Facebook X (Twitter) Instagram
    Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • Videos
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ
    Vartha Chakra
    You are at:Home » ದೀಪಾವಳಿಗೆ No Halal
    ಸುದ್ದಿ

    ದೀಪಾವಳಿಗೆ No Halal

    vartha chakraBy vartha chakraಅಕ್ಟೋಬರ್ 18, 2022Updated:ಅಕ್ಟೋಬರ್ 18, 2022ಯಾವುದೇ ಟಿಪ್ಪಣಿಗಳಿಲ್ಲ1 Min Read
    Facebook Twitter WhatsApp Pinterest LinkedIn Tumblr Email
    Share
    Facebook Twitter LinkedIn Pinterest Email WhatsApp
    Verbattle
    Verbattle

    ಬೆಳಕಿನ ಹಬ್ಬ ದೀಪಾವಳಿ ಸಮೀಪಿಸುತ್ತಿರುವ ಬೆನ್ನಲ್ಲೇ ರಾಜ್ಯದಲ್ಲಿ ಮತ್ತೊಮ್ಮೆ ವ್ಯಾಪಾರಕ್ಕೆ ಧರ್ಮ ರಾಜಕಾರಣ ಅಂಟಿಕೊಂಡಿದೆ.ಈ‌ ಹಿಂದೆ ಕೆಲ ದಿನಗಳ ಕಾಲ ರಾಜ್ಯದ ಹಲವೆಡೆ ಸದ್ದು ಮಾಡಿ ತಣ್ಣಗಾಗಿದ್ದ ವಿವಾದ ಇದೀಗ ಮತ್ತೆ ಮುನ್ನೆಲೆಗೆ ಬಂದಿದೆ.
    ಹಬ್ಬ ಸಮೀಪಿಸುತ್ತಿರುವ ಸಂದರ್ಭದಲ್ಲೇ ಹಿಂದುಪರ ಸಂಘಟನೆಗಳು ರಾಜ್ಯಾದ್ಯಂತ ಹಲಾಲ್ ಉತ್ಪನ್ನಗಳನ್ನು ಬಹಿಷ್ಕರಿಸಬೇಕೆಂದು ಅಭಿಯಾನ ಆರಂಭಿಸಿವೆ.ನರಕ ಚತುರ್ದಶಿಯಂದು ಕೆಲವರು ಮಾಂಸದೂಟದ ಸಂಪ್ರದಾಯ ಆಚರಿಸುತ್ತಿದ್ದು ಇವರನ್ನು ಗುರಿಯಾಗಿಸಿ ಹಲಾಲ್ ಬಹಿಷ್ಕಾರದ ಕರೆ ನೀಡಲಾಗಿದೆ.
