ಬೆಂಗಳೂರು,ಸೆ.17-ಸ್ಯಾನಿಟರಿ ಪ್ಯಾಡ್ನೊಳಗೆ ಬಚ್ಚಿಟ್ಟುಕೊಂಡು ಚಿನ್ನ ಸಾಗಿಸುತ್ತಿದ್ದ ಪ್ರಯಾಣಿಕರೊಬ್ಬರನ್ನು ದೇವನಹಳ್ಳಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ
ಕಸ್ಟಮ್ಸ್ ಅಧಿಕಾರಿಗಳು ಬಂಧಿಸಿದ್ದಾರೆ.
ಬಂಧಿತ ಆರೋಪಿಯಿಂದ 15 ಲಕ್ಷ ಮೌಲ್ಯದ 302 ಗ್ರಾಂ ತೂಕದ ಚಿನ್ನ ವಶಪಡಿಸಿಕೊಂಡು ಹೆಚ್ಚಿನ ತನಿಖೆಯನ್ನು ಕೈಗೊಳ್ಳಲಾಗಿದೆ.
ಬ್ಯಾಂಕಾಕ್ನಿಂದ ನಿನ್ನೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಮಹಿಳೆ ಬಂದಿದ್ದಳು. ಆಕೆಯ ಹಿನ್ನೆಲೆಯ ಬಗ್ಗೆ ಸಂಶಯಗೊಂಡ ವಾಯು ಗುಪ್ತಚರ ಘಟಕದ ಅಧಿಕಾರಿಗಳು ತಪಾಸಣೆ ನಡೆಸಿದ್ದಾರೆ.
ಆಗ ಮಹಿಳೆಯು ಸ್ಯಾನಿಟರಿ ಪ್ಯಾಡ್ನಲ್ಲಿ 5 ಚಿನ್ನದ ತುಣುಕುಗಳನ್ನ ಬಚ್ಚಿಟ್ಟಿರುವುದು ಬೆಳಕಿಗೆ ಬಂದಿದೆ.
ಆಕೆಯಿಂದ ಅಧಿಕಾರಿಗಳು 15,42,750 ರೂ. ಮೌಲ್ಯದ 302.50 ಗ್ರಾಂ ಚಿನ್ನ ವಶಕ್ಕೆ ಪಡೆದಿದ್ದಾರೆ.
Previous Articleಸೆರೆವಾಸ ಮುಗಿಸಿದವರ ಜೀವನಕ್ಕೆ ಆಧಾರ
Next Article ನಾಪತ್ತೆಯಾಗಿದ್ದ ಪೇದೆ ಶವವಾಗಿ ಪತ್ತೆ