Facebook X (Twitter) Instagram
    Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ
    Vartha Chakra
    You are at:Home » Special Report : ಎಲ್ಲರಿಗೂ ಪ್ರಿಯ ಈ ಮೀಸಲಾತಿ!
    ರಾಜಕೀಯ

    Special Report : ಎಲ್ಲರಿಗೂ ಪ್ರಿಯ ಈ ಮೀಸಲಾತಿ!

    vartha chakraBy vartha chakraಅಕ್ಟೋಬರ್ 17, 2022Updated:ಅಕ್ಟೋಬರ್ 17, 2022ಯಾವುದೇ ಟಿಪ್ಪಣಿಗಳಿಲ್ಲ4 Mins Read
    Facebook Twitter WhatsApp Pinterest LinkedIn Tumblr Email
    Share
    Facebook Twitter LinkedIn Pinterest Email WhatsApp

    ಕರ್ನಾಟಕದಲ್ಲಿ ಮೀಸಲಾತಿ ಬಗ್ಗೆ ಇದೀಗ ವ್ಯಾಪಕ ಚರ್ಚೆಗಳು ಆರಂಭವಾಗಿವೆ.ಪರಿಶಿಷ್ಟ ವರ್ಗಕ್ಕೆ ತಮ್ಮ ಸಮುದಾಯವನ್ನು ಸೇರ್ಪಡೆ ಮಾಡುವಂತೆ ಕುರುಬ,ಮಡಿವಾಳ, ಅಕ್ಕಸಾಲಿಗ, ಸವಿತಾ,ತಿಗಳ,ಕುಂಬಾರ ಸೇರಿದಂತೆ ಅನೇಕ ಸಣ್ಣಪುಟ್ಟ ಸಮುದಾಯಗಳು ತಮ್ಮದೇ ನೆಲೆಗಟ್ಟಿನಲ್ಲಿ ಸರ್ಕಾರದ ಮುಂದೆ ಬೇಡಿಕೆ ಮಂಡಿಸಿವೆ.
    ಇವುಗಳ ಜೊತೆಗೆ ಸಮಾಜದಲ್ಲಿ ಬಲಾಢ್ಯರೆನಿಸಿಕೊಂಡ ಲಿಂಗಾಯತ, ಒಕ್ಕಲಿಗ ಸಮುದಾಯ ಕೂಡ ಮೀಸಲಾತಿಗಾಗಿ ಬೇಡಿಕೆಯನ್ನಿಟ್ಟಿವೆ.ಈ ಬೇಡಿಕೆ ತಪ್ಪೇನೂ ಅಲ್ಲ,ಆದರೆ ಬೇಡಿಕೆಯನ್ನು ಈಡೇರಿಸುವ ಸಮಯದಲ್ಲಿ ಕೆಲವು ನಿಯಮಗಳನ್ನು ಪಾಲಿಸಬೇಕಾಗುತ್ತದೆ.ಅದರಲ್ಲೂ ಮೀಸಲಾತಿಗಾಗಿ ಪ್ರಬಲ ಸಮುದಾಯಗಳು ಮಂಡಿಸುತ್ತಿರುವ ಬೇಡಿಕೆ ಒತ್ತಡದ ತಂತ್ರಕ್ಕೆ ತಲುಪಿದೆ
    ಇದಕ್ಕೆ ಪ್ರಮುಖ ಕಾರಣ ರಾಜ್ಯ ಸರ್ಕಾರ ಇತ್ತೀಚೆಗೆ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ಮೀಸಲಾತಿ ಹೆಚ್ಚಿಸುವ ಕುರಿತು ಮಹತ್ವದ ತೀರ್ಮಾನ ಕೈಗೊಂಡಿದೆ.