    ಈ ಕುರಿತಂತೆ ಹೇಳಿಕೆ ನೀಡಿರುವ ಹಿಂದೂಪರ ಚಿಂತಕ ಚಕ್ರವರ್ತಿ ಸೂಲಿಬೆಲೆ ಭಾರತದಲ್ಲಿ ತಯಾರಿ ಆಗುವ ಎಲ್ಲಾ ವಸ್ತುಗಳಿಗೆ ಹಲಾಲ್ ಸರ್ಟಿಫಿಕೇಟ್ ಹಾಕಲು ಪ್ರಾರಂಭ ಮಾಡಿದ್ದಾರೆ. ಇದು ನಮ್ಮ ಉದ್ಯೋಗವನ್ನು ಕಸಿದು, ಮುಸ್ಲಿಮರಿಗೆ ಉದ್ಯೋಗ ಹಂಚಿಕೆಯಾಗುತ್ತಿದೆ. ಅವರು ಅವರ ದೇವರಿಗೆ ಅರ್ಪಿಸಿದನ್ನು ನಾವು ಯಾಕೆ ನಮ್ಮ ದೇವರಿಗೆ ಕೊಡಬೇಕು. ಹಲಾಲ್ ಪ್ರಾಡಕ್ಟ್ ತೆಗೆದುಕೊಳ್ಳುವುದಿಲ್ಲ ಎಂದು ಎಲ್ಲರೂ ತೀರ್ಮಾನ ಮಾಡಬೇಕು ಎಂದು ಕರೆ ನೀಡಿದ್ದಾರೆ.
    ಹಲಾಲ್ ಎನ್ನುವುದು ಬರೀ ಮಾಂಸಕ್ಕೆ ಮಾತ್ರ ಸೀಮಿತವಾಗಿಲ್ಲ. ತಮಿಳುನಾಡಿನಲ್ಲಿ ಹಪ್ಪಳದ ಮೇಲೆ ಹಲಾಲ್ ಮಾರ್ಕ್ ಇದೆ. ಈ ಬಗ್ಗೆ ವಿಸ್ತಾರವಾದ ಹೋರಾಟ ಆಗಬೇಕು. ಹಲಾಲ್ ಮಾರ್ಕ್ ಕಂಪನಿ ಭಾರತದ ಎಕನಾಮಿಯನ್ನು ನುಂಗಿಹಾಕುತ್ತಿದೆ. ಭಾರತೀಯ ಉದ್ಯೋಗವನ್ನು ಕಸಿಯುವ ಕೆಲಸ ಮಾಡುತ್ತಿದ್ದಾರೆ ಎಂದು ಆಪಾದಿಸಿದ್ದಾರೆ.
    ಇದರ ಬೆನ್ನಲ್ಲೇ ಹಲವು ಹಿಂದೂ ಪರ ಸಂಘಟನೆಗಳು ಹಲಾಲ್ ಬಹಿಷ್ಕಾರದ ಕರೆ ನೀಡಿದ್ದು,ಇದಕ್ಕೆ ಆಂದೋಲನ ರೂಪ ನೀಡುವಂತೆ ಮನವಿ ಮಾಡಿವೆ.ಜೊತೆಗೆ ಮುಸ್ಲಿಂ ವ್ಯಾಪಾರಿಗಳಿಂದ ಹಣ್ಣು, ಹೂವು,ಸಿಹಿ ಮತ್ತು ಪೂಜಾ ಸಾಮಗ್ರಿಗಳನ್ನು ಖರೀದಿಸದಂತೆ ಮನವಿ ಮಾಡಲಾಗುತ್ತಿದೆ.
    ಹಲಾಲ್ ಪ್ರಮಾಣ ಪತ್ರದ ಹೆಸರಿನಲ್ಲಿ ದೇಶಾದ್ಯಂತ ಹಿಂದೂ ವ್ಯಾಪಾರಿಗಳಿಂದ ಸಾವಿರಾರು ಕೋಟಿ ರೂಪಾಯಿ ಲೂಟಿ ಮಾಡಲಾಗುತ್ತಿದೆ. ಬೆಂಗಳೂರಿನಲ್ಲಿ ಮಹಾ ಸಭೆ ನಡೆಸಿರುವ ಹಿಂದೂ ಸಂಘಟನೆಗಳು ಪ್ರತಿ ಜಿಲ್ಲೆಗಳಲ್ಲೂ ಅಭಿಯಾನ ನಡೆಸಲು ಮುಂದಾಗಿವೆ.
    ರಾಜಧಾನಿ ಬೆಂಗಳೂರು, ದಕ್ಷಿಣ ಕನ್ನಡ, ಉಡುಪಿ, ಉತ್ತರಕನ್ನಡ, ಹುಬ್ಬಳ್ಳಿ-ಧಾರಾವಾಡ, ಶಿವಮೊಗ್ಗ, ದಾವಣಗೆರೆ, ತುಮಕೂರು, ಮೈಸೂರು, ರಾಮನಗರ ಸೇರಿದಂತೆ ಬಹುತೇಕ ಎಲ್ಲ ಜಿಲ್ಲೆಗಳಲ್ಲೂ ಹಿಂದೂಪರ ಸಂಘಟನೆಗಳು ಸದ್ದಿಲ್ಲದೆ ಈ ಅಭಿಯಾನ ಆರಂಭಿಸಿವೆ.

