Facebook X (Twitter) Instagram
    Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • Videos
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ
    Vartha Chakra
    You are at:Home » ಟ್ರಾಫಿಕ್ ನೋಡಿಕೊಳ್ಳಲು ಸಲೀಂ ಬಂದ್ರು – ಇನ್ನು ಸರಿಯಾಗುತ್ತೆ ಬಿಡಿ
    ಸುದ್ದಿ

    ಟ್ರಾಫಿಕ್ ನೋಡಿಕೊಳ್ಳಲು ಸಲೀಂ ಬಂದ್ರು – ಇನ್ನು ಸರಿಯಾಗುತ್ತೆ ಬಿಡಿ

    vartha chakraBy vartha chakraನವೆಂಬರ್ 26, 2022Updated:ನವೆಂಬರ್ 26, 2022ಯಾವುದೇ ಟಿಪ್ಪಣಿಗಳಿಲ್ಲ2 Mins Read
    Facebook Twitter WhatsApp Pinterest LinkedIn Tumblr Email
    Share
    Facebook Twitter LinkedIn Pinterest Email WhatsApp
    Verbattle
    Verbattle

    ಅಗಾಧ ಪ್ರಮಾಣದಲ್ಲಿ ಬೆಳೆಯುತ್ತಿರುವ ಬೆಂಗಳೂರು ನಗರದಲ್ಲಿ ‌ವಾಹನ ಸಂಚಾರ ಅತ್ಯಂತ ದೊಡ್ಡ ಸಮಸ್ಯೆಯಾಗಿದೆ.ಸುಗಮ ಸಂಚಾರಕ್ಕೆ ಸರ್ಕಾರ ಹಲವು ಪ್ರಯೋಗ ಮಾಡಿದರೂ ಅವುಗಳಿಂದ ನಿರೀಕ್ಷಿತ ಫಲಿತಾಂಶ ಬರುತ್ತಿಲ್ಲ.
    ಸಂಚಾರ ದಟ್ಟಣೆಯಿಂದ ಬೇಸತ್ತಿರುವ ಜನತೆ‌ ಸರ್ಕಾರದ ವಿರುದ್ಧ ಹಿಡಿಶಾಪ ಹಾಕುತ್ತಿದ್ದಾರೆ. ಬಂಡವಾಳ ಹೂಡಿಕೆ, ವ್ಯಾಪಾರ ವಹಿವಾಟಿಗೂ‌ ಇದರಿಂದ ಧಕ್ಕೆಯಾಗಿದೆ ಇದಕ್ಕೆಲ್ಲ ಪರಿಹಾರ ಕಂಡುಕೊಳ್ಳುವುದಕ್ಕಾಗಿ, ಸಂಚಾರ ವಿಭಾಗದ ಹೊಣೆಯನ್ನು ನಿರ್ವಹಿಸಲು ವಿಶೇಷ ಕಮಿಷನರ್ ಹುದ್ದೆ ಸೃಷ್ಟಿಸಲಾಗಿದೆ ಈ ಹುದ್ದೆಗೆ ಎಡಿಜಿಪಿ ಎಂ.ಎ. ಸಲೀಂ ಅವರನ್ನು ನೇಮಕ ಮಾಡಿದೆ.