    ಪರಿಶಿಷ್ಟ ಜಾತಿಯ ಮೀಸಲಾತಿ ಪ್ರಮಾಣವನ್ನು ಶೇ 15 ರಿಂದ 17ಕ್ಕೆ ಮತ್ತು ಪರಿಶಿಷ್ಟ ಪಂಗಡದ ಮೀಸಲಾತಿ ಪ್ರಮಾಣವನ್ನು ಶೇ 3 ರಿಂದ 7ಕ್ಕೆ ಹೆಚ್ಚಿಸಲು ನ್ಯಾಯಮೂರ್ತಿ ಎಚ್. ಎನ್. ನಾಗಮೋಹನದಾಸ್ ಸಮಿತಿ ಶಿಫಾರಸು ಮಾಡಿತ್ತು.ಅದನ್ನು ಒಪ್ಪಿಕೊಂಡ ಸಚಿವ ಸಂಪುಟ ಸಭೆ ಮೀಸಲಾತಿ ಹೆಚ್ಚಳದ ಬಗ್ಗೆ ತೀರ್ಮಾನ ಕೈಗೊಂಡಿದೆ.
    ಸದ್ಯ ಕರ್ನಾಟಕದಲ್ಲಿ ಪರಿಶಿಷ್ಟ ಜಾತಿಗೆ ಶೇ 15, ಪರಿಶಿಷ್ಟ ಪಂಗಡಕ್ಕೆ ಶೇ 03, ಪ್ರವರ್ಗ 1ಕ್ಕೆ ಶೇ 04, ಪ್ರವರ್ಗ 2 (ಎ)ಗೆ ಶೇ 15, ಪ್ರವರ್ಗ 2 (ಬಿ) ಗೆ ಶೇ. 04, ಪ್ರವರ್ಗ 3 (ಎ) ಗೆ ಶೇ 04, ಪ್ರವರ್ಗ 3 (ಬಿ) ಗೆ ಶೇ 05 ರಷ್ಟು ಮೀಸಲಾತಿ ಇದೆ ಒಟ್ಟಾರೆಯಾಗಿ ಇದು ಶೇ.50 ರಷ್ಟಾಗಿದೆ.ಸುಪ್ರೀಂ ಕೋರ್ಟ್ ಕೂಡಾ ಇದನ್ನೇ ಹೇಳಿದೆ.ಇಂದಿರಾ ಸಾಹ್ನಿ‌ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಯಾವುದೇ ಕಾರಣಕ್ಕೂ ಮೀಸಲಾತಿ ಪ್ರಮಾಣ ಶೇ.50 ಅನ್ನು ದಾಟುವಂತಿಲ್ಲ ಎಂದು ಸ್ಪಷ್ಟಪಡಿಸಿದೆ.ಹೀಗಾಗಿ ಮೀಸಲಾತಿ ಕುರಿತು ಯಾವುದೇ ನಿರ್ಧಾರ ಕೈಗೊಂಡರೂ ಈ ಮಿತಿಯಲ್ಲಿ ಕೆಲಸ ಮಾಡಬೇಕಿದೆ.
    ಈಗ ರಾಜ್ಯ ಸರ್ಕಾರ ಕೈಗೊಂಡ ತೀರ್ಮಾನದನ್ವಯ ಒಟ್ಟಾರೆ ಮೀಸಲಾತಿಯ ಪ್ರಮಾಣ ದಾಟಲಿದೆ. ಹೀಗಾಗಿ ಇದರ ಸಿಂಧುತ್ವದ ಪ್ರಶ್ನೆ ಈಗ ಉದ್ಭವಿಸಿದೆ. ಈ ಸೂಕ್ಷ್ಮವನ್ನು ಆಳುವ ಪಕ್ಷಗಳು ಅರ್ಥ ಮಾಡಿಕೊಳ್ಳಬೇಕು.ಪರಿಶಿಷ್ಟ ಜಾತಿ ಮತ್ತು ವರ್ಗದ ಮೀಸಲಾತಿ ಪ್ರಮಾಣ ಹೆಚ್ಚಳದ ಬೇಡಿಕೆ ಅತ್ಯಂತ ಸಮರ್ಥನೀಯ. ಜೊತೆಗೆ ಈ ಬೇಡಿಕೆಯೇನೂ ಏಕಾಏಕಿ ಉದ್ಭವಿಸಿದ್ದೂ ಅಲ್ಲ.