ಬೆಂಗಳೂರು – ಕನ್ನಡದಲ್ಲಿ ತಮ್ಮದೆ ಛಾಪು ಮೂಡಿಸಿ ಬಾಲಿವುಡ್ ಮತ್ತು ದಕ್ಷಿಣ ಭಾರತದ ಸಿನೆಮಾ ರಂಗದಲ್ಲಿ ಮಿನುಗುತ್ತಿರುವ ರಶ್ಮಿಕಾ ಮಂದಣ್ಣ ಅವರನ್ನು ಕನ್ನಡ ಸಿನಿಮಾದಿಂದ ಬ್ಯಾನ್ ಮಾಡಲಾಗುತ್ತಿದೆಯಂತೆ ಯಾಕೆ ಗೊತ್ತಾ..ಈ ಸ್ಟೋರಿ ನಾ ನೋಡಿ ಬಾಲಿವುಡ್ ನಲ್ಲಿ ಪಿಡುಗಾಗಿ ಪರಿಣಮಿಸಿರುವ ಬಹಿಷ್ಕಾರ ಎಂಬ ಕೆಟ್ಟ ಚಾಳಿ ಇದೀಗ ಸ್ಯಾಂಡಲ್ ವುಡ್ ಗೂ ಕಾಲಿಡತೊಡಗಿದೆ.
ಕ್ಷುಲ್ಲಕ ಕಾರಣಗಳಿಗಾಗಿ ಕಲಾವಿದರ ಬಹಿಷ್ಕಾರ, ಸಿನಿಮಾಗಳ ಬಹಿಷ್ಕಾರದಂತಹ ಸುದ್ದಿಗಳು ಇತ್ತೀಚೆಗೆ ಬೆಳಕಿಗೆ ಬರುತ್ತಿದ್ದು,ಅಪಾಯಕಾರಿಯಾದ ಬೆಳವಣಿಗೆಯಾಗಿದೆ. ಸಂವಿಧಾನ ವಿರೋಧಿಯಾದ ಈ ಬೆಳವಣಿಗೆ ನಾಗರಿಕ ಸಮಾಜಕ್ಕೆ ಅಪಾಯಕಾರಿ.
ಈ ಬಹಿಷ್ಕಾರ ಸ್ಯಾಂಡಲ್ ವುಡ್ ನಲ್ಲಿ ಇದೀಗ ದೊಡ್ಡ ಪ್ರಮಾಣದಲ್ಲಿ ಸದ್ದು ಮಾಡುತ್ತಿದೆ.ಅದೂ ಒಂದು ಕಾಲದ ಕನ್ನಡದ ಯಶಸ್ವಿ ಸಿನಿಮಾ ಕಿರಿಕ್ ಪಾರ್ಟಿ ಚಿತ್ರದ ಮೂಲಕ ಬಣ್ಣದ ಬದುಕು ಆರಂಭಿಸಿದ ನಟಿ ರಶ್ಮಿಕಾ ಮಂದಣ್ಣ ವಿರುದ್ಧ ಇದೀಗ ಬಹಿಷ್ಕಾರದ ಸದ್ದು ಕೇಳಿಬಂದಿದೆ.
ಕಿರಿಕ್ ಪಾರ್ಟಿಯ ಈ ನಟಿ ತಮ ಸಹಜ ಅಭಿನಯ, ಮುಗ್ಧ ಸೌಂದರ್ಯದ ಮೂಲಕ ಚಿತ್ರ ರಸಿಕರ ಮನಗೆದ್ದು,ಈಗ ಬಾಲಿವುಡ್ ಮತ್ತು ದಕ್ಷಿಣ ಭಾರತದ ಟಾಪ್ ನಟಿಯರಲ್ಲಿ ಒಬ್ಬರಾಗಿದ್ದಾರೆ.
ಯಾವುದೇ ಗಾಡ್ ಫಾದರ್, ಸಿನಿಮಾ ಜಗತ್ತಿನ ಹಿನ್ನೆಲೆ ಇಲ್ಲದೆ ಸ್ವಂತ ಪರಿಶ್ರಮದಿಂದ ಉನ್ನತ ಸ್ಥಾನಕ್ಕೇರಿದ ಈ ನಟಿಯನ್ನು ಬಹಿಷ್ಕರಿಸಬೇಕೆಂಬ ಆಗ್ರಹ ಕೇಳಿಬಂದಿದೆ.