    Verbattle
    Verbattle
    Verbattle
    ಉಡುಪಿ ತುಮಕೂರು ಧರ್ಮ ವ್ಯಾಪಾರ ಹುಬ್ಬಳ್ಳಿ
    Share. Facebook Twitter Pinterest LinkedIn Tumblr Email WhatsApp
    Previous Articleಈ ಬಾರಿ ಕಡ್ಡಾಯವಾಗಿ ಹಸಿರು ಪಟಾಕಿ ಮಾತ್ರ
    Next Article ಅಪಘಾತ ತಡೆಗಟ್ಟಲು Humps ಬೇಕಂತೆ
    vartha chakra
    • Website

    Related Posts

    ಸಚಿವ ಬೈರತಿ ಸುರೇಶ್ ಕಚೇರಿಯಲ್ಲಿ ಕಳ್ಳತನ.

    ಫೆಬ್ರವರಿ 10, 2026

    ಬೆಂಗಳೂರು ಮೆಟ್ರೋ ದರ ಏರಿಕೆ, ಕೇಂದ್ರ – ರಾಜ್ಯ ಸರ್ಕಾರದ ನಡುವೆ ತೀವ್ರಗೊಂಡ ಜಿದ್ದಾಜಿದ್ದಿ

    ಫೆಬ್ರವರಿ 10, 2026

    ನಮ್ಮ ಮೆಟ್ರೋ ದರ ಏರಿಕೆ ತಡೆಹಿಡಿದಿದ್ದು ರಾಜ್ಯ ಸರ್ಕಾರ; ಕೇಂದ್ರದ ಪತ್ರಕ್ಕೆ ಬೆಲೆಯಿಲ್ಲ: ಡಿಸಿಎಂ ಡಿ.ಕೆ. ಶಿವಕುಮಾರ್

    ಫೆಬ್ರವರಿ 10, 2026

    Comments are closed.

    Verbattle
    ವಿಭಾಗಗಳು
    • Trending
    • Viral
    • ಅಂಕಣ
    • ಅಂತಾರಾಷ್ಟ್ರೀಯ
    • ಅಪರಾಧ
    • ಆರೋಗ್ಯ
    • ಕಲೆ
    • ಕಾನೂನು
    • ಕಾಮಗಾರಿ
    • ಕ್ರೀಡೆ
    • ಗಾಂಧಿ ಜಯಂತಿ
    • ಗೃಹಲಕ್ಷ್ಮಿ
    • ಗ್ಯಾರಂಟಿ ಯೋಜನೆ
    • ಚುನಾವಣೆ
    • ಚುನಾವಣೆ 2024
    • ಡಿ.ಕೆ.ಶಿವಕುಮಾರ್
    • ತಂತ್ರಜ್ಞಾನ
    • ಧಾರ್ಮಿಕ
    • ಪ್ರಚಲಿತ
    • ಬಂಧನ
    • ಬೆಂಗಳೂರು
    • ಮತ್ತಷ್ಟು
    • ಮನರಂಜನೆ
    • ಮಾಹಿತಿ
    • ಮಾಹಿತಿ
    • ಮುಖ್ಯಮಂತ್ರಿಗಳು
    • ರಾಜಕೀಯ
    • ರಾಜ್ಯ
    • ರಾಷ್ಟ್ರೀಯ
    • ವಾಣಿಜ್ಯ
    • ವಾರ್ತಾಚಕ್ರ ವಿಶೇಷ
    • ವಿಜ್ಞಾನ
    • ವಿಶೇಷ ಸುದ್ದಿ
    • ವಿಶ್ಲೇಷಣೆ
    • ಶಿಕ್ಷಣ
    • ಸಂಚಾರ
    • ಸಮಾಜ
    • ಸಮೂಹ ಶಕ್ತಿ
    • ಸರ್ಕಾರ
    • ಸಾಹಿತ್ಯ
    • ಸಿನೆಮ
    • ಸುದ್ದಿ
    • ಹವಾಮಾನ
    • Facebook
    • Twitter
    • YouTube
    ಅದನ್ನು ಕಳೆದುಕೊಳ್ಳಬೇಡಿ

    ಸಚಿವ ಬೈರತಿ ಸುರೇಶ್ ಕಚೇರಿಯಲ್ಲಿ ಕಳ್ಳತನ.