ಇದಕ್ಕಾಗಿ ಈ ಸಮುದಾಯದ ಜನತೆ, ನಾಯಕರು, ಮಠಾಧಿಪತಿಗಳು ಹಲವಾರು ರೀತಿಯ ಹೋರಾಟ ನಡೆಸಿದ್ದಾರೆ. ಪಾದಯಾತ್ರೆಗಳು ನಡೆದಿವೆ.ಈ ಸಂಬಂಧ ಅಧ್ಯಯನ ಕೂಡ ನಡೆದಿದ್ದು ಈಗ ತೀರ್ಮಾನಕ್ಕೆ ಬರಲಾಗಿದೆ ಇದು ಸ್ವಾಗತಾರ್ಹ. ಆದರೆ ತೀರ್ಮಾನ ಕೈಗೊಂಡ ಕಾಲಮಾನ ಮಾತ್ರ ಪ್ರಶ್ನಾರ್ಹ.
    ಮೀಸಲಾತಿ ಎನ್ನುವುದು ಎಲ್ಲಾ ಶೋಷಿತರ ಹಾಗೂ ಅವಕಾಶ ವಂಚಿತರ ಹಕ್ಕು ಇದು ರಾಜಕೀಯ ಕಾರಣಕ್ಕೆ ದಾಳವಾಗಬಾರದು.ಈ ಮೂಲಕ ಶೋಷಿತರ ಬದುಕಿನೊಂದಿಗೆ ಆಟವಾಡಿದಂತಾಗುತ್ತದೆ.
    ಸಮಾಜದಲ್ಲಿ ಎಲ್ಲರೂ ಸಮಾನರು. ಆದರೆ ಜಾತಿಯ ಕಾರಣಕ್ಕೆ ಕೆಲವು ಸಮುದಾಯಗಳು ಅವಕಾಶ ವಂಚಿತರಾಗಿ ಸಮಾಜದ ಕಟ್ಟ ಕಡೆಯ ವರ್ಗವಾಗಿ ಪರಿಣಮಿಸಿದ್ದಾರೆ ಇಂತಹ
    ಸಮುದಾಯಗಳ ನಡುವಿನ ತರತಮವನ್ನು ಹೋಗಲಾಡಿಸಿ,ಅವಕಾಶ ವಂಚಿತ ಸಮುದಾಯಗಳಿಗೆ ಸಹಾಯ ಮಾಡುವುದು ಮೀಸಲಾತಿಯ ಪ್ರಮುಖ ಉದ್ದೇಶವಾಗಿದೆ.
    ಸಮಾಜದ ಹಲವಾರು ಸಮುದಾಯಗಳು ಅಸ್ಪ್ರ್ಯಶ್ಯತೆಯ ಕಾರಣದಿಂದಾಗಿ ಶಿಕ್ಷಣದ ಹಕ್ಕು, ಸಂಪತ್ತಿನ ಹಕ್ಕು, ವ್ಯಾಪಾರದ ಹಕ್ಕು ಸೇರಿದಂತೆ ಅನೇಕ ನಾಗರೀಕ ಹಕ್ಕುಗಳಿಂದ ವಂಚಿತವಾಗಿವೆ. ಇತಿಹಾಸದಲ್ಲಿನ ಇಂತಹ ತಾರತಮ್ಯಗಳನ್ನು ನಿವಾರಿಸಿ ಭವಿಷ್ಯದಲ್ಲಿ ಅವರ ಹಕ್ಕುಗಳನ್ನು ಸಂರಕ್ಷಿಸಲು ಮೀಸಲಾತಿಯನ್ನು ಸಂವಿಧಾನದಲ್ಲಿ ಕಲ್ಪಿಸಲಾಗಿದೆ.
    ಸಾವಿರಾರು ವರ್ಷಗಳಿಂದ ಜಾತಿಯ ಕಾರಣಕ್ಕೆ ಹಲವು ಹಕ್ಕುಗಳನ್ನು,ಅವಕಾಶಗಳನ್ನು ಕೆಲವು ಸಮುದಾಯಗಳಿಗೆ ನಿರಾಕರಿಸುತ್ತ ಬರಲಾಗಿದೆ.ವರ್ಣಾಶ್ರಮ ವ್ಯವಸ್ಥೆಯನ್ನು ಮುಂದಿಟ್ಟು ಧರ್ಮದ ಹೆಸರಿನಲ್ಲಿ ಇಂತಹ ವಂಚನೆಗೆ ರಕ್ಷಣೆ ಪಡೆಯಲಾಗಿದೆ.
