ಬೆಂಗಳೂರು, ಸೆ.21-ವಜ್ಯಜೀವಿ ಚರ್ಮ ,ಹಲ್ಲು, ಉಗುರು ಮಾರಾಟ ಮಾಡುತ್ತಿದ್ದ ಐವರು ಗ್ಯಾಂಗ್ ಬಂಧಿಸುವಲ್ಲಿ
ಹನುಮಂತನಗರ ಪೊಲೀಸರು ಯಶಸ್ವಿಯಾಗಿದ್ದಾರೆ.
ಹೊಸಕೋಟೆಯ ಮುನೀರ್ ಬಾಷಾ, ಬಳ್ಳಾರಿ ಮೂಲದ ಶ್ರೀನಿವಾಸ ರಾವ್ , ಮುಳಬಾಗಿಲು ಮೂಲದ ಸೈಯದ್ ಅಕ್ಬರ್, ದಿನೇಶ್ ಹಾಗೂ ಕಾಳಿಯಪ್ಪನ್ ಬಂಧಿತ ಆರೋಪಿಗಳಾಗಿದ್ದಾರೆ.
ಆರೋಪಿಗಳು ಚಿರತೆ ಚರ್ಮ, ಆನೆ ದಂತಗಳು, ಆನೆ ದಂತಗಳಿಂದ ಮಾಡಿದ ಆನೆ ಮೂರ್ತಿಗಳು, ಹುಲಿಯ ಹಲ್ಲು ಹಾಗೂ ಉಗುರು ಮಾರಾಟ ಮಾಡುತ್ತಿದ್ದಾಗ ಕಾರ್ಯಾಚರಣೆ ಕೈಗೊಂಡ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ.
ಬಂಧಿತರ ಪೈಕಿ ಶ್ರೀನಿವಾಸ್, ಮುನೀರ್ ಬಾಷಾ ಸೈಯದ್ ಚಿರತೆ ಚರ್ಮ ಮಾರಾಟ ಮಾಡುತ್ತಿದ್ದರೆ,ದಿನೇಶ್ ಆನೆ ದಂತಗಳಿಂದ ಮಾಡಿದ ಆನೆ ಮೂರ್ತಿಗಳನ್ನ ಮಾರಾಟ ಮಾಡುತ್ತಿದ್ದ.
ಮತ್ತೊಂದೆಡೆ ಕಾಳಿಯಪ್ಪನ್ ಹುಲಿಯ ಹಲ್ಲು ಹಾಗೂ ಉಗುರುಗಳನ್ನ ಮಾರಾಟ ಮಾಡುತ್ತಿದ್ದು,ಈ ಮೂರು ಪ್ರಕರಣಗಳನ್ನು ಭೇಧಿಸಿರುವ ಹನುಮಂತನಗರ ಪೊಲೀಸರು ಆರೋಪಿಗಳ ವಿರುದ್ಧ ವನ್ಯಜೀವಿ ರಕ್ಷಣಾ ಕಾಯ್ದೆಯಡಿ ಪ್ರಕರಣ ದಾಖಲಿಸಿ ಮುಂದಿನ ತನಿಖೆಯನ್ನು ಕೈಗೊಂಡಿದ್ದಾರೆ.
Photo for reference only
Previous ArticleBlast trial ನಡೆಸಿದ್ದ ಶಂಕಿತ ಉಗ್ರ
Next Article ಏಳು ಹೊಸ ವಿಶ್ವವಿದ್ಯಾಲಯಗಳ ಸ್ಥಾಪನೆ