    ಪೊಲೀಸ್ ಇಲಾಖೆಯಲ್ಲಿ ಅತ್ಯಂತ ದಕ್ಷ ಅಧಿಕಾರಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಎಂ.ಎ. ಸಲೀಂ ಅವರು ಈ ಹಿಂದೆ ಬೆಂಗಳೂರು ಸಂಚಾರ ವಿಭಾಗದ ಜಂಟಿ ಕಮಿಷನರ್ ಆಗಿ ಕೆಲಸ ಮಾಡಿದ್ದರು.ಈ ವೇಳೆ ನಗರದ ಸಂಚಾರ ದಟ್ಟಣೆ ನಿವಾರಿಸಲು
    ಸಾಕಷ್ಟು ಸುಧಾರಣಾ ಕ್ರಮಗಳನ್ನು ಜಾರಿಗೆ ತಂದಿದ್ದರು.ಇವುಗಳಲ್ಲಾ ಉತ್ತಮ ಫಲಿತಾಂಶ ನೀಡಿದ್ದವು.ಹೀಗಾಗಿ ಸದ್ಯ ಕಾಡುತ್ತಿರುವ ಸಮಸ್ಯಗಳಿಗೆ ಪರಿಹಾರ ಕಲ್ಪಿಸಬಹುದು ಎಂಬ ಭಾರಿ ನಿರೀಕ್ಷೆಯೊಂದಿಗೆ‌ ಸಲೀಂ ಅವರನ್ನೇ ವಿಶೇಷ ಕಮಿಷನರ್ ಆಗಿ ನೇಮಕ ಮಾಡಲಾಗಿದೆ.
    ಎಂ.ಎ.ಸಲೀಂ ಅವರ ನೇಮಕವನ್ನು ಬೆಂಗಳೂರಿಗರು ತುಂಬಾ ಸಂತೋಷದಿಂದ ಸ್ವಾಗತಿಸಿ ದ್ದಾರೆ.
    ಸಂಚಾರಿ ಪೊಲೀಸ್ ಮತ್ತು ಬೆಂಗಳೂರು ಪೊಲೀಸ್ ಸಾಮಾಜಿಕ ಜಾಲತಾಣಗಳಿಗೆ ಸಲೀಂ ಅವರನ್ನು ಸ್ವಾಗತಿಸಿ ಸಾವಿರಾರು ಪೋಸ್ಟ್‌ ಗಳು ಬಂದಿವೆ. ಬಹುತೇಕರು ಸಲೀಂ ಅವರು ಬಂದಿರುವ ಹಿನ್ನೆಲೆಯಲ್ಲಿ ನಗರದ ರಸ್ತೆ ಸಂಚಾರ ಸಮಸ್ಯೆಗಳಿಗೆ ಬ್ರೇಕ್ ಬೀಳಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
    ಸಲಹೆಗಳಿಗೂ ಕೊರತೆಯೇನಿಲ್ಲ.ಬಹುತೇಕರು ಸಂಚಾರಿ ಪೊಲೀಸ್ ಸಂಪನ್ಮೂಲ ಸಂಗ್ರಹ ಇಲಾಖೆಯಲ್ಲ. ಸಂಚಾರಿ ಪೊಲೀಸರು ಸುಗಮ ಸಂಚಾರ ವ್ಯವಸ್ಥೆಗೆ ಗಮನ ಹರಿಸುವ ಬದಲು ದಂಡ ವಸೂಲಿ ಗುರಿಯಾಗಿಸಿಕೊಂಡಿದ್ದಾರೆ.