    ಕೆಳಜಾತಿಗಳನೆಸಿಕೊಂಡ ಕೆಲವು ಸಮುದಾಯಗಳ ಮೇಲೆ ನಡೆಯುತ್ತಿರುವ ಎಲ್ಲ ರೀತಿಯ ಅನ್ಯಾಯ, ಶೋಷಣೆ, ತಾರತಮ್ಯ ವಂಚನೆಗಳಿಗೆ ಮುಖ್ಯ ಕಾರಣ ಜಾತಿಪದ್ದತಿ.ಹಾಗೆಯೇ ಜಾತಿಯ ಕಾರಣಕ್ಕೆ ಅವಕಾಶಗಳಿಂದ ವಂಚಿತರಾದ ಈ ಸಮುದಾಯಗಳಿಗೆ ಅದೇ ಜಾತಿಯ ಆಧಾರದಲ್ಲೆ ಮೀಸಲಾತಿಯ ಮೂಲಕ ಅವಕಾಶಗಳನ್ನು ಕಲ್ಪಿಸುವುದು ಅನಿವಾರ್ಯವಾಗಿದೆ
    ಇಂತಹ ಸಮಯದಲ್ಲಿ ಅತ್ಯಂತ ವಿವೇಚನೆಯಿಂದ ವರ್ತಿಸಬೇಕಾಗುತ್ತದೆ.ಇಂತಹ ಜಾತಿ ಹಾಗೂ ಧರ್ಮದ ಆಚರಣೆಯ ನೆಪದಲ್ಲಿ ಬಹು ಸಂಖ್ಯಾತರನ್ನು ಸಮಾಜದ ಮುಖ್ಯವಾಹಿನಿಯಿಂದ ದೂರವಿಟ್ಟು ಎಲ್ಲಾ ಅವಕಾಶಗಳನ್ನು ಕಬಳಿಸಿದ ವರ್ಗ ಸದಾ ಎಚ್ಚರಿಕೆಯಿಂದ ಗಮನಿಸುತ್ತಿದ್ದು ತಪ್ಪುಗಳಾಗುತ್ತಿದ್ದಂತೆ ಅದನ್ನು ನ್ಯಾಯಾಲಯದ ಗಮನಕ್ಕೆ ತರುವ ಮೂಲಕ ಸಾಂವಿಧಾನಿಕ ಬಿಕ್ಕಟ್ಟು ಸೃಷ್ಟಿಸಲು ಪ್ರಯತ್ನಿಸುತ್ತದೆ.
    ಗ್ರಾಮೀಣ ಕೃಪಾಂಕದಂತಹ ವ್ಯವಸ್ಥೆ ರದ್ದುಗೊಂಡಿದ್ದು ನಮ್ಮ ಕಣ್ಣ ಮುಂದೆಯೆ ಇದೆ.ಅಷ್ಟೇ ಅಲ್ಲ ಈ ಹಿಂದೆ ವೀರಪ್ಪ ಮೊಯ್ಲಿ ಅವರು ಮುಖ್ಯಮಂತ್ರಿಯಾಗಿದ್ದ ವೇಳೆ ಇಂತಹುದೇ ನಿರ್ಧಾರವನ್ನು ಕೈಗೊಳ್ಳಲಾಗಿತ್ತು.ಈಗಿನಂತೆ ಆಗಲೂ ಚುನಾವಣೆ ಸಮಯ ಹಿಂದುಳಿದ, ಒಕ್ಕಲಿಗ ಸೇರಿದಂತೆ ಹಲವು ಸಮುದಾಯಗಳಿಗೆ ಮೀಸಲಾತಿ ಘೋಷಿಸಿ, ಆದೇಶ ಕೂಡಾ ಹೊರಡಿಸಿದರು. ಆಗಲೂ ಅವರಿಗೆ ಈಗಿನಂತೆ ನೆರೆಯ ತಮಿಳುನಾಡಿನ ಉದಾಹರಣೆ ಕಣ್ಣ ಮುಂದೆ ಇತ್ತು ಅದರಂತೆ ತೀರ್ಮಾನ ಕೈಗೊಂಡ ಪರಿಣಾಮ ಮೀಸಲಾತಿ ಪ್ರಮಾಣ ಸರಿ ಸುಮಾರು ಶೇ.70 ರ ಆಸುಪಾಸು ಬಂದಿತು. ಕೊನೆಗೆ ಅದು ನ್ಯಾಯಾಲಯದ ಕೆಂಗಣ್ಣಿಗೆ ಗುರಿಯಾಗಿ ರದ್ದುಗೊಂಡಿದ್ದು ಇತಿಹಾಸ.