ವ್ಯವಸ್ಥೆಯಲ್ಲಿ ಈ ರೀತಿಯಲ್ಲಿ ಯಾರನ್ನೂ ಯಾರೂ ಬಹಿಷ್ಕರಿಸಲು ಅಥವಾ ನಿಷೇಧಿಸಲು ಸಾಧ್ಯವಿಲ್ಲ. ಇಂತಹ ಅಧಿಕಾರವಿರುವುದ ಸಂವಿಧಾನದತ್ತವಾಗಿ ಬಂದಿರುವ ಕೋರ್ಟ್ ಗೆ ಮಾತ್ರ ಇದನ್ನು ಮೀರಿ ಯಾರಾದರೂ ಬಹಿಷ್ಕಾರ ಅಥವಾ ನಿಷೇಧ ಹೇರತ್ತಾರೆ ಅಂದರೆ ಅದು ಕಾನೂನು ಬಾಹಿರ ಸಂವಿಧಾನ ವಿರೋಧಿ ಚಟುವಟಿಕೆಯಾಗಲಿದೆ.
ಪ್ರಜಾತಂತ್ರ ವ್ಯವಸ್ಥೆಯಲ್ಲಿ ಇದು ಶಿಕ್ಷಾರ್ಹ ಅಪರಾಧ.
ಇಷ್ಟಕ್ಕೂ ರಶ್ಮಿಕಾ ಮಂದಣ್ಣ ಅವರನ್ನು ಕನ್ನಡ ಚಿತ್ರರಂಗದಿಂದ ಯಾಕೆ ಬ್ಯಾನ್ ಮಾಡಲಾಗುತ್ತಿದೆ. ಆಕೆ ಅಂತಹ ಘನಘೋರವಾದ ಯಾವ ತಪ್ಪು ಮಾಡಿದ್ದಾರೆ ಅಂತಾ ಕೇಳ್ತೀರಾ.
ಅದೇನಪ್ಪಾ ಅಂತಹದು ಅಂದ್ರೆ ಕನ್ನಡ ಚಿತ್ರರಂಗದ ಸೆನ್ಸೇಷನ್ ಸಿನಿಮಾ ಕಾಂತಾರಾ ಬಗ್ಗೆ ನಿಮಗೆಲ್ಲರಿಗೂ ಗೊತ್ತೇ ಇದೆ.ಇದು ಸಿನೆಮಾ ಜಗತ್ತಿನಲ್ಲಿ ಮಾಡಿದ ದಾಖಲೆಯೂ ನಿಮಗೆ ಗೊತ್ತು.ಈ ಸಿನಿಮಾ ಬಿಡುಗಡೆಯಾಗಿ ಎರಡು ವಾರವಾಗಿತ್ತಷ್ಟೇ ಸುದ್ದಿ ಮಿತ್ರರು ಸುದ್ದಿಗಾಗಿ ಈ ಸಿನಿಮಾ ಬಗ್ಗೆ ಅಭಿಪ್ರಾಯ ಕೇಳ್ತಾ ಇದ್ದರು.ಅದೇ ರೀತಿಯಲ್ಲಿ ರಶ್ಮಿಕಾ ಅವರನ್ನು ಕೇಳಿದ್ದಾರೆ.ಅದಕ್ಕವರು ನಾನು ಸಿನಿಮಾ ನೋಡಿಲ್ಲ ಎಂದಿದ್ದಾರೆ ಇಷ್ಟೇ ನೋಡಿ ಅವರ ತಪ್ಪು ಇದಕ್ಕಾಗಿ
ಅವರು ಕೆಲವರ ಕೆಂಗಣ್ಣಿಗೆ ಗುರಿಯಾಗಿದ್ದಲ್ಲದೇ ಸಾಕಷ್ಟು ಟ್ರೋಲ್ಗೆ ಒಳಗಾಗಿದ್ದರು.ಅವರಿಗೆ ಬ್ಯಾನ್ ಬೆದರಿಕೆ ಹಾಕಲಾಯಿತು
ಈಗ ಅವರು ಇದಕ್ಕೆ ಇನ್ನಷ್ಟು ಮಾಹಿತಿ ನೀಡಿದ್ದಾರೆ.ನನ್ನ ಮಾತೃಭಾಷೆ ಕನ್ನಡ ಸಿನಿಮಾಗಳ ಬಗ್ಗೆ ನನಗೆ ಪ್ರೀತಿ ಇದೆ.ಕಾಂತಾರಾ ಸಿನಿಮಾ ಬಿಡುಗಡೆಯಾದ ಎರಡೇ ದಿನಕ್ಕೆ ಕಾಂತಾರ ಸಿನಿಮಾ ನೋಡಿದ್ರಾ ಎಂದು ಕೇಳಿದ್ದರು. ಆಗ ನೋಡಿರಲಿಲ್ಲ ಎಂದಿದ್ದೆ. ಆದರೆ ನಂತರದಲ್ಲಿ ಕಾಂತಾರ ಸಿನಿಮಾ ನೋಡಿದ್ದೇನೆ ಬಹಳ ಚೆನ್ನಾಗಿದೆ ಎಂದು ರಕ್ಷಿತ್ ಶೆಟ್ಟಿ ಅವರಿಗೆ ಮೆಸೇಜ್ ಮಾಡಿದ್ದೆ.ಅದಕ್ಕೆ ಅವರು ಧನ್ಯವಾದ ಎಂದು ರಿಪ್ಲೈ ಮಾಡಿದ್ದರು ಎಂದು ತಿಳಿಸಿದ್ದಾರೆ
