ಹೈದರಾಬಾದ್- ಈಗ ಎಲ್ಲಿ ಕೇಳಿದರೂ ಶಾಸಕರ ಖರೀದಿ ಕುರಿತಾದ ರಾಜಕೀಯ ಚರ್ಚೆ ನಡೆಯುತ್ತಿದೆ. ಕರ್ನಾಟಕದಿಂದ ಆರಂಭವಾಗಿ ಮೇಘಾಲಯದವರಗೆ ಇದೇ ಸುದ್ದಿ.ಇದೀಗ ನೆರೆಯ ತೆಲಂಗಾಣದಲ್ಲಿ ಶಾಸಕರ ಖರೀದಿಗೆಂದು ಬಂದವರು ಇದೀಗ ಪೊಲೀಸರ ಅತಿಥಿಗಳಾಗಿದ್ದಾರೆ.
ಟಿ.ಆರ್ ಎಸ್ ನ ಶಾಸಕರಾದ ಜಿ ಬಾಲರಾಜು, ಬಿ ಹರ್ಷವರ್ಧನ್ ರೆಡ್ಡಿ, ಆರ್ ಕಾಂತರಾವ್ ಮತ್ತು ರೋಹಿತ್ ರೆಡ್ಡಿ ಅವರನ್ನು ಸಂಪರ್ಕಿಸಿದ ಮೂವರು ಪಕ್ಷ ಬಿಡುವಂತೆ ಹೇಳಿ ಹಲವು ಆಮಿಷಗಳನ್ನೊಡ್ಡಿದ್ದಾರೆ.ಬಿಜೆಪಿ ಕಾರ್ಯಕರ್ತರು ಎನ್ನಲಾದ ಇವರ ಬಗ್ಗೆ ಶಾಸಕರು ಪಕ್ಷದ ಮುಖಂಡರಿಗೆ ಮಾಹಿತಿ ನೀಡಿದ್ದಾರೆ ಅವರ ಸಲಹೆಯ ಮೇರೆಗೆ ವಿಷಯವನ್ನು ಪೊಲೀಸರಿಗೆ ಮುಟ್ಟಿಸಿದ್ದಾರೆ ಇದರ ಆಧಾರದಲ್ಲಿ ಕಾರ್ಯಾಚರಣೆ ನಡೆಸಿದ ಹೈದರಾಬಾದ್ ಪೊಲೀಸರು ಮೂವರನ್ನು ವಶಕ್ಕೆ ಪಡೆದಿದ್ದಾರೆ.
ಪಕ್ಷ ಬಿಡಲು ಹೇಳಿ ನಮಗೆ ಆಮಿಷಗಳನ್ನು ಒಡ್ಡಲಾಗುತ್ತಿದೆ‘ ಎಂದು ಟಿಆರ್‌ಎಸ್ ಶಾಸಕರು ಮಾಹಿತಿ ನೀಡಿದ್ದರು. ಟಿಆರ್‌ಎಸ್ ತೊರೆದರೆ ಹಣ, ಅಧಿಕಾರ ನೀಡಲಾಗುವುದು ಎಂದು ಅವರಿಗೆ ಮೂವರು ಭರವಸೆ ನೀಡಿದ್ದರು’ ಈ ಮಾಹಿತಿ ಆಧರಿಸಿ ಕಾರ್ಯಾಚರಣೆ ನಡೆಸಲಾಯಿತು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಶಾಸಕರನ್ನು ಯಾವ ಪಕ್ಷಕ್ಕೆ ಸೆಳೆಯಲು ಪ್ರಯತ್ನಿಸಲಾಗುತ್ತಿತ್ತು ಎಂಬುದರ ಬಗ್ಗೆ ತನಿಖೆ ನಡೆಸಲಾಗುವುದು’ ಎಂದು ಪೊಲೀಸರು ಹೇಳಿದ್ದಾರೆ.
ಆದರೆ,ಇದು ಬಿಜೆಪಿಯದ್ದೇ ಕೃತ್ಯ ಎಂದಿರುವಸರ್ಕಾರದ ಮುಖ್ಯ ಸಚೇತಕ ಬಾಲ್ಕ ಸುಮನ್ ‘ಟಿಆರ್‌ಎಸ್ ಪಕ್ಷದ ಶಾಸಕರು ಕೆಸಿಆರ್ ಅವರ ಸೈನಿಕರು. ತೆಲಂಗಾಣದ ಸ್ವಾಭಿಮಾನದ ಪ್ರತಿನಿಧಿಗಳು ಎಂಬುದು ಮತ್ತೊಮ್ಮೆ ಸಾಬೀತಾಗಿದೆ’ ಎಂದು ಟ್ವೀಟ್ ಮಾಡಿದ್ದಾರೆ.
Previous Articleಖಗೋಳ ಕೌತುಕ ಕಣ್ತುಂಬಿಕೊಂಡ ಜನ..!
Next Article ಖೆಡ್ಡಾಗೆ ಬಿದ್ದು ಒದ್ದಾಡಿದ್ದ ಬಂಡೇಮಠದ ಬಸವಲಿಂಗ ಶ್ರೀ