    ಈಗಲೂ ಸರಿ ಸುಮಾರು ಇದೇ ಪುನಾರವರ್ತನೆಯಾಗುವ ಆತಂಕವಿದೆ.ಸರ್ಕಾರ ತಾನು ಕೈಗೊಂಡ ನಿರ್ಧಾರದ ಬಗ್ಗೆ ಒಂದು ಆದೇಶ ಹೊರಡಿಸುವ ಮೂಲಕ ಜಾರಿಗೊಳಿಸಬಹುದು. ಅದರೆ ಇದು ಕೋರ್ಟ್ ನಲ್ಲಿ ಊರ್ಜಿತವಾಗುವುದಿಲ್ಲ ಇದಕ್ಕೆ ಮಾನ್ಯತೆ ಸಿಗಬೇಕಾದರೆ ಸಂವಿಧಾನ ತಿದ್ದುಪಡಿಯಾಗಲೇಬೇಕು ಈ ಅಧಿಕಾರ ಇರುವುದು ಸಂಸತ್ತಿಗೆ ಮಾತ್ರ.
    ರಾಜ್ಯ ಸರ್ಕಾರಕ್ಕೆ ಹಾಗೂ ಈ ಮೀಸಲಾತಿಗಾಗಿ ಅಧಿಕಾರದಲ್ಲಿಲ್ಲದಾಗ ಪಾದಯಾತ್ರೆ ಮಾಡಿದ ನಾಯಕರಿಗೆ ಚುನಾವಣೆ ವರ್ಷದಲ್ಲಿ ಇಂತಹ ತೀರ್ಮಾನ ಎಷ್ಟರಮಟ್ಟಿಗೆ ಕಾರ್ಯಸಾಧ್ಯ ಎಂಬುದನ್ನು ಯೋಚಿಸಬೇಕಿತ್ತು.ಆದರೂ ಈಗಲೂ ಕಾಲ ಮಿಂಚಿಲ್ಲ.ಸಂಸತ್ತಿನ ಚಳಿಗಾಲದ ಅಧಿವೇಶನ ಸದ್ಯದಲ್ಲೇ ನಡೆಯಲಿದೆ ಅದಕ್ಕೂ ಮುನ್ನ ಈ ವಿಷಯದಲ್ಲಿ ಒಮ್ಮತ ಮೂಡಿಸಬೇಕಿದೆ. ತಮಿಳುನಾಡಿನಂತೆ ರಾಜಕೀಯ ಪ್ರಭಾವ ಮತ್ತು ಇಚ್ಛಾಶಕ್ತಿ ಪ್ರದರ್ಶಿಸಬೇಕಿದೆ.
    ತೀರ್ಮಾನ ತೆಗೆದುಕೊಳ್ಳುವ ಮುನ್ನ ಸರ್ವಪಕ್ಷ ಸಭೆ ನಡೆಸಿದ ರೀತಿಯಲ್ಲಿ ಕೇಂದ್ರಕ್ಕೆ ಸರ್ವಪಕ್ಷ ನಿಯೋಗ ಹೋಗಬೇಕು ಇಲ್ಲವೇ ಅತಿ ಹೆಚ್ಷಿನ‌ ಸಂಖ್ಯೆಯಲ್ಲಿರುವ ರಾಜ್ಯದ ಬಿಜೆಪಿ ಸಂಸದರು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಿ ಸಂವಿಧಾನ ತಿದ್ದುಪಡಿಯಾಗುವಂತೆ ನೋಡಿಕೊಂಡರೆ ಮಾತ್ರ ಈ ಸಮುದಾಯಗಳ ನ್ಯಾಯಯುತ ಬೇಡಿಕೆಗೆ ಮಾನ್ಯತೆ ಸಿಗಲಿದೆ ಇಲ್ಲವಾದರೆ ಇದೊಂದು ರಾಜಕೀಯ ಗಿಮಿಕ್ ಆಗಲಿದೆ ಎನ್ನುವುದರಲ್ಲಿ ಯಾವುದೇ ಸಂದೇಹವಿಲ್ಲ
    ಇನ್ನೂ ಜಾತೀಯತೆಯಿಂದ ನರಳುತ್ತಿರುವ ದೇಶದಲ್ಲಿ ಸ್ವಾತಂತ್ರ್ಯಾ ನಂತರವೂ ಬದಲಾಗದೆ ಇರುವ ಒಂದು ವಿಷಯವೆಂದರೆ ಅದು ಜಾತಿಯಾಗಿದೆ. ವಿಶೇಷವೆಂದರೆ ಇಲ್ಲಿನ ವ್ಯವಸ್ಥೆಯಲ್ಲಿ ಹಣ ನೀಡಿ ಇಲ್ಲವೇ ಪ್ರಭಾವ ಬಳಸಿ ಯಾರೂ ಬೇಕಾದರೂ ಯಾವ ಜಾತಿಯ ಪ್ರಮಾಣಪತ್ರವನ್ನಾದರೂ ಪಡೆಯಬಹುದು ಎನ್ನುವ ವಾತಾವರಣವಿದೆ.