ಸಿಗ್ನಲ್ ಸೇರಿ ಕೆಲ ಪ್ರಮುಖ ರಸ್ತೆಗಳಲ್ಲಿ ಸಂಚಾರಿ ಪೊಲೀಸರು ಮರಗಳ ಮರೆಯಲ್ಲಿ, ಗೋಡೆ ಪಕ್ಕದಲ್ಲಿ, ವಿದ್ಯುತ್ ಕಂಬಗಳ ಮರೆಯಲ್ಲಿ ಅವಿತಿರುತ್ತಾರೆ.ವಾಹನ ಸವಾರರು ಸಂಚಾರಿ ನಿಯಮ ಉಲ್ಲಂಘನೆ ಮಾಡುವುದನ್ನೇ ಕಾಯುತ್ತಿದ್ದು‌ ತಕ್ಷಣವೇ ದಂಡ ವಿಧಿಸುತ್ತಾರೆ.ಮೊದಲು ಇದನ್ನು ನಿಯಂತ್ರಿಸಿ. ಸಂಚಾರಿ ಪೊಲೀಸರು ವಾಹನ ಸವಾರರಿಗೆ ಕಾಣುವಂತೆ ನಿಂತರೆ ಸಾಕು ಸಂಚಾರಿ ನಿಯಮ ಉಲ್ಲಂಘನೆ ಶೇ 80ರಷ್ಟು ಕಡಿಮೆಯಾಗಲಿದೆ ಎಂದು ಹೇಳಿದ್ದಾರೆ.
    ಹಾಗೆಯೇ ರಸ್ತೆಗಳಲ್ಲಿ ,ಹೋಟೆಲ್, ವಾಣಿಜ್ಯ ಸಮುಚ್ಚಯಗಳ ಬಳಿ ಪಾರ್ಕಿಂಗ್ ದೊಡ್ಡ ಸಮಸ್ಯೆ. ಇಲ್ಲಿ ವಾಹನಗಳನ್ನು ಅಡ್ಡಾದಿಡ್ಡಿ ನಿಲ್ಲಿಸುತ್ತಾರೆ. ಸಂಚಾರಿ ಪೊಲೀಸರು ಸಿಗ್ನಲ್ ಗಳಲ್ಲಿ ದಂಡ ವಸೂಲಿಗೆ ಕಾಯದೆ ಈ ಕಡೆ ಗಮನ ಹರಿಸಿದರೆ ಸಂಚಾರ ಸಮಸ್ಯೆಗೆ ದೊಡ್ಡ ಪರಿಹಾರ ಸಿಗಲಿದೆ ಎಂದು ಸಲಹೆ ಮಾಡಿದ್ದಾರೆ.
    ಈ ಎಲ್ಲವೂಗಳಿಗೆ ಪ್ರತಿಕ್ರಿಯೆ ನೀಡಿರುವ ಸಲೀಂ ಈ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಿದ್ದಾರೆ.ಸಿಗ್ನಲ್ ಗಳಲ್ಲಿ ದಂಡ ವಸೂಲಿಗೆ ಕಾಯುವ ಸಂಚಾರಿ ಪೊಲೀಸರ ಸಂಖ್ಯೆ ಕಡಿಮೆಯಾಗಿದೆ.ವಿಮಾನ ನಿಲ್ದಾಣ ರಸ್ತೆಯಲ್ಲಿ ವಾಹನ ದಟ್ಟಣೆಯ ಅವಧಿಯಲ್ಲಿ ಸರಕು ಸಾಗಾಣಿಕೆಯ ಭಾರಿ ವಾಹನಗಳ ನಿಷೇಧ ಜನ ಮೆಚ್ಚುಗೆ ಗಳಿಸಿದೆ.ಈ ಮೂಲಕ ಉತ್ತಮ ಆರಂಭ ಪಡೆದಿರುವ ಟ್ರಾಫಿಕ್ ಸಲೀಂ ಬೆಂಗಳೂರು ಜನರ ನಿರೀಕ್ಷೆ ಹುಸಿಗೊಳಿಸದಿರಲಿ ಎನ್ನುವುದು ವಾರ್ತಾಚಕ್ರ ದ ಹಾರೈಕೆ…

