಮಾಡಿದ್ದಳು. ನಿಜಕ್ಕೂ ಯುವತಿಯ ಚಿಕ್ಕಪ್ಪನೇ ಬಂದಿದ್ದಾನೆಂದು ನಂಬಿ ಶೆಟ್ಟಿ ಅವರು ಹಣ ನೀಡಿದ್ದರು. ಹೀಗೆ ಹನಿಟ್ರ್ಯಾಪ್ ಜಾಲಕ್ಕೆ ಬಿದ್ದು ಶೆಟ್ಟಿ ಹಣ,ಮರ್ಯಾದೆ ಎರಡನ್ನೂ ಕಳೆದುಕೊಂಡಿದ್ದಾರೆ.
Previous Articleದಿನೇಶ್ ಗುಂಡೂರಾವ್ ಮನೆಕೆಲಸದ ವ್ಯಕ್ತಿ ಎಲ್ಲಿ?
Next Article ಸಾಲ ತೀರಿಸಲು ದೇವರ ತಾಳಿ ಕದೀತಿದ್ದ ಖದೀಮ