    ಇಂತಹ ವ್ಯವಸ್ಥೆಯಲ್ಲಿ ಇನ್ನು ವಾರ್ಷಿಕ ವರಮಾನ ಪ್ರಮಾಣ ಪತ್ರ ಪಡೆಯುವ ಮಾರ್ಗವಂತೂ
    ಇನ್ನೂ ಸುಲಭವಾದ ವಿಷಯವಾಗಿದೆ.ಹಾಗಾಗಿ ಆರ್ಥಿಕ ಸ್ಥಿತಿಗತಿಯ ಮೇಲೆ ಮೀಸಲಾತಿಯನ್ನು ಹಲವು ಸಮುದಾಯಗಳು ಕೇಳುತ್ತಿರುವುದು ಯೋಚಿಸಬೇಕಾದ ಸಂಗತಿ.ಈ ವರ್ಗಗಳಿಗೆ ಆರ್ಥಿಕ ಸ್ಥಿತಿ ಆಧರಿಸಿ ಮೀಸಲಾತಿ ಕೊಡಲೇ ಬೇಕು. ಮೀಸಲಾತಿಯ ಉದ್ದೇಶವೇ ಎಲ್ಲರನ್ನೂ ಮುಖ್ಯವಾಹಿನಿಯಲ್ಲಿ ಸೇರಿಸಿಕೊಂಡ ಹೋಗಬೇಕು ಸಮಾನತೆಯೇ ಮೀಸಲಾತಿಯ ಉದ್ದೇಶ.
    ಹೀಗಿರುವಲ್ಲಿ ಹಣ ಕೊಟ್ಟು ಪಡೆಯಬಲ್ಲಂತಹ ಪ್ರಮಾಣಪತ್ರಗಳನ್ನಿಟ್ಟುಕೊಂಡು ಮೀಸಲಾತಿಯ
    ‌ಬೇಡಿಕೆ ಇಡುವುದು ಸರ್ಕಾರದ ಮೇಲೆ ಒತ್ತಡ ಹೇರುವುದು ಸರಿಯಲ್ಲ.ಇದರ ಬದಲಾಗಿ ಮೀಸಲಾತಿ ನೀಡಲು ವೈಜ್ಞಾನಿಕ ಮಾನದಂಡ ಅಗತ್ಯ ಅದಕ್ಕಾಗಿ ಕುಲ ಶಾಸ್ತ್ರೀಯ ಅಧ್ಯಯನ ಅಥವಾ ಶೈಕ್ಷಣಿಕ, ಸಾಮಾಜಿಕ, ಆರ್ಥಿಕ ಸಮೀಕ್ಷೆಯ ವರದಿಗಳು ಬೇಕು. ಈ ನಿಟ್ಟಿನಲ್ಲಿ ಬೇಡಿಕೆ ಮಂಡಿಸಬೇಕು ಇಂತಹ ವರದಿಯ ಆಧಾರದಲ್ಲಿ ಕೈಗೊಳ್ಳಲಾದ ನಿರ್ಧಾರಗಳಿಗೆ ಶಾಸನಾತ್ಮಕ ಮಾನ್ಯತೆ ಲಭಿಸಲಿದೆ.ಹೀಗಾಗಿ ರಾಜ್ಯ ಸರ್ಕಾರ ಈಗಾಗಲೇ ಅಧ್ಯಯನ ಪೂರ್ಣಗೊಳಿಸಿರುವ ಕಾಂತರಾಜು ವರದಿ ಪಡೆದು ಚರ್ಚೆಯ ಮೂಲಕ ಅನುಷ್ಠಾನದ ಕ್ರಮ ಕೈಗೊಳ್ಳಬೇಕು.ಇಲ್ಲವೇ ಕೇಂದ್ರ ಸರ್ಕಾರ ನಡೆಸಲಿರುವ ವರದಿಯವರಗೆ ಕಾಯಬೇಕು.ಇದನ್ನು ಬಿಟ್ಟು ಒತ್ತಡಕ್ಕೆ‌ ಮಣಿದು ತೀರ್ಮಾನ ಕೈಗೊಂಡರೆ ಅದು ಮೀಸಲಾತಿ ತತ್ವಕ್ಕೆ ಮಾಡಿದ ಅಣಕ,ಅವಕಾಶ ವಂಚಿತರಿಗೆ ಮಾಡುವ ದ್ರೋಹವಾಗಲಿದೆ.