    ಬೆಂಗಳೂರು ಮೆಟ್ರೋ ದರ ಏರಿಕೆ, ಕೇಂದ್ರ – ರಾಜ್ಯ ಸರ್ಕಾರದ ನಡುವೆ ತೀವ್ರಗೊಂಡ ಜಿದ್ದಾಜಿದ್ದಿ

    ನಮ್ಮ ಮೆಟ್ರೋ ದರ ಏರಿಕೆ ತಡೆಹಿಡಿದಿದ್ದು ರಾಜ್ಯ ಸರ್ಕಾರ; ಕೇಂದ್ರದ ಪತ್ರಕ್ಕೆ ಬೆಲೆಯಿಲ್ಲ: ಡಿಸಿಎಂ ಡಿ.ಕೆ. ಶಿವಕುಮಾರ್

    ರಷ್ಯಾ ಅಧ್ಯಕ್ಷ ಪುತಿನ್ ಸುತ್ತ ಲೈಂಗಿಕ ಬ್ಲ್ಯಾಕ್‌ಮೇಲ್ ತಂತ್ರದ ಹುತ್ತ: ಏನಿದು ಹನಿ ಟ್ರ್ಯಾಪ್?

    Quick Links
    • About Us
    • Privacy Policy
    • Terms & Conditions
    • Contact Us 
    Latest Comments
    • Glennhof ರಲ್ಲಿ ಹಬ್ಬಕ್ಕೆ ಬೋನಸ್ ನೀಡದ ಮಾಲೀಕನ ಕೊಂದ ನೌಕರರು
    • LinwoodGah ರಲ್ಲಿ May 3, 2023 51st Year Free Mass Marriage at Sri Kshetra Dharmasthala
    • Meronmub ರಲ್ಲಿ ಆಚಾರವಿಲ್ಲದ ನಾಲಿಗೆ- ರಾಮಲಿಂಗಾರೆಡ್ಡಿ ಕಿಡಿ ಕಿಡಿ | Anantkumar Hedge
    Latest Kannada News

    ಸಚಿವ ಬೈರತಿ ಸುರೇಶ್ ಕಚೇರಿಯಲ್ಲಿ ಕಳ್ಳತನ.

    ಫೆಬ್ರವರಿ 10, 2026

    ಬೆಂಗಳೂರು ಮೆಟ್ರೋ ದರ ಏರಿಕೆ, ಕೇಂದ್ರ – ರಾಜ್ಯ ಸರ್ಕಾರದ ನಡುವೆ ತೀವ್ರಗೊಂಡ ಜಿದ್ದಾಜಿದ್ದಿ

    ಫೆಬ್ರವರಿ 10, 2026

    ನಮ್ಮ ಮೆಟ್ರೋ ದರ ಏರಿಕೆ ತಡೆಹಿಡಿದಿದ್ದು ರಾಜ್ಯ ಸರ್ಕಾರ; ಕೇಂದ್ರದ ಪತ್ರಕ್ಕೆ ಬೆಲೆಯಿಲ್ಲ: ಡಿಸಿಎಂ ಡಿ.ಕೆ. ಶಿವಕುಮಾರ್

    ಫೆಬ್ರವರಿ 10, 2026
    Connect With Us
    • Facebook
    • Twitter
    • YouTube
    Copyright © 2023 Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • Videos
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ

    Type above and press Enter to search. Press Esc to cancel.