ಕನ್ನಡ ಸಿನಿಮಾಗಳ ಬಗ್ಗೆ ನನಗೆ ಸದಾ ಪ್ರೀತಿ ಇದ್ದೆ ಇರುತ್ತದೆ. ಆದರೆ ಸತ್ಯಾಂಶ ತಿಳಿದುಕೊಳ್ಳದೇ ಗಾಳಿ ಸುದ್ದಿಗಳನ್ನು ಹಬ್ಬಿಸಬೇಡಿ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕೊಡಗಿನ ಕುವರಿ ರಶ್ಮಿಕಾ ಅವರ ಬದುಕಿನ ಮುಗಿದು ಹೋದ ಅಧ್ಯಾಯವೊಂದನ್ನು ದೃಷ್ಟಿಯಲ್ಲಿಟ್ಟುಕೊಂಡು ಯಾರೋ ಕೆಲವರು ಇಂತಹ ಕುಹಕ ಮಾಡುತ್ತಿದ್ದಾರೆನ್ನಬಹುದು.ಜೊತೆಗೆ ಈಕೆಗೆ ಕೊಡಗಿನವರನ್ನು ಬಿಟ್ಟರೆ ಬೇರೆ ಯಾರೂ ಬೆಂಬಲಿಸುವುದಿಲ್ಲ ಎಂಬ ಉಡಾಫೆಯೂ ಇರಬಹುದು. ಆದರೆ ಕಲಾವಿದರು ಯಾವಾಗಲೂ ಪ್ರದೇಶ, ಭಾಷೆಗಳೆಂಬ ಎಲ್ಲೆಯನ್ನು ಮೀರಿದವರು,ಅವರ ಜಾತಿ, ಧರ್ಮ, ಪ್ರದೇಶ ಎಲ್ಲವೂ ಕಲಾವಿದ ಎಂಬ ಸಾಮಾನ್ಯ ಜ್ಞಾನವೂ ಇಲ್ಲದೆ ವರ್ತಿಸುವ ಇಂತಹವರನ್ನು ಎದುರಿಸಲು ದೊಡ್ಡ ಪಡೆ ಬೇಕಿಲ್ಲ.ವೃತ್ತಿಯ ಬಗೆಗಿನ ತಮ್ಮ ಬದ್ಧತೆ ಸಾಕು.
ಹಿಂದೊಮ್ಮೆ ಪುಷ್ಪ ಸಿನಿಮಾ ವಿವಾದದಲ್ಲೂ ರಶ್ಮಿಕಾ ಅವರ ಹೆಸರು ಥಳಕು ಹಾಕಿಕೊಂಡು ಬ್ಯಾನ್ ನ ಬೆದರಿಕೆ ಕೇಳಿಬಂದಿತ್ತು.ಆಗ ಅವರ ಸಹ ನಟರಾಗಿದ್ದ ಕನ್ನಡದ ಪ್ರಜ್ಞಾವಂತ ನಟ ಡಾಲಿ ಧನಂಜಯ ಅವರ ಸಕಾಲಿಕ ಮಧ್ಯಪ್ರವೇಶದಿಂದ ವಿವಾದ ತಿಳಿಯಾಗಿತ್ತು.
ಇಲ್ಲಿ ರಶ್ಮಿಕಾ ವಿಷಯ ಮಾತ್ರವಲ್ಲ ಈ ಹಿಂದೆ ನಿರ್ಮಾಪಕ ಎಸ್.ನಾರಾಯಣ್ ಅವರೊಂದಿನ ವಿವಾದದ ಹಿನ್ನೆಲೆಯಲ್ಲಿ ದುನಿಯಾ ವಿಜಿ,ಶೃತಿ ಹರಿಹರನ್ ಇತ್ತೀಚಿಗೆ ಜೊತೆ ಜೊತೆಯಲಿ’ ಧಾರಾವಾಹಿಯಿಂದ ಹೊರಬಿದ್ದ ಬಳಿಕ ನಟ ಅನಿರುದ್ಧ ಅವರನ್ನು ಕಿರುತೆರೆಯಿಂದ ತಾತ್ಕಾಲಿಕವಾಗಿ ಬಹಿಷ್ಕರಿಸಲು ಕಿರುತೆರೆ ನಿರ್ಮಾಪಕರ ಸಂಘ ಮನವಿ ಮಾಡಿ ನಂತರದಲ್ಲಿ ಇದೂ ಬಗೆಹರಿದಿದೆ.