    ECI Report ಧರ್ಮ ನ್ಯಾಯ ರಾಜಕೀಯ ವ್ಯಾಪಾರ ಶಿಕ್ಷಣ
    Share. Facebook Twitter Pinterest LinkedIn Tumblr Email WhatsApp
    Previous ArticleAICC ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ
    Next Article ಈ ಬಾರಿ ಕಡ್ಡಾಯವಾಗಿ ಹಸಿರು ಪಟಾಕಿ ಮಾತ್ರ
    vartha chakra
    • Website

    Related Posts

    ಉಗ್ರರನ್ನು ಹೊಡೆದುರುಳಿಸಿದ್ದು ಬೆಂಗಳೂರಿನ ಡ್ರೋನ್

    ಮೇ 8, 2025

    ಆಪರೇಷನ್ ಸಿಂಧೂರ

    ಮೇ 7, 2025

    ಮಹಿಳೆಯರೇ‌ ಹುಷಾರ್

    ಮೇ 7, 2025

    Comments are closed.

    ವಿಭಾಗಗಳು
    • Trending
    • Viral
    • ಅಂತಾರಾಷ್ಟ್ರೀಯ
    • ಅಪರಾಧ
    • ಆರೋಗ್ಯ
    • ಕಲೆ
    • ಕಾನೂನು
    • ಕಾಮಗಾರಿ
    • ಕ್ರೀಡೆ
    • ಗಾಂಧಿ ಜಯಂತಿ
    • ಗೃಹಲಕ್ಷ್ಮಿ
    • ಗ್ಯಾರಂಟಿ ಯೋಜನೆ
    • ಚುನಾವಣೆ
    • ಚುನಾವಣೆ 2024
    • ಡಿ.ಕೆ.ಶಿವಕುಮಾರ್
    • ತಂತ್ರಜ್ಞಾನ
    • ಧಾರ್ಮಿಕ
    • ಪ್ರಚಲಿತ
    • ಬಂಧನ
    • ಬೆಂಗಳೂರು
    • ಮತ್ತಷ್ಟು
    • ಮನರಂಜನೆ
    • ಮಾಹಿತಿ
    • ಮಾಹಿತಿ
    • ಮುಖ್ಯಮಂತ್ರಿಗಳು
    • ರಾಜಕೀಯ
    • ರಾಜ್ಯ
    • ರಾಷ್ಟ್ರೀಯ
    • ವಾಣಿಜ್ಯ
    • ವಾರ್ತಾಚಕ್ರ ವಿಶೇಷ
    • ವಿಜ್ಞಾನ
    • ವಿಶೇಷ ಸುದ್ದಿ
    • ಶಿಕ್ಷಣ
    • ಸಂಚಾರ
    • ಸಮಾಜ
    • ಸಮೂಹ ಶಕ್ತಿ
    • ಸರ್ಕಾರ
    • ಸಾಹಿತ್ಯ
    • ಸಿನೆಮ
    • ಸುದ್ದಿ
    • ಹವಾಮಾನ
    • Facebook
    • Twitter
    • YouTube
    ಅದನ್ನು ಕಳೆದುಕೊಳ್ಳಬೇಡಿ