    Verbattle
    Verbattle
    Verbattle
    ವಾಣಿಜ್ಯ ವ್ಯಾಪಾರ
    Share. Facebook Twitter Pinterest LinkedIn Tumblr Email WhatsApp
    Previous Articleಒಡನಾಡಿಗೆ ಹಣದ ಆಮಿಷ!
    Next Article ಸುಗಮ ಸಂಚಾರಕ್ಕೆ ಸಲೀಂ ಸೂತ್ರ
    vartha chakra
    • Website

    Related Posts

    ಸಚಿವ ಬೈರತಿ ಸುರೇಶ್ ಕಚೇರಿಯಲ್ಲಿ ಕಳ್ಳತನ.

    ಫೆಬ್ರವರಿ 10, 2026

    ಬೆಂಗಳೂರು ಮೆಟ್ರೋ ದರ ಏರಿಕೆ, ಕೇಂದ್ರ – ರಾಜ್ಯ ಸರ್ಕಾರದ ನಡುವೆ ತೀವ್ರಗೊಂಡ ಜಿದ್ದಾಜಿದ್ದಿ

    ಫೆಬ್ರವರಿ 10, 2026

    ನಮ್ಮ ಮೆಟ್ರೋ ದರ ಏರಿಕೆ ತಡೆಹಿಡಿದಿದ್ದು ರಾಜ್ಯ ಸರ್ಕಾರ; ಕೇಂದ್ರದ ಪತ್ರಕ್ಕೆ ಬೆಲೆಯಿಲ್ಲ: ಡಿಸಿಎಂ ಡಿ.ಕೆ. ಶಿವಕುಮಾರ್

    ಫೆಬ್ರವರಿ 10, 2026

    Comments are closed.

    Verbattle
    ವಿಭಾಗಗಳು
    • Trending
    • Viral
    • ಅಂಕಣ
    • ಅಂತಾರಾಷ್ಟ್ರೀಯ
    • ಅಪರಾಧ
    • ಆರೋಗ್ಯ
    • ಕಲೆ
    • ಕಾನೂನು
    • ಕಾಮಗಾರಿ
    • ಕ್ರೀಡೆ
    • ಗಾಂಧಿ ಜಯಂತಿ
    • ಗೃಹಲಕ್ಷ್ಮಿ
    • ಗ್ಯಾರಂಟಿ ಯೋಜನೆ
    • ಚುನಾವಣೆ
    • ಚುನಾವಣೆ 2024
    • ಡಿ.ಕೆ.ಶಿವಕುಮಾರ್
    • ತಂತ್ರಜ್ಞಾನ
    • ಧಾರ್ಮಿಕ
    • ಪ್ರಚಲಿತ
    • ಬಂಧನ
    • ಬೆಂಗಳೂರು
    • ಮತ್ತಷ್ಟು
    • ಮನರಂಜನೆ
    • ಮಾಹಿತಿ
    • ಮಾಹಿತಿ
    • ಮುಖ್ಯಮಂತ್ರಿಗಳು
    • ರಾಜಕೀಯ
    • ರಾಜ್ಯ
    • ರಾಷ್ಟ್ರೀಯ
    • ವಾಣಿಜ್ಯ
    • ವಾರ್ತಾಚಕ್ರ ವಿಶೇಷ
    • ವಿಜ್ಞಾನ
    • ವಿಶೇಷ ಸುದ್ದಿ
    • ವಿಶ್ಲೇಷಣೆ
    • ವ್ಯಕ್ತಿಚಿತ್ರ
    • ಶಿಕ್ಷಣ
    • ಸಂಚಾರ
    • ಸಮಾಜ
    • ಸಮೂಹ ಶಕ್ತಿ
    • ಸರ್ಕಾರ
    • ಸಾಹಿತ್ಯ
    • ಸಿನೆಮ
    • ಸುದ್ದಿ
    • ಹವಾಮಾನ
    • Facebook
    • Twitter
    • YouTube
    ಅದನ್ನು ಕಳೆದುಕೊಳ್ಳಬೇಡಿ

    ಓಶೋ ರಜನೀಶ್: ವಿವಾದಗಳ ನಡುವಿನ ‘ಮಹಾನ್ ಸಮ್ಮೋಹಕ’ ಮತ್ತು ಅತಿಮಾನುಷ ಪ್ರಭೆ

    ಸಚಿವ ಬೈರತಿ ಸುರೇಶ್ ಕಚೇರಿಯಲ್ಲಿ ಕಳ್ಳತನ.