ಬಾಲಿವುಡ್ ನಲ್ಲಿ ನಟರು ಹಾಗೂ ಅವರ ಸಿನಿಮಾಗಳಿಗೆ ಬಹಿಷ್ಕಾರ ಹಾಕುವ ಸಂವಿಧಾನ ವಿರೋಧಿ ಚಾಳಿ ಜಾರಿಯಲ್ಲಿದೆ ಇಂತಹ ಚಾಳಿ ಕನ್ನಡ ಚಿತ್ರರಂಗಕ್ಕೂ ಕಾಲಿಟ್ಟಿದ್ದು ವಿಷಾದನೀಯ. ಚಲನಚಿತ್ರ ವಾಣಿಜ್ಯ ಮಂಡಳಿ ಸೇರಿದಂತೆ ಯಾವುದೇ ಸಂಘ ಸಂಸ್ಥೆಗಳು ಶಿಸ್ತು ಕಾಪಾಡುವ ದೃಷ್ಟಿಯಿಂದ ತಮ್ಮದೆ ಆದ ನಿಯಮಗಳನ್ನು ರೂಪಿಸಿಕೊಂಡಿವೆ.ಇದಕ್ಕೆ ಎಲ್ಲರೂ ಸ್ವತಂತ್ರರು ಅದರೆ ಇದರ ಹೆಸರಲ್ಲಿ ಯಾರೂ ಕೂಡಾ ನೆಲದ ನ್ಯಾಯ ಮತ್ತು ಸಂವಿಧಾನದ ಆಶಯಗಳು ಬದಿಗೊತ್ತಿ ನಿಯಮ ರೂಪಿಸಿಕೊಳ್ಳಲು ಸಾಧ್ಯವಿಲ್ಲ. ಈ ದೃಷ್ಟಿಯಿಂದ ಯಾರೂ ಕೂಡಾ ಯಾರನ್ನು ನಿಷೇಧಿಸುವ ಅಥವಾ ಬಹಿಷ್ಕಾರ ಹಾಕುವ ಅಧಿಕಾರ ಹೊಂದಿಲ್ಲ. ಈ ರೀತಿಯಲ್ಲಿ ಯಾರಾದರೂ ಮಾಡಿ ಅದನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಿದರೆ ಅಂತಹವರು ಶಿಕ್ಷೆಗೆ ಒಳಪಡುವುದು ನಿಶ್ಚಿತ. ಇದು ಇನ್ನೂ ಸರಳವಾಗಿ ಹೇಳಬೇಕೆಂದರೆ ಯಾವುದೋ ಗ್ರಾಮದಲ್ಲಿ ಜನರು ಇದು ತಮ್ಮ ಗ್ರಾಮ ಇಲ್ಲಿ ಇಂತಹ ನಿಯಮ ಇರಬೇಕೆಂದು ಹೇಳಿ ಅವುಗಳ ಆಧಾರದಲ್ಲಿ ಯಾರಿಗೋ,ಯಾವುದೋ ಕಾರಣಕ್ಕೆ ಬಹಿಷ್ಕಾರ ಹಾಕುವುದು ಹೇಗೆ ಕಾನೂನು ಬಾಹಿರವಾಗಲಿದೆಯೋ ಇದೂ ಕೂಡ ಅಷ್ಟೇ.
ಈ ಅಂಶಗಳನ್ನು ಗಮನಿಸಿದಾಗ, ಯಾರು ಎನು ಬೇಕಾದರೂ ಮಾಡಬಹುದಾ..? ಬ್ಯಾನ್ ಮಾಡುವುದು ಅಷ್ಟು ಸುಲಭವಾ ಎಂಬ ಪ್ರಶ್ನೆ ಉದ್ಭವಿಸುತ್ತದೆ ಹೀಗಾಗಿ ಸರ್ಕಾರ ಇಂತಹ ಚಟುವಟಿಕೆಗಳ ಮೇಲೆ ನಿಗಾ ವಹಿಸಬೇಕಾಗುತ್ತದೆ.
ರಶ್ಮಿಕಾ ಮಂದಣ್ಣ ಬ್ಯಾನ್ ಅಂತೆ..! ಯಾಕಂತೆ..? ಹೇಗಂತೆ..?
Previous Articleಲವ್ ಜಿಹಾದ್ ತಡೆಗೆ ವಿಶೇಷ ತಂಡ
Next Article ಅತ್ಯಾಚಾರ ಆರೋಪದಡಿ ಹೊಡೆದು ಕೊಂದರೆ?