    ಉಗ್ರರನ್ನು ಹೊಡೆದುರುಳಿಸಿದ್ದು ಬೆಂಗಳೂರಿನ ಡ್ರೋನ್

    ಗೆಲುವಿಗಾಗಿ ವಿಶೇಷ ಪೂಜೆ.

    ಆಪರೇಷನ್ ಸಿಂಧೂರ

    ಮಹಿಳೆಯರೇ‌ ಹುಷಾರ್

    Quick Links
    • About Us
    • Privacy Policy
    • Terms & Conditions
    • Contact Us 
    Latest Comments
    • JamesRoody ರಲ್ಲಿ ಶಂಕಿತ ಉಗ್ರರ ಜಾಲದ ಕುರಿತು ಆಳವಾದ ತನಿಖೆ | Bengaluru
    • LarrySquag ರಲ್ಲಿ ಶಿವಕುಮಾರ್ ಅವರಿಗೆ ಕಿರುಕುಳ? | DK Shivakumar
    • Martinboorn ರಲ್ಲಿ ಮತದಾನಕ್ಕೆ ಹೇಗೆಲ್ಲಾ ವ್ಯವಸ್ಥೆ ಮಾಡಲಾಗಿದೆ ಗೊತ್ತಾ | Lok Sabha Elections 2024
    Latest Kannada News

    ಉಗ್ರರನ್ನು ಹೊಡೆದುರುಳಿಸಿದ್ದು ಬೆಂಗಳೂರಿನ ಡ್ರೋನ್

    ಮೇ 8, 2025

    ಗೆಲುವಿಗಾಗಿ ವಿಶೇಷ ಪೂಜೆ.

    ಮೇ 8, 2025

    ಆಪರೇಷನ್ ಸಿಂಧೂರ

    ಮೇ 7, 2025
    Connect With Us
    • Facebook
    • Twitter
    • YouTube
    Copyright © 2023 Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ

    Type above and press Enter to search. Press Esc to cancel.

    Vartha Chakra

    ಎಡಕ್ಕೂ ಇಲ್ಲ ಬಲಕ್ಕೂ ಇಲ್ಲ, ಬರಿ ನೇರ ನೇರ - ಅದೇ ವಾರ್ತಾಚಕ್ರ
    ಕನ್ನಡದ ಅನನ್ಯ ನ್ಯೂಸ್ ಚಾನಲ್
    ಸತ್ಯ ಶುದ್ದ ಶಿಷ್ಠ
    #Kannada #Kannadiga #Bangalore #Bengaluru #Kannadanews #Karnataka

    Vartha Chakra
    Kannada Digital News Channel - Curated, Managed and Operated by Professional Journalists ಇನ್ನಷ್ಟು ನಂಬಲರ್ಹ ಸುದ್ದಿಗಳಿಗಾಗಿ ಭೇಟಿ ನೀಡಿ www.varthachakra.com
    ಇತಿಹಾಸದಲ್ಲೇ ಮೊದಲಬಾರಿಗೆ ಕಗ್ಗತ್ತಲಲ್ಲಿ ಮುಳುಗಿದ ಸ್ವರ್ಣ ಮಂದಿರ#goldentemple #news #facts #historyinshorts
    Subscribe