    ಬೆಂಗಳೂರು ಮೆಟ್ರೋ ದರ ಏರಿಕೆ, ಕೇಂದ್ರ – ರಾಜ್ಯ ಸರ್ಕಾರದ ನಡುವೆ ತೀವ್ರಗೊಂಡ ಜಿದ್ದಾಜಿದ್ದಿ

    ನಮ್ಮ ಮೆಟ್ರೋ ದರ ಏರಿಕೆ ತಡೆಹಿಡಿದಿದ್ದು ರಾಜ್ಯ ಸರ್ಕಾರ; ಕೇಂದ್ರದ ಪತ್ರಕ್ಕೆ ಬೆಲೆಯಿಲ್ಲ: ಡಿಸಿಎಂ ಡಿ.ಕೆ. ಶಿವಕುಮಾರ್

    Quick Links
    • About Us
    • Privacy Policy
    • Terms & Conditions
    • Contact Us 
    Latest Comments
    • Cqubeg ರಲ್ಲಿ 15ನೇ ವಿಧಾನಸಭೆ ಅಂತ್ಯ – ಮತ್ತೆ ಗೆದ್ದು ಬರಲು ಶಾಸಕರ ಪಣ
    • LinwoodGah ರಲ್ಲಿ ಆಂಧ್ರ ಮುಖ್ಯಮಂತ್ರಿ ಹೆಸರಲ್ಲಿ ವಂಚನೆ
    • LeonardReawn ರಲ್ಲಿ ಯುಗಾದಿ ಮಾಂಸದ ಆಸೆಯಲ್ಲಿದ್ದವರಿಗೆ ಉಂಡೇನಾಮ | Ugadi
    Latest Kannada News

    ಓಶೋ ರಜನೀಶ್: ವಿವಾದಗಳ ನಡುವಿನ ‘ಮಹಾನ್ ಸಮ್ಮೋಹಕ’ ಮತ್ತು ಅತಿಮಾನುಷ ಪ್ರಭೆ

    ಫೆಬ್ರವರಿ 11, 2026

    ಸಚಿವ ಬೈರತಿ ಸುರೇಶ್ ಕಚೇರಿಯಲ್ಲಿ ಕಳ್ಳತನ.

    ಫೆಬ್ರವರಿ 10, 2026

    ಬೆಂಗಳೂರು ಮೆಟ್ರೋ ದರ ಏರಿಕೆ, ಕೇಂದ್ರ – ರಾಜ್ಯ ಸರ್ಕಾರದ ನಡುವೆ ತೀವ್ರಗೊಂಡ ಜಿದ್ದಾಜಿದ್ದಿ

    ಫೆಬ್ರವರಿ 10, 2026
    Connect With Us
    • Facebook
    • Twitter
    • YouTube
    Copyright © 2023 Vartha Chakra
    • ರಾಜ್ಯ
    • ರಾಷ್ಟ್ರೀಯ
    • ಅಪರಾಧ
    • ರಾಜಕೀಯ
      • ಚುನಾವಣೆ 2024
    • ಜನಪ್ರಿಯ
    • ಬೆಂಗಳೂರು
    • ಅಂತಾರಾಷ್ಟ್ರೀಯ
    • ವಾಣಿಜ್ಯ
    • ಸಿನೆಮ
    • ಕ್ರೀಡೆ
    • Trending
    • Videos
    • ಮತ್ತಷ್ಟು
      • ಆರೋಗ್ಯ
      • ಕಲೆ
      • ತಂತ್ರಜ್ಞಾನ
      • ಧಾರ್ಮಿಕ
      • ವಾರ್ತಾಚಕ್ರ ವಿಶೇಷ
      • ವಿಜ್ಞಾನ
      • ವಿಶೇಷ ಸುದ್ದಿ
      • ಶಿಕ್ಷಣ
      • ಸಮಾಜ
      • ಸಮೂಹ ಶಕ್ತಿ
      • ಸಾಹಿತ್ಯ

    Type above and press Enter to search. Press Esc to cancel.